ನೆಲದ ಮೇಲೆಯೇ ಚಿಕಿತ್ಸೆ: ಟಿವಿ 9 ವರದಿ ನೋಡಿ ಎಚ್ಚೆತ್ತ ಗದಗ ಆರೋಗ್ಯ ಇಲಾಖೆ

ಗದಗ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆಲದ ಮೇಲೆಯೇ ಚಿಕಿತ್ಸೆ ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ 9 ಪ್ರಸಾರ ಮಾಡಿದ್ದ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಎಚ್ಚೆತ್ತಿರುವ ಆರೋಗ್ಯ ಇಲಾಖೆಯು ಇಬ್ಬರು ವೈದ್ಯರ ನಿಯೋಜನೆ ಮಾಡಿದ್ದು, ಹೆಚ್ಚಿನ ಬೆಡ್ ಮತ್ತು ಕಾಟ್​ಗಳ ವ್ಯವಸ್ಥೆ ಮಾಡಿದೆ. ಟಿವಿ 9 ವರದಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಾಲೂಕಾ ಆಸ್ಪತ್ರೆಯ ಕರ್ಮಕಾಂಡವನ್ನು ನೆಲದ ಮೇಲೆಯೇ ಚಿಕಿತ್ಸೆ, ತಾಲೂಕು ಆಸ್ಪತ್ರೆಯಲ್ಲಿ ಇದೆಂಥಾ ಅವಸ್ಥೆ! ಶೀರ್ಷಿಕೆಯಡಿ ಸುದ್ದಿ […]

ನೆಲದ ಮೇಲೆಯೇ ಚಿಕಿತ್ಸೆ: ಟಿವಿ 9 ವರದಿ ನೋಡಿ ಎಚ್ಚೆತ್ತ ಗದಗ ಆರೋಗ್ಯ ಇಲಾಖೆ

Updated on: Dec 04, 2019 | 3:10 PM

ಗದಗ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆಲದ ಮೇಲೆಯೇ ಚಿಕಿತ್ಸೆ ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ 9 ಪ್ರಸಾರ ಮಾಡಿದ್ದ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಎಚ್ಚೆತ್ತಿರುವ ಆರೋಗ್ಯ ಇಲಾಖೆಯು ಇಬ್ಬರು ವೈದ್ಯರ ನಿಯೋಜನೆ ಮಾಡಿದ್ದು, ಹೆಚ್ಚಿನ ಬೆಡ್ ಮತ್ತು ಕಾಟ್​ಗಳ ವ್ಯವಸ್ಥೆ ಮಾಡಿದೆ. ಟಿವಿ 9 ವರದಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಾಲೂಕಾ ಆಸ್ಪತ್ರೆಯ ಕರ್ಮಕಾಂಡವನ್ನು ನೆಲದ ಮೇಲೆಯೇ ಚಿಕಿತ್ಸೆ, ತಾಲೂಕು ಆಸ್ಪತ್ರೆಯಲ್ಲಿ ಇದೆಂಥಾ ಅವಸ್ಥೆ! ಶೀರ್ಷಿಕೆಯಡಿ ಸುದ್ದಿ ಪ್ರಸಾರವಾಗಿತ್ತು. ಕೈಯಲ್ಲಿ ಡ್ರಿಪ್ ಬಾಟಲ್ ಹಿಡಿದು ವೃದ್ಧೆಯ ಪರದಾಟ, ನೆಲದ ಮೇಲೆ, ಕಾರಿಡಾರ್​ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರ ಬಗ್ಗೆ ಟಿವಿ 9ನಲ್ಲಿ ೨೮ ನವೆಂಬರ್ ರಂದು ವಿಸ್ತೃತ ವರದಿ ಪ್ರಕಟವಾಗಿತ್ತು.

Published On - 3:09 pm, Wed, 4 December 19