ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ: ರಾಸುಗಳಿಗೆ ಭಾರೀ ಡಿಮ್ಯಾಂಡ್! ಜೋಡೆತ್ತುಗಳ ಬೆಲೆ ಕೇಳಿ ಕಂಗಾಲಾದ ರೈತರು

ಮುಂಗಾರು ಬೆಳೆ ಬಾರದ ಕಾರಣ ಅನ್ನದಾತರು ಕಂಗಾಲಾಗಿದ್ದಾರೆ. ಇದ್ದ ಎತ್ತುಗಳಿಗೆ ಮೇವು ಕೊರತೆಯಿಂದಾಗಿ ಕೈಗೆ ಬಂದ‌ ಬೆಲೆಗೆ ಮಾರಾಟ ಮಾಡಿದ್ರು. ಈಗ ಮುಂಗಾರು ಮಳೆ ಸುರಿಯುತ್ತಿದೆ. ಹೀಗಾಗಿ ರೈತರ‌ ಮುಖದಲ್ಲಿ ಮಂದಹಾಸ ಮೂಡಿದೆ‌. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಬಿತ್ತನೆ ಆರಂಭವಾಗಿವೆ. ಹೀಗಾಗಿ ಎತ್ತುಗಳ ಖರೀದಿ ಭರಾಟೆ ಜೋರಾಗಿದೆ. ಆದ್ರೆ ಗದಗ ಎಪಿಎಂಸಿ ಆವರಣದಲ್ಲಿ ನಡೆಯುವ ಜಾನುವಾರ ಸಂತೆಯಲ್ಲಿ ಜೋಡೆತ್ತುಗಳ ಬೆಲೆ ಕೇಳಿ ರೈತರು ಕಂಗಾಲಾಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ: ರಾಸುಗಳಿಗೆ ಭಾರೀ ಡಿಮ್ಯಾಂಡ್! ಜೋಡೆತ್ತುಗಳ ಬೆಲೆ ಕೇಳಿ ಕಂಗಾಲಾದ ರೈತರು
ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ: ರಾಸುಗಳಿಗೆ ಭಾರೀ ಡಿಮ್ಯಾಂಡ್! ಜೋಡೆತ್ತುಗಳ ಬೆಲೆ ಕೇಳಿ ಕಂಗಾಲಾದ ರೈತರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2024 | 10:50 PM

ಗದಗ, ಜೂನ್​ 05: ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಸ್ವಲ್ಪ ಮಾಯವಾಗಿದೆ. ಮುಂಗಾರು ಮಳೆ (rain) ಎಂಟ್ರಿ ಕೊಟ್ಟಿದೆ. ವಾರದ ಹಿಂದೆ ಆದ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ರಾಸುಗಳಿಗೆ (cattle) ಭಾರಿ ಡಿಮ್ಯಾಂಡ್ ಬಂದಿದೆ. ವಾರದ ಹಿಂದೆ ರಾಸುಗಳಿಗೆ ಕೇಳೋರೇ ಇರ್ಲಿಲ್ಲ. ಈಗ ರಾಸುಗಳ ಬೆಲೆ ನ್ಯಾನೋ ಕಾರ್ ಮೀರಿಸುವಂತಿದೆ. ಮುಂಗಾರು ಮಳೆ ರೈತರ ಮುಖದಲ್ಲಿ ಮೂಡಿದ‌ ಮಂದಹಾಸ. ಗರಿಗೆದರಿದ ಕೃಷಿ ಚಟುವಟಿಕೆಗಳು. ರೈತ‌ ಮಿತ್ರ ಜೋಡೆತ್ತುಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.

ಗದಗ ದನಗಳ‌ ಮಾರ್ಕೆಟ್ನಲ್ಲಿ ಜೋಡೆತ್ತುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ‌. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಮುಂಗಾರು ಬೆಳೆ ಬಾರದ ಕಾರಣ ಅನ್ನದಾತರು ಕಂಗಾಲಾಗಿದ್ದಾರೆ. ಇದ್ದ ಎತ್ತುಗಳಿಗೆ ಮೇವು ಕೊರತೆಯಿಂದಾಗಿ ಕೈಗೆ ಬಂದ‌ ಬೆಲೆಗೆ ಮಾರಾಟ ಮಾಡಿದ್ರು. ಆದ್ರೆ, ಈಗ ಮುಂಗಾರು ಮಳೆ ಸುರಿಯುತ್ತಿದೆ. ಹೀಗಾಗಿ ರೈತರ‌ ಮುಖದಲ್ಲಿ ಮಂದಹಾಸ ಮೂಡಿದೆ‌. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಬಿತ್ತನೆ ಆರಂಭವಾಗಿವೆ. ಹೀಗಾಗಿ ಎತ್ತುಗಳ ಖರೀದಿ ಭರಾಟೆ ಜೋರಾಗಿದೆ. ಆದ್ರೆ ಗದಗ ಎಪಿಎಂಸಿ ಆವರಣದಲ್ಲಿ ನಡೆಯುವ ಜಾನುವಾರ ಸಂತೆಯಲ್ಲಿ ಜೋಡೆತ್ತುಗಳ ಬೆಲೆ ಕೇಳಿ ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ಮುಂದುವರಿದ ಮಹಿಳಾ ಕಬಡ್ಡಿ; ಪುರುಷರು ಫಿದಾ! ವಿಡಿಯೋ ಇಲ್ಲಿದೆ

ಜೋಡೆತ್ತುಗಳ ಬೆಲೆ ನ್ಯಾನೋ ಕಾರ್ ಬೆಲೆ ಮೀರಿಸುವಂತಿದೆ. ಜೋಡೆತ್ತುಗಳ ರೇಟ್ 1.20 ರಿಂದ 1.40 ಲಕ್ಷ ರೂ. ಇದೆ. ಮೊದಲು ಮುಂಗಾರು ಬೆಳೆ ಇಲ್ಲದೇ ಕಂಗಾಲಾದ ರೈತರು ಜೋಡೆತ್ತು ರೇಟ್ ಕೇಳಿ ಬೆಚ್ವಿಬಿದ್ದಿದ್ದಾರೆ‌. ಕಳೆದ ವಾರದಲ್ಲಿ 70-80 ಸಾವಿರ ರೂ. ಜೋಡಿ ಇದ್ದ ರಾಸುಗಳು ಬೆಲೆ ಈಗ ಲಕ್ಷದ ಗಡಿ ದಾಟಿದೆ. ಮುಂಗಾರು ಕೈಕೊಟ್ಟ ಕಾರಣ 70-80 ಸಾವಿರ ರೂ. ಮಾರಾಟ ಮಾಡಿದ್ದೇವೆ ಸರ್. ಈಗ 120-140 ಲಕ್ಷ ರೂ. ಜೋಡಿಗೆ ಹೇಳ್ತಾಯಿದ್ದಾರೆ ಅಂತ ರೈತ ಕಂಗಾಲಾಗಿದೆ.

ಗದಗ ಜಾನುವಾರಗಳ ಸಂತೆಯಲ್ಲಿ ವಿವಿಧ ತಳಿಯ ಜೋಡೆತ್ತುಗಳ ಭರಾಟೆ ಜೋರಾಗಿದೆ‌. ಖರೀದಿ ಮಾಡಲು ಬಂದ ರೈತರು ಜೋಡೆತ್ತುಗಳ ರೇಟ್ ಕೇಳಿ ಕಂಗಾಲಾಗಿದ್ದಾರೆ. ಇನ್ನೂ ಮಾರಾಟ ಮಾಡಲು ಬಂದ ರೈತರಿಗೆ ಬಂಪರ ಲಾಭ ಪಡೆಯುತ್ತಿದೆ. ಗದಗ ಜಿಲ್ಲೆ‌ ಮಾತ್ರವಲ್ಲ ಕೊಪ್ಪಳ, ಧಾರವಾಡ, ಹಾವೇರಿ, ಬಾಗಲಕೋಟ ಸೇರಿ ವಿವಿಧ ಜಿಲ್ಲೆಗಳ ರೈತರು ರಾಸುಗಳ ಖರೀದಿ ಮಾರಾಟಕ್ಕೆ ಆಗಮಿಸ್ತಾರೆ.

ಇದನ್ನೂ ಓದಿ: ಗದಗ: ತಲೆ ಮೇಲೆ ಪಟಾಕಿ ಹೊತ್ತುಕೊಂಡು ಪುಂಡಾಟ

ಬರಗಾಲಕ್ಕೆ ಕಂಗಾಲಾಗಿ ಎತ್ತುಗಳು‌ ಮಾರಾಟ ಮಾಡಿದ ರೈತರು‌ ಮತ್ತೆ ಖರೀದಿ ಹೆಣಗಾಡುತ್ತಿದ್ದಾರೆ. ರೈತ ಮಿತ್ರರಿಗೆ ಈಗ ಭಾರಿ ಡಿಮ್ಯಾಂಡ್ ಬಂದಿದೆ. ರಾಸುಗಳ ಖರೀದಿ ಜೊತೆ ಎತ್ತುಗಳ ಅಲಂಕಾರಿಕ ವಸ್ತುಗಳ ಮಾರಾಟದ ಭರಾಟೆಯೂ ಜೋರಾಗಿದೆ. ಮಳೆ ರೈತ ಸಮೂಹದಲ್ಲಿ ಸಂತಸ ತಂದಿದೆ. ಆದ್ರೆ ರಾಸುಗಳ ಬೆಲೆ ಗಗನಕ್ಕೆ ಏರಿದ್ದು, ಸಂಕಷ್ಟದಲ್ಲಿದ್ದ ರೈತರು ರಾಸುಗಳ ಖರೀದಿ ಹೇಗಪ್ಪಾ ಮಾಡೋದು ಅಂತಿದ್ದಾರೆ.

ಅನ್ನದಾತರಿಗೆ ಮಳೆ ಬಂದ್ರೂ ಕಷ್ಟ. ಮಳೆ ಬರದಿದ್ರೂ ಕಷ್ಟವಾಗಿದೆ. ಮುಂಗಾರು ಮಳೆ ರೈತರ ಮುಖದಲ್ಲಿ ಮಂದಹಾಸದ ಜೊತೆಗೆ ಸಂತಸ ಮೂಡಿಸಿದೆ. ರೈತರು ಈಗ ಮಳೆ ಬಂದಿದೆ ಅಂತ ಸಂತಸ ಪಡಬೇಕು ಅನ್ನೋದ್ರಲ್ಲಿ ರಾಸುಗಳ ಬೆಲೆ ರೈತರಿಗೆ ಶಾಕ್ ನೀಡಿದ್ದು ಮಾತ್ರ ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್