Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಟೌನ್​​ಹಾಲ್, ಕೆಆರ್ ಮಾರ್ಕೆಟ್ ಸೇರಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ ಮಳೆ, ಹಾಸನದಲ್ಲಿ ಮೂವರು ಸಾವು

Karnataka Monsoon Rain Updates: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಡಲು, ಗುಡುಗು ಸಹಿತ ಮಳೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಸಿಡಿಲಿಗೆ ಮೂವರು ಬಲಿಯಾಗಿದ್ದಾರೆ. ಮಳೆ ಸಂಬಂಧಿತ ಇನ್ನಷ್ಟು ಅಪ್​ಡೇಟ್ಸ್​ ಇಲ್ಲಿದೆ.

Bengaluru Rains: ಟೌನ್​​ಹಾಲ್, ಕೆಆರ್ ಮಾರ್ಕೆಟ್ ಸೇರಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ ಮಳೆ, ಹಾಸನದಲ್ಲಿ ಮೂವರು ಸಾವು
ಟೌನ್​​ಹಾಲ್, ಕೆಆರ್ ಮಾರ್ಕೆಟ್ ಸೇರಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ ಮಳೆImage Credit source: Twitter
Follow us
Ganapathi Sharma
|

Updated on: Jun 06, 2024 | 6:59 AM

ಬೆಂಗಳೂರು, ಜೂನ್ 6: ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಮಳೆ (Monsoon Rain) ಬುಧವಾರವೂ ಅಬ್ಬರಿಸಿದೆ. ಧಿಡೀರ್ ಮಳೆಯಿಂದ ಬೆಂಗಳೂರಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಯಿತು. ಬೆಂಗಳೂರಿನ ಟೌನ್ ಹಾಲ್, ಕೆಆರ್ ಮಾರ್ಕೆಟ್, ಗಿರಿನಗರ, ವಿಜಯನಗರ, ಚಾಮರಾಜಪೇಟೆ ಸೇರಿ ನಗರದ ಹಲವೆಡೆ ಮಳೆಯಾಯಿತು. ರಸ್ತೆಗಳೆಲ್ಲ ನದಿಯಂತಾಗಿ ಸವಾರರು ಹೈರಾಣಾದರು. ಜೊತೆಗೆ ವ್ಯಾಪಾರಸ್ಥರು ಕೂಡ ಕಂಗಾಲಾದರು. ಅತ್ತ ನೆಲಮಂಗಲದಲ್ಲೂ ಮಳೆ ಅಬ್ಬರಿಸಿದೆ. ಗಾಳಿ ಸಹಿತ ಮಳೆಗೆ ಜನರು ಪರದಾಡಿದರು.

ಬುಧವಾರ ತುಮಕೂರು ‌ಜಿಲ್ಲಾದ್ಯಂತ ಭರ್ಜರಿ ಮಳೆಯಾಗಿದೆ. ಸುಮಾರು 2 ಗಂಟೆ ಕಾಲ ಸುರಿದ ಮಳೆಗೆ ಅಂತರಸನಹಳ್ಳಿ ಅಂಡರ್ ಪಾಸ್ ಜಲಾವೃತ್ತವಾಗಿತ್ತು. ಇದರಿಂದ ಪಾವಗಡ, ಮಧುಗಿರಿ, ಕೊರಟಗೆರೆಗೆ ಹೋಗುವ ವಾಹನಗಳು ಸಿಕ್ಕಿದವು.

ತುಮಕೂರಿನ ಶಿರಾ ಗೇಟ್ ರಸ್ತೆಯಲ್ಲಿ ಬ್ರಿಡ್ಜ್ ಕಾಮಗಾರಿಯಿಂದ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಇದರಿಂದ ನಿವಾಸಿಗಳು ರಾತ್ರಿಯಿಡೀ ಪರದಾಡಿದರು.

ರಾಜಾಜಿನಗರದಲ್ಲಿ ಬುಧವಾರ ರಾತ್ರಿ ಮಳೆ ಸುರಿಯಿತು

ಚಿತ್ರದುರ್ಗದ ಹಲವೆಡೆ ಮಳೆ ಅಬ್ಬರಿಸಿತು. ಹಿರಿಯೂರು ಪಟ್ಟಣದ ಟಿಬಿ ವೃತ್ತದ ರಸ್ತೆ ಮಳೆ ನೀರಿಗೆ ಮುಚ್ಚಿ ಹೋಗಿತ್ತು. ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ತರಕಾರಿಗಳೆಲ್ಲ ಕೊಚ್ಚಿ ಹೋದವು. ಮೊಳಕಾಲ್ಮೂರಿನ ಕೊಂಡ್ಲಹಳ್ಳಿ ಹಳ್ಳದಲ್ಲಿ ಜಿಂಕೆ ಕೊಚ್ಚಿಹೋಗಿತ್ತು. ಸ್ಥಳೀಯರು ಜಿಂಕೆ ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಬೆಂಗಳೂರು: ಮೇಳೈಸಿದ ಮೋಡ, ವಿಡಿಯೋ ನೋಡಿ

ಬಸವೇಶ್ವರ ನಗರದಲ್ಲಿ ರಸ್ತೆ ಮೇಲೆ ಬಿದ್ದ ಮರ

ಸಿಡಿಲು ಬಡಿದು ಮೂವರು ಸಾವು, 15ಕ್ಕೂ ಕುರಿಗಳು ಬಲಿ

ಹಾಸನ ಜಿಲ್ಲೆಯ ಅರಕಲಗೂಡಿನ ದೊಡ್ಡಮಗ್ಗೆಯಲ್ಲಿ ಸಿಡಿಲಿಗೆ ಮುತ್ತಮ್ಮ, ಪುಟ್ಟಮ್ಮ ಎಂಬುವವರರು ಮೃತಪಟ್ಟಿದ್ದಾರೆ. ಹೊಲದಲ್ಲಿ ಜೋಳ ಬಿತ್ತನೆ ಮಾಡುವಾಗ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿದೆ. ವಿಜಯಪುರ ಜಿಲ್ಲೆ ಬಬಲೇಶ್ವರದ ಕಾಖಂಡಕಿ ಗ್ರಾಮದಲ್ಲಿ ಸಿಡಿಲಿಗೆ ಕುರಿಗಾಹಿ ಅಮೋಘ ಸೋಮನಿಂಗ ಕಣಮುಚನಾಳ ಉಸಿರು ಚೆಲ್ಲಿದ್ದಾನೆ. ಕುರಿಗಾಹಿ ಜೊತೆಗೆ 15ಕ್ಕೂ ಹೆಚ್ಚು ಕುರಿಗಳು ಸಹ ಬಲಿಯಾಗಿವೆ.

ಶಿವಮೊಗ್ಗ ಜಿಲ್ಲೆಯ ತಾಲೂಕಿನ ಜಾವಳ್ಳಿ ಗ್ರಾಮದಲ್ಲಿ ಅಂಗಡಿಗೆ ಸಿಡಿಲು ಬಡಿದಿದ್ದು, ವಸ್ತುಗಳು ಸುಟ್ಟು ಕರಕಲಾಗಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ಚಿಂತಾಮಣಿಯ ಈಶ್ವರ ದೇವಸ್ಥಾನ ಹಿಂಭಾಗದ ಮನೆಗೆ ಚರಂಡಿ ನೀರು ನುಗ್ಗಿ ಫಜೀತಿ ಅನುಭವಿಸಿದರು.

ಇದನ್ನೂ ಓದಿ: ಹಾಸನ: ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಸಾವು

ಮಹಾರಾಷ್ಟ್ರದ ಪುಣೆಯಲ್ಲಿ ಮಳೆಯಾಗಿದ್ದು, ನಾಗ್ಪುರ್ ಸಂಪರ್ಕಿಸೋ ರಾಷ್ಟೀಯ ಹೆದ್ದಾರಿ ಜಲಾವೃತವಾಗಿದೆ. ವಾಹನ ಸವಾರರು ಪರದಾಡಿದ್ದಾರೆ. ಇನ್ನೂ ಕೆಲವಡೆ ಮರಗಳು ಬುಡಮೇಲಾಗಿದ್ದು, ಅವಾಂತರವನ್ನೇ ಸೃಷ್ಟಿಸಿದೆ.

ಈಶಾನ್ಯ ರಾಜ್ಯ ಅಸ್ಸಾಂನಲ್ಲೂ ವರುಣಾರ್ಭಟವೂ ಪ್ರವಾಹವನ್ನೇ ಸೃಷ್ಟಿಸಿದೆ. ನೀರಲ್ಲಿ ಮನೆ, ಕಾರು ಮುಳುಗಿವೆ. ಪ್ರವಾಹದಲ್ಲಿ ಸಿಲುಕಿದವರನ್ನ ರಕ್ಷಣೆ ಮಾಡಲಾಗಿದೆ. ಇನ್ನೂ ಹಿಮಾಚಲಪ್ರದೇಶ, ತಮುಳುನಾಡಲ್ಲೂ ಮಳೆ ಅಬ್ಬರಿಸಿದೆ.

ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ