AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗನಲ್ಲಿ ವಿಚಿತ್ರ ಲವ್ ಜಿಹಾದ್: ಪ್ರೀತಿಸಿ ಮದ್ವೆಯಾದ ಯುವತಿಯಿಂದಲೇ ಹಿಂದೂ ಯುವಕನ ಮತಾಂತರಕ್ಕೆ ಯತ್ನ

ಹಿಂದೂ ಯುವತಿಯರನ್ನ ಟಾರ್ಗೆಟ್ ಮಾಡಿ ಲವ್ ಜಿಹಾದ್ ಪ್ರಕರಣಗಳು ಕೇಳಿದ್ದೇವೆ. ಹಿಂದೂ ಯುವತಿಯರು ಅನ್ಯ ಧರ್ಮದ ಯುವಕರನ್ನ ಮದ್ವೆಯಾದಾಗ ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡುವುದನ್ನೂ ಸಹ ಕೇಳಿದ್ದೇವೆ. ಆದ್ರೆ, ಗದಗನಲ್ಲಿ ನಿಖಾ ಮಾಡಿಸೋ ನೆಪದಲ್ಲಿ ಹಿಂದೂ ಯುವಕನ ಧರ್ಮವನ್ನೇ ಚೇಂಜ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪ್ರೀತಿ ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕ, ಈ ಚಕ್ರವ್ಯೂಹದಿಂದ ಬಿಡಿಸಿ ಎಂದು ಬೇಡಿಕೊಳ್ಳುತ್ತಿದ್ದಾನೆ.

ಗದಗನಲ್ಲಿ ವಿಚಿತ್ರ ಲವ್ ಜಿಹಾದ್: ಪ್ರೀತಿಸಿ ಮದ್ವೆಯಾದ ಯುವತಿಯಿಂದಲೇ ಹಿಂದೂ ಯುವಕನ  ಮತಾಂತರಕ್ಕೆ ಯತ್ನ
Gadag Love Jihad
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Jul 16, 2025 | 8:15 PM

Share

ಗದಗ, (ಜುಲೈ 16): ಪ್ರೀತಿಗೆ (Love) ಕಣ್ಣಿಲ್ಲ. ಪ್ರೀತಿ ಮಾಯೆ, ಪ್ರೀತಿಗೆ ಜಾತಿ ಇಲ್ಲಾ ಅಂತಾರೆ. ಆದ್ರೆ, ಇಲ್ಲೊಂದು ಜೋಡಿ ಜಾತಿ, ಮತ, ಪಂತ ಬಿಟ್ಟು ಪ್ರೀತಿ ಮಾಡಿ ರಿಜಿಸ್ಟರ್ ಮದುವೆ (register marriage) ಸಹ ಆಗಿದ್ದಾರೆ. ಆದ್ರೆ, ಮದುವೆ ಬಳಿಕ ಮತಾಂತರ ಆಗಬೇಕೆಂದು ಯುವತಿ ಬೇಡಿಕೆ ಇಟ್ಟ ವಿಚಿತ್ರ ಪ್ರಕರಣ ಗದಗ (Gadag) ನಗರದಲ್ಲಿ ನಡೆದಿದೆ. ಹೌದು.. ಗದಗ-ಬೆಟಗೇರಿಯ ಸೆಟಲ್ಮೆಂಟ್ ಏರಿಯಾದ ವಿಶಾಲಕುಮಾರ್ ವಿಚಿತ್ರ ಲವ್ ಜಿಹಾದ್ (Love Jihad) ಆರೋಪ ಮಾಡಿದ್ದಾನೆ. ನಗರದ ಕುರಟ್ಟಿಪೇಟೆಯ ತಹಸೀನ್ ಹೊಸಮನಿ ಕುಟುಂಬ ವಿರುದ್ಧ ವಿಶಾಲ್ ತನನ್ನು ಬಲವಂತವಾಗಿ ಮತಾಂತರ ಮಾಡಿರುವ ಆರೋಪ ಮಾಡಿದ್ದಾನೆ. ಅಲ್ಲದೇ ಮುಸ್ಲಿಂ ಸಂಪ್ರದಾಯ ಫಾಲೋ ಮಾಡದಿದ್ದಕ್ಕೆ ವಿಚ್ಛೇದನ ನೀಡಲು ತಹಸೀನ್ ಮುಂದಾಗಿದ್ದಾಳೆ ಎಂದು ದೂರಿದ್ದಾರೆ.

ವಿಶಾಲ್, ತಹಸೀನ್ ಕಳೆದು ಮೂರು ವರ್ಷದಿಂದ ಪರಸ್ಪರ ಪ್ರೀತಿಸ್ತಿದ್ರು. ಪ್ರೀತಿ ಪ್ರೇಮಮದ ವಿಷಯವನ್ನ ಮನೆಯವರಿಂದ ಮುಚ್ಚಿಟ್ಟಿದ್ದ ಜೋಡಿ, 2024ರ ನವೆಂಬರ್ 26 ನೇ ತಾರೀಕು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇಬ್ಬರ ಮದ್ವೆ ವಿಚಾರ ತಹಸೀನ್ ಕುಟುಂಬಕ್ಕೆ ಗೊತ್ತಾಗಿದೆ. ಬಳಿಕ ಮುಸ್ಲಿಂ ಸಂಪ್ರದಾಯದಂತೆಯೇ ಮದುವೆಗೆ ಮಾಡಿಕೊಳ್ಳಲು ವಿಶಾಲ್ ಗೆ ತಹಸೀನ್ ಕುಟುಂಬ ದುಂಬಾಲು ಬಿದ್ದಿದಿದೆ. ತಹಸೀನ್, ಆಕೆಯ ತಾಯಿ ಬೇಗಂ ಬಾನು, ತಹಸೀನ್ ಸೋದರ ಮಾವ ಇಬ್ರಾಹಿಂ ಖಾನ್ ದಾವಲ್ ಸಾಬ್ ಮುಸ್ಲಿಂ ನಿಖಾಗೆ ಒತ್ತಾಯ ಮಾಡಿದ್ರು. ಪ್ರೀತಿಸಿದ್ದ ಯುವತಿಗಾಗಿ ಮದುವೆಗೆ ಒಪ್ಪಿಕೊಂಡಿದ್ದ ವಿಶಾಲ್ ಕುಮಾರ್, 2025ರ ಏಪ್ರಿಲ್ 25ರಂದು ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಂಡಿದ್ದ. ನಗರದ ಮುಳಗುಂದ ನಾಕಾ ಬಳಿ ಇರುವ ಉಮರಬೀನ್ ಕತ್ತಾಬ್ ಮಸೀದಿಯಲ್ಲಿ ನಿಖಾ ನಡೆದಿತ್ತು. ಆದ್ರೆ, ವಿಶಾಲ್ ಗೆ ಅರಿವಿಲ್ಲದೇ ನಿಖಾ ನಾಮಾದಲ್ಲಿ ಆತನ ಹೆಸರನ್ನ ವಿರಾಜ್ ಸಾಬ್ ಅಂತಾ ದಾಖಲಿಸಲಾಗಿದ್ಯಂತೆ. ನಿಖಾ ದಫ್ತರ್ ನಲ್ಲಿ ಅಂದ್ರೆ ಮದುವೆಯ ರಿಜಿಸ್ಟರ್ ನಲ್ಲಿ ಬದಲಾದ ಹೆಸರನ್ನ ಉರ್ದುವಿನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ ಲವ್ ಕಹಾನಿ: ಪ್ರಿಯತಮೆ 3 ಮಕ್ಕಳ ತಾಯಿ ಎಂದು ತಿಳಿದು ಯುವಕ ಶಾಕ್

ಮದುವೆಗೂ ಮುಂಚೆಯಿಂದಲೂ ಐದು ಬಾರಿ ನಮಾಜ್ ಮಾಡ್ಬೇಕು ಜೊತೆಗೆ ಸಮಾಜದ ಜಮಾತ್ ಗೆ ಹೋಗಲು ತಹಸೀನ್ ಕುಟುಂಬ ಪೀಡಿಸ್ತಿತ್ತಂತೆ. ಈ ಮಧ್ಯೆ ಮದುವೆಯ ವೀಡಿಯೋ ಸಮಾಜಿಕ ತಾಲತಾಣದಲ್ಲಿ ವೈರಲ್ ಆಗಿ ವಿಶಾಲ್ ಮನೆಯವರಿಗೆ ಮದುವೆ ಬಗ್ಗೆ ಮಾಹಿತಿ ಸಿಕ್ಕಿದೆ. ವಿಶಾಲ್ ನನ್ನ ಕರೆದು ವಿಚಾರಿಸಿದಾಗ ಮದ್ವೆಯಾಗಿರೋ ವಿಷಯ ಗೊತ್ತಾಗಿದೆ. ವಿಶಾಲ್ ಕುಟುಂಬದವರು ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದು, ಅದರಂತೆ ತಹಸೀನ್ ಕುಟುಂಬವರಿಗೆ ತಿಳಿಸಿ ಜೂನ್ 05ರಂದು ಮದ್ವೆ ನಿಗದಿ ಮಾಡಿದ್ದರು. ಆದ್ರೆ, ಆರಂಭದಲ್ಲಿ ಒಪ್ಪಿಗೆ ಸೂಚಿಸಿದ್ದ ತಹಸೀನ್ ಕುಟುಂಬ ಹಿಂದೂ ಸಂಪ್ರದಾಯದ ಮದುವೆಗೆ ನಂತರ ಒಪ್ಪಲಿಲ್ಲವಂತೆ. ಅಲ್ಲದೇ ವಿಶಾಲ್ ಗೆ ಮುಸ್ಲಿಂ ಧರ್ಮವನ್ನೇ ಫಾಲೋ ಮಾಡ್ಕೊಂಡು ಇರುವಂತೆ ಒತ್ತಡ ಹೇರಲಾಗ್ತಿದ್ಯಂತೆ. ಮುಸ್ಲಿಂ ಮತಾಂತರಕ್ಕೆ ಒಪ್ಪಿದಿದ್ದಕ್ಕೆ ತಹಸೀನ್ ದೂರವಾಗುವಂತೆ ಕುಟುಂಬ ಮಾಡಿದೆ ಎಂದು ವಿಶಾಲ್ ಆರೋಪಿಸಿದ್ದಾನೆ.

ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದ್ದು, ಬಲವಂತದ ಮತಾಂತರ ಮಾಡಿ, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ವಿಶಾಲ್ ಮನವಿ ಮಾಡಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಎಂಟ್ರಿಯಾಗಿದ್ದು, ಪ್ರೇಮದ ಹೆಸರಿನಲ್ಲಿ ಯುವಕನಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿವೆ. ಇನ್ನು ಬಲವಂತದ ಮತಾಂತರ ನಡೆದಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದ್ದು, ಮುಂದೆ ಈ ಈ ಪ್ರಕರಣ ಯಾವ ತಿರುವು ಪಡೆಯುತ್ತೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 pm, Wed, 16 July 25

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ