AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಧರ್ಮದವರು ಬಂದುಹೋಗುವ, ಕೋಟ್ಯಂತರ ರೂ ಆದಾಯ ತರುವ ದರ್ಗಾದ ಖರ್ಚು ವೆಚ್ಚ ಕೇಳಿದಕ್ಕೆ ಮಾರಣಾಂತಿಕ ಹಲ್ಲೆ!

dudh nana darga committee: ಉತ್ತರ‌ ಕರ್ನಾಟಕ ಪ್ರಮುಖ ದೂದ್ ನಾನಾ ದರ್ಗಾದಲ್ಲಿ ಅಕ್ರಮ. ಆ ಕಮಿಟಿ ಸದಸ್ಯರೆ ಇದನ್ನು ಬಯಲು ಮಾಡಿದ್ದಾರೆ. ಕಮಿಟಿ ಅಧ್ಯಕ್ಷ ಹಾಗೂ ಆತನ ಮಕ್ಕಳ ದರ್ಪಕ್ಕೆ ಪೊಲೀಸರು ಬ್ರೇಕ್ ಹಾಕಬೇಕಾಗಿದೆ.

ಎಲ್ಲ ಧರ್ಮದವರು ಬಂದುಹೋಗುವ, ಕೋಟ್ಯಂತರ ರೂ ಆದಾಯ ತರುವ ದರ್ಗಾದ ಖರ್ಚು ವೆಚ್ಚ ಕೇಳಿದಕ್ಕೆ ಮಾರಣಾಂತಿಕ ಹಲ್ಲೆ!
ಕೋಟ್ಯಂತರ ರೂ ಆದಾಯ ಬರುವ ದರ್ಗಾದ ಖರ್ಚು ವೆಚ್ಚ ಕೇಳಿದಕ್ಕೆ ಮಾರಣಾಂತಿಕ ಹಲ್ಲೆ!
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Jun 23, 2023 | 6:52 AM

Share

ಅದು ಉತ್ತರ ಕರ್ನಾಟಕ ಪ್ರಖ್ಯಾತ ದೂದ್ ನಾನಾ ದರ್ಗಾ (dudh nana darga). ಆ ದರ್ಗಾಕ್ಕೆ ಹಿಂದೂ ಮುಸ್ಲಿಂ ಎನ್ನದೆ ಎಲ್ಲಾ ಧರ್ಮೀಯರು ಆಗಮಿಸುತ್ತಾರೆ. ಅಷ್ಟೇ ಅಲ್ಲಾ ಈ ದರ್ಗಾಕ್ಕೆ ಕೋಟ್ಯಂತರ ರೂಪಾಯಿ ಆದಾಯ ಕೂಡಾ ಇದೆ‌.‌ ಈವಾಗ ಈ ದರ್ಗಾದ ಖರ್ಚು ವೆಚ್ಚ ಕೇಳಿದಕ್ಕೆ, ದರ್ಗಾದ ಕಮಿಟಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ (attack)‌‌ ಮಾಡಲಾಗಿದೆ. ಹೌದು ಕಮಿಟಿ ಅಧ್ಯಕ್ಷ ಹಾಗೂ ಆತನ ಮಕ್ಕಳು ದರ್ಪ ಮೆರೆದಿದ್ದಾರೆ. ಸದ್ಯ ಆ ಸದಸ್ಯ ಜೀವ ಭಯದಿಂದ ಆಸ್ಪತ್ರೆಯಲ್ಲಿ ವಿಲವಿಲ ಅಂತಿದ್ದಾನೆ. ಗದಗ ಜಿಲ್ಲೆಯ (gadag) ಲಕ್ಷ್ಮೇಶ್ವರದ ದೂದ್ ನಾನಾ ದರ್ಗಾಕ್ಕೆ ಅವ್ಯವಹಾರದ ವಾಸನೆ! ದೂದ್ ನಾನಾ ದರ್ಗಾದ ಖರ್ಚು ವೆಚ್ಚ ಕೇಳಿದಕ್ಕೆ, ಮಾರಣಾಂತಿಕ ಹಲ್ಲೆ! ಕಮಿಟಿ ಅಧ್ಯಕ್ಷ ಆತನ ಮಕ್ಕಳಿಂದ ಮಾರಣಾಂತಿಕ ಹಲ್ಲೆ! ಲಕ್ಷ್ಮೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ! – ಇದು ಒಟ್ಟಾರೆ ಚಿತ್ರಣ.

ಪವಿತ್ರ ಸ್ಥಾನದಲ್ಲಿ ಅವ್ಯವಹಾರದ ವಾಸನೆ. ಲೆಕ್ಕಪತ್ರ ಕೇಳಿದಕ್ಕೆ ಅಧ್ಯಕ್ಷ ಕುಟುಂಬದಿಂದ ಗೂಂಡಾವರ್ತನೆ ಆರೋಪ. ದೂದ್ ನಾನಾ ದರ್ಗಾದಲ್ಲಿ ಗಲಾಟೆ, ಗದ್ದಲ. ಮತ್ತೊಂದೆಡೆ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ನರಳಾಟ. ಎಸ್… ಹೀಗೆ ಆಸ್ಪತ್ರೆ ಬೆಡ್ ಮೇಲೆ ನರಕಯಾತನೆ ಅನುಭವಿಸುತ್ತಿರುವ ಸದಸ್ಯನ ಹೆಸರು ಫಿಯುಮುಲ್ಲಾ ಪಲ್ಲಿ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ನಿವಾಸಿ.. ಈತನಿಗೆ ದೂದ್ ನಾನಾ ದರ್ಗಾ ಕಮಿಟಿ ಅಧ್ಯಕ್ಷ ಹಾಗೂ ಆತನ ಮಕ್ಕಳು ಸೇರಿದಂತೆ 20 ಕ್ಕೂ ಹೆಚ್ಚು ಜನ್ರು ಹಲ್ಲೆ ಮಾಡಿದ್ದಾರಂತೆ.

ಅದೂ ಚೀಲ ಹೊರುವ ಹಮಾಲರು ಬಳಸುವ ಕಬ್ಬಿಣದ ಹುಕ್​​ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾನೆ. ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಂದಹಾಗೇ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ದೂದ್ ನಾನಾ ದರ್ಗಾ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹಿಂದೂ ಮುಸ್ಲಿಂ ಎನ್ನದೆ, ಎಲ್ಲಾ ಧರ್ಮೀಯರು ಈ ದೂದ್ ನಾನಾ ದರ್ಗಾಕ್ಕೆ ಬರ್ತಾರೆ. ಪ್ರತಿ ತಿಂಗಳು ಲಕ್ಷಾಂತರ ಭಕ್ತರು ಈ ದರ್ಗಾಕ್ಕೆ ಬಂದು ಹೋಗ್ತಾರೆ.

ಹೀಗಾಗಿ ಈ ದರ್ಗಾದಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಮೊನ್ನೆ ದರ್ಗಾದ ಕಮಿಟಿ ಅಧ್ಯಕ್ಷ ಸುಲೇಮಾನ್ ಸಾಬ್ ಕಣಕೆ ಅವ್ರ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ನಡೆಯುತ್ತಿತ್ತು. ‌ಈ ವೇಳೆ ಖರ್ಚು ವೆಚ್ಚದ ಕುರಿತು ಕಮಿಟಿ ಸದಸ್ಯ ಫಿಯುಮುಲ್ಲಾ ಅವ್ರು ಲೆಕ್ಕವನ್ನು ಕೇಳಿದ್ದಾರಂತೆ.

ಇಷ್ಟಕ್ಕೆ ಅಧ್ಯಕ್ಷ ಸುಲೇಮಾನ್ ಸಿಟ್ಟಾಗಿ, ಏಕವಚನದಲ್ಲಿ ಮಾತನಾಡಿದ್ದಾರಂತೆ, ಆಗ ಗಾಯಾಳು ಫಿಯುಮುಲ್ಲಾ ಕೂಡಾ ಏಕವಚನದಲ್ಲಿಯೇ ಮಾತನಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಸುಲೇಮಾನ್ ಅವ್ರ ಮಕ್ಕಳಾದ ಸಿಕಂದರ್ ಕಣಕೆ, ಅಬ್ದುಲ್ ಕಣಕೆ, ಖುತುಬುದ್ದೀನ್ ಕಣಕೆ ಸೇರಿದಂತೆ 20 ಕ್ಕೂ ಹೆಚ್ಚು ಜನ್ರು ಬಂದು, ಕಬ್ಬಿಣದ ಹುಕ್​ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರಂತೆ. ಗಂಭೀರವಾಗಿ ಗಾಯಗೊಂಡ, ಫಿಯುಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನನಗೆ ಅವರಿಂದ ಜೀವ ಭಯ ಇದೆ ಎಂದು ಆರೋಪಿಸಿದ್ದಾನೆ.

ಇನ್ನು ಲಕ್ಷ್ಮೇಶ್ವರ ಪಟ್ಟಣದ ದೂದ್ ನಾನಾ ದರ್ಗಾಕ್ಕೆ ಸಂಬಂಧಿಸಿದ ಸಾಕಷ್ಟು ಆಸ್ತಿಯಿದೆ. ಕೋಟ್ಯಾಂತರ ರೂಪಾಯಿ ವ್ಯವಹಾರ ಕೂಡಾ ಆಗುತ್ತದೆ. ‌ಇದರಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಪ್ರತಿ ತಿಂಗಳು ಲಕ್ಷಾಂತರ ಸಂಖ್ಯೆಯಲ್ಲಿ ಜನ್ರು ಆಗಮಿಸುತ್ತಾರೆ, ದರ್ಗಾಕ್ಕೆ ಬರುವ ಭಕ್ತರು, ಹುಂಡಿಗೆ ಹಣ ಹಾಕ್ತಾರೆ, ಹಾಗೇ ಭಕ್ತರು, ಇಟ್ಟಿಗೆ, ಮರಳು, ಕಲ್ಲು, ಕಬ್ಬಿಣ, ಸಿಮೆಂಟ್ ಸೇರಿದಂತೆ ಕಟ್ಟಡ ಕಟ್ಟಲು ನಾನಾ ವಸ್ತುಗಳು ದಾನ ಮಾಡ್ತಾರೆ.

ಆದ್ರೆ, ಅವುಗಳು ಎಲ್ಲಿಗೆ ಹೋಗಿದ್ದಾವೆ ಅಂತಾ ಪ್ರಶ್ನೆ ಮಾಡಲಾಗುತ್ತಿದೆ. ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಫೈಯುಮುಲ್ಲಾ ಹಾಗೂ ಅಧ್ಯಕ್ಷ ಪುತ್ರ ಸಿಕಂದರ್ ಕನಕೆ ದೂರು ಪ್ರತಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಲಕ್ಷ್ಮೇಶ್ವರ ಪೊಲೀಸ್ರು ತನಿಖೆ ನಡೆಸಿದ್ದಾರೆ. ಖರ್ಚು ವೆಚ್ಚವನ್ನು ಕೇಳಿದ್ರೆ, ಹೀಗೆ ಹಲ್ಲೆ ಮಾಡ್ತಾರೆ, ನಮಗೂ ಕೂಡಾ ಅವರಿಂದ ಜೀವ ಭಯ ಇದೆ ಅಂತಾರೆ, ಸ್ಥಳೀಯರು.

ಗದಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 am, Fri, 23 June 23