ಗದಗ ಜಿಲ್ಲಾ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಬಡ್ತಿಯಲ್ಲಿ ಎಡವಟ್ಟು: ಹಿರಿಯ ಶಿಕ್ಷಕರನ್ನು ಬಿಟ್ಟು ಕಿರಿಯ ಶಿಕ್ಷಕರಿಗೆ ಬಡ್ತಿ
ಡಿಡಿಪಿಐ, ಬಿಇಒ ನಡುವಿನ ಕಲಹಕ್ಕೆ ಶಿಕ್ಷಕಿ ಯಾಳವಾರ ಮೂಲ ಹುದ್ದೆಯೂ ಇಲ್ಲದೆ, ಬಡ್ತಿ ಪಡೆದ ಹುದ್ದೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಹಿರಿಯ ಅಧಿಕಾರಿಗಳ ಎಡವಟ್ಟಿನ ಬಗ್ಗೆ ಮಾತನಾಡಲು ಶಿಕ್ಷಕಿ ಹಿಂದೇಟು ಹಾಕಿದ್ದಾರೆ.
ಗದಗ: ಅವ್ರು ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು, ಆದ್ರೆ ಅಂತಹ ಶಿಕ್ಷಕರ ಬಡ್ತಿಯಲ್ಲಿ ಗದಗ ಶಿಕ್ಷಣ ಇಲಾಖೆ ಭಾರೀ ಗೋಲ್ಮಾಲ್ ನಡೆದಿರೋ ಆರೋಪ ಕೇಳಿ ಬಂದಿದೆ. ಡಿಡಿಪಿಐ ಅವರು ಬಡ್ತಿ ನೀಡಿ ಶಾಲೆಗೆ ನಿಯೋಜನೆ ಆಗುವಂತೆ ಆದೇಶ ಮಾಡಿದ್ದರು. ಆದ್ರೆ ಬಿಇಓ ಆ ಆದೇಶವನ್ನು ಹಿಂಪಡೆದು ಬಿಗ್ ಯಡವಟ್ಟು ಮಾಡಿದ್ದಾರೆ. ಹೀಗಾಗಿ ಡಿಡಿಪಿಐ ಹಾಗೂ ಬಿಇಓ ಅವರ ತಿಕ್ಕಾಟದಲ್ಲಿ ಮೂಲ ಹುದ್ದೆಯು ಇಲ್ಲದೇ, ಬಡ್ತಿಯು ಇಲ್ಲದೇ ಶಿಕ್ಷಕಿ ಅಂತ್ರವಾಗಿದ್ದಾರೆ. ಬಿಇಓ ಆದೇಶ ಹಿಂಪಡೆದಿದ್ದು, ಡಿಡಿಪಿಐ ಕೋಪಕ್ಕೆ ಕಾರಣವಾಗಿದೆ.
ಗದಗ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೇಳೋರೋ ಕೇಳೋರೋ ಯಾರೂ ಇಲ್ಲದಂತಾಗಿದೆ. ಇವ್ರು ಇಲ್ಲಿ ಆಡಿದ್ದೆ ಆಟವಾಗಿದೆ. ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸರಕಾರಿ ಶಾಲೆಗೆ ಮುಖ್ಯಶಿಕ್ಷಕಿಯಾಗಿ ಎ ವಿ ಯಾಳವರನ್ನು ಬಡ್ತಿ ನೀಡಲಾಗಿತ್ತು. ಡಿಡಿಪಿಐ ಬಸವಲಿಂಗಪ್ಪ ಅವರು ಏಪ್ರಿಲ್ 29 ರಂರು ಬಡ್ತಿ ನೀಡಿ ಹುಲಕೋಟಿ ಶಾಲೆಗೆ ನಿಯೋಜನೆ ಆಗುವಂತೆ ಆದೇಶ ಮಾಡಿದ್ರು. ಆದ್ರೆ ಡಿಡಿಪಿಐ ಅವರು ಆದೇಶ 10 ದಿನಗಳಲ್ಲೇ ಬಿಇಓ ನಡುವಿನಮನಿಯವರು ಹಿರಿಯ ಅಧಿಕಾರಿ ಆದೇಶಕ್ಕೆ ಬೆಲೆ ನೀಡಿದೆ, ಡಿಡಿಪಿಐ ಮಾಡಿದ ಆದೇಶವನ್ನು ಹಿಂಪಡೆದಿದ್ದಾರೆ. ಡಿಡಿಪಿಐ ಮಾಡಿದ ಆದೇಶವನ್ನು ಹಿಂಪಡೆಯುವ ಅಧಿಕಾರ ಬಿಇಓ ಅವರಿಗೆ ಇರೋದಿಲ್ಲಾ. ಆದ್ರೆ ಬಿಇಓ ಆದೇಶವನ್ನು ಹಿಂಪಡೆಯುವ ಮೂಲಕ ಬಿಗ್ ಯಡವಟ್ಟು ಮಾಡಿದ್ದಾರೆ. ಶಿಕ್ಷಕಿ ಎ ವಿ ಯಾಳವಾರ ಅವರು ಆ ಕಡೇ ಬಡ್ತಿನು ಇಲ್ಲಾ, ಈ ಕಡೇ ಮೂಲ ಹುದ್ದೆಯು ಇಲ್ಲದೆ ಕಂಗಾಲಾಗಿದ್ದಾರೆ. ಎಲ್ಲಿ ಕೆಲಸ ಮಾಡಬೇಕು ಎನ್ನುವ ಗೊಂದಲ್ಲದಲ್ಲಿದ್ದಾರೆ. ಹೀಗಾಗಿ ಶಿಕ್ಷಕ ಬಡ್ತಿಯಲ್ಲಿ ಭಾರಿ ಗೋಲ್ಮಾಲ್ ನಡೆದಿದ್ದು, ಸಮಗ್ರವಾದ. ತನಿಖೆಯನ್ನು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇನ್ನೂ ಗದಗ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾರಿ ಯಡವಟ್ಟು ಮಾಡಿದ್ದು, ಶಿಕ್ಷಕರು ನಲುಗಿ ಹೋಗುತ್ತಿದ್ದಾರೆ. ಡಿಡಿಪಿಐ ಅವರು ಎಪ್ರಿಲ್ 29 ರಂದು ಬಡ್ತಿ ನೀಡಿ ಆದೇಶ ಮಾಡಿದ್ರು. ಆದ್ರೆ ಡಿಡಿಪಿಐ ಅವರು ಆದೇಶ ಮಾಡಿದನ್ನು ಹಿಂಪಡೆದು ಮೇ 10 ರಂದು ಮತ್ತೊಮ್ಮೆ ಆದೇಶವನ್ನು ಮಾಡಿದ್ದಾರೆ. ಹೀಗಾಗಿ ಶಿಕ್ಷಕಿ ಅಧಿಕಾರಿಗಳ ನಡುವೆ ಸಿಲುಕಿ ಒದ್ದಾಡುತ್ತಿದ್ದಾರೆ. ಮೇಲಾಧಿಕಾರಿಗಳ ಒತ್ತಡದಿಂದ ಈ ಬಗ್ಗೆ ಮಾತನಾಡಲು ಶಿಕ್ಷಕಿ ಹಿಂದೇಟು ಹಾಕ್ತಾಯಿದ್ದಾರೆ ಎನ್ನಲಾಗಿದೆ. ಶಿಕ್ಷಕರ ಬಡ್ತಿ ಪಟ್ಟಿಯನ್ನು ಬಿಇಓ ಕಚೇರಿ ಸೇವಾ ಅವಧಿ ಸೇರಿದಂತೆ ಎಲ್ಲ ಅಗತ್ಯ ಮಾಹಿತಿ ನೀಡಿದ ಬಳಿಕ ಡಿಡಿಪಿಐ ಆದೇಶ ಮಾಡಿದ್ದಾರೆ. ಆದ್ರೆ, ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸರಿಯಾದ ಮಾಹಿತಿ ನೀಡದೇ ಯಡವಟ್ಟು ಮಾಡಿದ್ದು, ಸ್ಪಷ್ಟವಾಗಿ ಕಂಡು ಬಂದಿದೆ. ತಪ್ಪು ತಪ್ಪು ಮುಚ್ಚಿಕೊಳ್ಳು ಬಿಇಓ ಡಿಡಿಪಿಐ ಆದೇಶ ಹಿಂಪಡೆಯುವ ಮೂಲಕ ಯಡವಟ್ಟು ಮಾಡಿದ್ದಾರೆ.
ಈ ಕುರಿತು ಡಿಡಿಪಿಐ ಅವರನ್ನು ಕೇಳಿದ್ರೆ, ನಾನು ಹಿರಿಯ ಅಧಿಕಾರಿ ನಾನು ಮಾಡಿದ್ದ ಆದೇಶವನ್ನು ಹಿಂಪಡೆಯುವ ಅಧಿಕಾರ ಬಿಇಓ ಅವರಿಗೆ ಇರೋದಿಲ್ಲಾ. ಆದ್ರೆ ಅವರು ಆದೇಶವನ್ನು ಮಾಡಿದ್ದು, ಸರಿಯಲ್ಲಾ. ಕಾರಣ ಕೇಳಿ ನೋಟಿಸ್ ನೀಡಿದ್ದು, ಈವರಿಗರ ಬಿಇಓ ಅವರು, ಯಾವದೇ ಉತ್ತರವನ್ನು ನೀಡಿಲ್ಲಾ. ಇದರಿಂದಲೇ ಗೊತ್ತಾಗುತ್ತೇ ಬಿಇಓ ಅವರು ಯಡವಟ್ಟು ಮಾಡಿದ್ದಾರೆ ಎಂದರು. ಈ ಕುರಿತು ಡಿಡಿಪಿಐ ಅವರು ತನಿಖೆಗೆ ಆದೇಶ ಮಾಡಿದ್ದು, ತಪ್ಪಿತಸ್ಥ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹಿರಿಯ ಅಧಿಕಾರಿಯ ಆದೇಶವನ್ನು ಉಲ್ಲಂಘನೆ ಮಾಡಿರೋ ಆರೋಪವನ್ನು ಬಿಇಓ ಅವರು ಎದುರಿಸುತ್ತಿದ್ದಾರೆ. ಇಬ್ಬರು ಹಿರಿಯ ಅಧಿಕಾರಿಗಳ ತಿಕ್ಕಾಟದಲ್ಲಿ ಶಿಕ್ಷಕಿ ಅತಂತ್ರವಾಗಿದ್ದಾಳೆ. ಇನಾದ್ರು ಹಿರಿಯ ಅಧಿಕಾರಿಗಳು ಶಿಕ್ಷಣ ಇಲಾಖೆಯಲ್ಲಿ ನಡೆದ ಗೋಲ್ಮಾಲ್ ಕುರಿತು ಸಮಗ್ರವಾದ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶಿಕ್ಷಕಿಗೆ ನೋಟಿಸ್..
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶಿಕ್ಷಕಿಗೆ ನೋಟಿಸ್ ನೀಡಿದ್ದು, ಗದಗ ಡಿಡಿಪಿಐ ಕಚೇರಿಗೆ ನೊಂದ ಶಿಕ್ಷಕಿ ಎ.ವಿ ಯಾಳವಾರ ಆಗಮಿಸಿದರು. ಡಿಡಿಪಿಐ ಬಸವಲಿಂಗಪ್ಪ ಕಚೇರಿಯಿಂದ ನಾಪತ್ತೆಯಾಗಿದ್ದಾನೆ. ಶಿಕ್ಷಕಿಗೆ ನೋಟಿಸ್ ನೀಡಿರೋ ಡಿಡಿಪಿಐ ಬಸವಲಿಂಗಪ್ಪ. ನೋಟಿಸ್ಗೆ ಉತ್ತರ ನೀಡಲು ಶಿಕ್ಷಕಿ ಆಗಮಿಸಿದ್ದಾರೆ. ಶಿಕ್ಷಕಿಯ ಹೋರಾಟಕ್ಕೆ ಶಿಕ್ಷಕರ ಸಂಘ ಸಾಥ್ ನೀಡಿದೆ.
ವರದಿ: ಸಂಜೀವ ಪಾಂಡ್ರೆ ಟಿರ್ವಿ ಗದಗ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:41 pm, Mon, 23 May 22