ಒಂದು ಶಾಲೆಯ ಮಕ್ಕಳಿಗೆ ಶೂ ಭಾಗ್ಯ, ಮತ್ತೊಂದು ಶಾಲೆ ಮಕ್ಕಳಿಗೆ ಚಪ್ಪಲಿ; ಯಾಕೆ ಗೊತ್ತಾ?
ಒಂದೇ ಮನೆಯಿಂದ ಬೇರೆ ಬೇರೆ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಶೂ, ಚಪ್ಪಲಿ ವಿಷಯವಾಗಿ ಗಲಾಟೆಗಳು ನಡೆಯಬಹುದು ಎನ್ನುವ ವಿಶ್ಲೇಷಣೆ ನಡೆಯುತ್ತಿವೆ. ರಾಜ್ಯಾದ್ಯಂತ ಒಂದರಿಂದ 10 ತರಗತಿ ಓದುವ ಮಕ್ಕಳಿಗಾಗಿ ಸಮವಸ್ತ್ರ ನೀಡುವ ಯೋಜನೆಯಡಿ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡಲಾಗುತ್ತೆ.
ಗದಗ, ನ.08: ಜಿಲ್ಲೆಯ ಲಕ್ಷೇಶ್ವರ ತಾಲೂಕು ವ್ಯಾಪ್ತಿಯ ಮೂರು ಸರ್ಕಾರಿ ಶಾಲೆ(Government School)ಗಳ ಮಕ್ಕಳಿಗೆ ಶೂ ಬದಲಾಗಿ ಚಪ್ಪಲಿ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಪಟ್ಟಣದ ವ್ಯಾಪ್ತಿಯ ಕೆಲ ಶಾಲೆಯಲ್ಲಿ ಚಪ್ಪಲಿ ನೀಡಲಾಗಿದ್ದು, ಕೆಲ ಶಾಲೆಯಲ್ಲಿ ಶೂ ನೀಡಿರುವುದು ಮಕ್ಕಳ ಮಧ್ಯೆ ಗಲಾಟೆಗೂ ಕಾರಣವಾಗಬಹುದು ಎನ್ನುವ ಚರ್ಚೆ ಹುಟ್ಟುಹಾಕಿದೆ. ಲಕ್ಷೇಶ್ವರ(Lakshmeshwara) ಪಟ್ಟಣದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪೈಕಿ ಮೂರು ಶಾಲೆಯಲ್ಲಿ ಮಕ್ಕಳಿಗೆ ಸ್ಯಾಂಡಲ್ಸ್ ನೀಡಲಾಗಿದೆ. ಆಯಾ ಶಾಲೆಯ ಮೇಲುಸ್ತುವಾರಿ ಸಮಿತಿ ಒಪ್ಪಿಗೆ ಮೇರೆಗೆ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ತಿಬಣ ಹಾಗೂ ಕೆಂಚಲಪೂರ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಿಗೆ ಚಪ್ಪಲಿ ನೀಡಲಾಗಿದೆ.
ಈ ಹಿನ್ನಲೆ ಒಂದೇ ಮನೆಯಿಂದ ಬೇರೆ ಬೇರೆ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಶೂ, ಚಪ್ಪಲಿ ವಿಷಯವಾಗಿ ಗಲಾಟೆಗಳು ನಡೆಯಬಹುದು ಎನ್ನುವ ವಿಶ್ಲೇಷಣೆ ನಡೆಯುತ್ತಿವೆ. ರಾಜ್ಯಾದ್ಯಂತ ಒಂದರಿಂದ 10 ತರಗತಿ ಓದುವ ಮಕ್ಕಳಿಗಾಗಿ ಸಮವಸ್ತ್ರ ನೀಡುವ ಯೋಜನೆಯಡಿ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡಲಾಗುತ್ತೆ. ಶೂ ಖರೀದಿಯ ಜವಾಬ್ದಾರಿಯನ್ನ ಸ್ಥಳೀಯವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ನೀಡಲಾಗಿದೆ. ಇಲಾಖೆಯಿಂದ ನೇರವಾಗಿ ಎಸ್ ಡಿಎಂಸಿ ಹಾಗೂ ಶಾಲೆ ಮುಖ್ಯ ಶಿಕ್ಷಕರ ಜಂಟಿ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತೆ.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾದ ಏಕೈಕ ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆಯ ವಿಶೇಷತೆಗಳೇನು?
ಶೂ ಅಥವಾ ಚಪ್ಪಲ್ ಖರೀದಿ ನಿರ್ಧಾರ ಎಸ್ಡಿಎಂಸಿ ತೆಗೆದುಕೊಳ್ಳಬಹುದು
ಇನ್ನು ಶೂ ಅಥವಾ ಚಪ್ಪಲ್ ನಿರ್ಧಾರವನ್ನು ಎಸ್ಡಿಎಂಸಿ ತೆಗೆದುಕೊಳ್ಳಬಹುದಾಗಿದೆ. ಇನ್ನು ಈ ಗೊಂದಲಗಳಿಗೆ ಗದಗ ಡಿಸಿಪಿಐ ಎಂಎ ರೆಡ್ಡೇರ್, ತೆರೆ ಎಳೆದಿದ್ದು ‘ಸರ್ಕಾರದ ಸುತ್ತೋಲೆಗೆ ಅನುಗುಣವಾಗಿ ಚಪ್ಪಲಿ ಖರೀದಿಯಾಗಿವೆ. 2022 ಸರ್ಕಾರದ ಸುತ್ತೋಲೆಯ ಅನ್ವಯ, ಆಯಾ ಪರಿಸರಕ್ಕೆ ಅನುಗುಣವಾಗಿ ಚಪ್ಪಲಿ ಅಥವಾ ಶೂ ಖರೀದಿ ಮಾಡಬಹುದು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವರ್ಷದ 4 ತಿಂಗಳು ಮಳೆ ಇರುತ್ತೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಬಿಸಿಲು. ವಾತಾವರಣಕ್ಕೆ ಅನುಕೂಲವಾಗುವಂತೆ ಶೂ ಬದಲಿಗೆ ಸ್ಯಾಂಡಲ್ ತೆಗೆದುಕೊಳ್ಳಬಹುದು. ಈ ನಿರ್ಧಾರ ಆಯಾ ಶಾಲೆಯ ಎಸ್ ಡಿಎಂಸಿ ನಿರ್ಧರಿಸಲಿದೆ ಎಂದು ಸುತ್ತೋಲೆಯಲ್ಲಿ ನಮೂದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ಮಕ್ಕಳಿಗೆ ಶೂ ನೀಡುವ ಬದಲು, ಸ್ಯಾಂಡಲ್ ನೀಡುವ ಬಗ್ಗೆ ಕೆಲ ಮೇಲುಸ್ತುವಾರಿ ಸಮಿತಿಗಳು ನಿರ್ಧಿಸಿದ್ದು, ನಿಯಮಾನುಸಾರ ಖರೀದಿ ಮಾಡಲಾಗಿದೆ ಎಂದು ಲಕ್ಷ್ಮೇಶ್ವರ ಸರ್ಕಾರಿ ಶಾಲೆ ನಂಬರ್ 2 ಎಸ್ಡಿಎಂಸಿ ಅಧ್ಯಕ್ಷೆ ನಿರ್ಮಲಾ ನರೇಗಲ್ ಹೇಳಿದ್ದಾರೆ. ಜೊತೆಗೆ ಮಕ್ಕಳ ಹಾಗೂ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೂ ಖರೀದಿ ಮಾಡಲಾಗಿದೆ. ಯಾವುದೇ ಗೊಂದಲ ಇಲ್ಲ ಎಂದು ಅಧಿಕಾರಿಗಳ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ