ಭಾವೈಕ್ಯತಾ ದಿನಾಚರಣೆ ಘೋಷಣೆಗೆ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ಆಕ್ಷೇಪ

ಲಿಂಗೈಕ್ಯ ಡಾ.ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನಾಚರಣೆಯನ್ನಾಗಿ ಆಚರಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಖಂಡಿಸಿದರು.

ಭಾವೈಕ್ಯತಾ ದಿನಾಚರಣೆ ಘೋಷಣೆಗೆ ದಿಂಗಾಲೇಶ್ವರ ಸ್ವಾಮೀಜಿ ತೀವ್ರ ಆಕ್ಷೇಪ
ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 20, 2022 | 2:47 PM

ಗದಗ: ಲಿಂಗೈಕ್ಯ ಡಾ.ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನಾಚರಣೆಯನ್ನಾಗಿ ಆಚರಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಖಂಡಿಸಿದರು. ಪ್ರತಿ ವರ್ಷ ಫೆಬ್ರುವರಿ 21ರಂದು ಭಾವೈಕ್ಯತಾ ದಿನ ಆಚರಿಸಲಾಗುವುದು ಎನ್ನುವ ಮುಖ್ಯಮಂತ್ರಿ ಹೇಳಿಕೆಯು ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಮರಣ ಶಾಸನ ಬರೆದಂತೆ. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಭಾವೈಕ್ಯತೆಯ ಐನೂರು ವರ್ಷಗಳ ಇತಿಹಾಸವಿದೆ. ಹಿಂದೂಗಳ ಎಲ್ಲ ಒಳಪಂಗಡಗಳ ಜೊತೆಗೆ ಮುಸ್ಲಿಮರನ್ನೂ ಮಠವು ಸಮಾನವಾಗಿ ಕಂಡಿತ್ತು. ಮುಖ್ಯಮಂತ್ರಿಗಳ ಹೇಳಿಕೆ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಹಾಕಿದ ಕೊಡಲಿಪೆಟ್ಟು ಎಂದು ಅವರು ವಿಶ್ಲೇಷಿಸಿದರು.

ತೋಂಟದಾರ್ಯ ಮಠದ ಲಿಂಗೈಕ್ಯ ಡಾ ಸಿದ್ಧಲಿಂಗ ಶ್ರೀಗಳು ಬ್ರಾಹ್ಮಣರು, ಆರ್.ಎಸ್ಎಸ್ ಹಾಗೂ ಸಂಘಪರಿವಾರನ್ನು ಟೀಕೆ ಮಾಡಿದವರು. ಲಿಂಗಾಯತ ಧರ್ಮ ಒಡೆಯಲು ಮುಂದಾದವರು. ಸಮಾಜ ಮತ್ತು ಧರ್ಮದಲ್ಲಿ ಒಡಕು ಉಂಟು ಮಾಡಿದ ಶ್ರೀಗಳ ಹೆಸರಿನಲ್ಲಿ ಭಾವೈಕ್ಯತಾ ದಿನಾಚರಣೆ ನಿರ್ಧಾರ ಆಘಾತಕಾರಿ. ಕೋಟ್ಯಂತರ ಭಕ್ತರನ್ನು ಹೊಂದಿದ ಫಕೀರೇಶ್ವರ ಮಠವು ಭಾವೈಕ್ಯತೆ ಸಾರುತ್ತಿದೆ. ಶೀಗಿ ಹುಣ್ಣಿಮೆಯ ದಿನ ಫಕೀರೇಶ್ವರ ಮಠದ ಜಾತ್ರೆ ನಡೆಯುತ್ತದೆ. ಮುಖ್ಯಮಂತ್ರಿಗಳು ತಮ್ಮ ನಿರ್ಧಾರ ಬದಲಿಸಿ, ಅದೇ ದಿನದಂದು ಭಾವೈಕ್ಯತಾ ದಿನಾಚರಣೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮತೀಯ ಗಲಭೆಗೆ ಕಾರಣರಾದ, ಜಾತಿಗಳನ್ನು ಒಡೆದು ಆಳುವ ಸ್ವಾಮೀಜಿ ಹೆಸರಲ್ಲಿ ಭಾವೈಕ್ಯತಾ ದಿನಾಚರಣೆ ಮಾಡಿದರೆ ‘ಭಾವೈಕ್ಯತೆ’ ಎನ್ನುವ ಪದದ ಅರ್ಥ ಏನಾಗಬೇಕು ಎಂದು ಕಿಡಿಕಾರಿದರು. ಮುಖ್ಯಮಂತ್ರಿಗಳೇ ನಿಮ್ಮ ತಂದೆ, ತಾಯ ಮತ್ತು ನೀವು ಫಕೀರೇಶ್ವರ ಮಠದ ಭಕ್ತರಿದ್ದೀರಿ. ಇದೆಲ್ಲಾ ಮರೆತು ಪಕ್ಕದ ಮಠಕ್ಕೆ ಹೋಗಿ ಈ ರೀತಿ ಘೋಷಣೆ ಮಾಡಿದ್ದು, ಶಿರಹಟ್ಟಿ ಮಠದ ಪಾಲಿಗೆ ಮರಣ ಶಾಸನವಾಗುತ್ತದೆ. ಸಮಾಧಿ ಉದ್ಘಾಟನೆ ಹೋಗಿ ನೀವು ನಮ್ಮ ಮಠವನ್ನೇ ಸಮಾಧಿ ಮಾಡಿದ್ದೀರಿ ಎಂದು ಕಿಡಿಕಾರಿದರು.

ಕಾಂಗ್ರೆಸ್​ನಿಂದ ಕೆಟ್ಟ ರಾಜಕಾರಣ: ಕಾರಜೋಳ

ದಾವಣಗೆರೆ: ಕರ್ನಾಟಕದಲ್ಲಿ ಸ್ವಾಮೀಜಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ಪರೋಕ್ಷವಾಗಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆ ನಗರದ ಶಾಮನೂರ ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಸ್ವಾಮೀಜಿಗಳು ಭಕ್ತರು ಕೊಡುವ ಕಾಣಿಕೆಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಯಡಿಯೂರಪ್ಪ ಸಿಎಂ ಆದ ಮೇಲೆ ರಾಜ್ಯದ ಬಹುತೇಕ ಮಠಾಧೀಶರಿಗೆ ಐದು ಕೋಟಿ, ಒಂದು ಕೋಟಿ, 50 ಲಕ್ಷದಂತೆ ಅನುದಾನ ಸಿಕ್ಕಿತು. ಸ್ವಾಮೀಜಿಗಳಿಂದ ಕಮಿಷನ್ ಪಡೆಯುತ್ತಾರೆ ಎಂದು ಆರೋಪಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಯಾವುದೇ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಭೂ ಸೇನಾ ನಿಮಗ ಕಾಮಗಾರಿ ನಿರ್ವಹಿಸುತ್ತದೆ. ಜಿಎಸ್​ಟಿ, ಕಾರ್ಮಿಕ ಸೆಸ್, ನಿಗಮಕ್ಕೆ ಶೇಕಡಾ ಹತ್ತು ಸೇರುತ್ತದೆ. ಹೀಗೆ ಸರ್ಕಾರ ಒಂದು ನೂರು ರೂಪಾಯಿ ಅನುದಾನ ನೀಡಿದರೆ ಅದರಲ್ಲಿ 27 ರೂಪಾಯಿ ತೆರಿಗೆ ಹೋಗುತ್ತದೆ. ಇಂತಹ ವಾಸ್ತವ ಸಂಗತಿ ತಿಳಿದುಕೊಳ್ಳದೇ ಸ್ವಾಮೀಜಿ ಸರ್ಕಾರದ ಮೇಲೆ ಶೇ 30ರ ಕಮಿಷನ್ ಆರೋಪ ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸರ್ಕಾರದ ಕಮಿಷನ್ ಬಗ್ಗೆ ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರ ಎಂದ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ

ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಕ್ಷೇತ್ರವೇ ಅಭಿವೃದ್ಧಿಯಾಗಿಲ್ಲ, ರಾಜ್ಯದ ಅಭಿವೃದ್ಧಿ ಎಲ್ಲಿಂದ ಆಗುತ್ತೆ; ಸರ್ಕಾರದ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರಶ್ರೀ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು