Gadag News: ಹೆಸರು, ಶೇಂಗಾ ಬೆಳೆಗಳಿಗೆ ಹಳದಿ ನಂಜಾಣು ರೋಗ ಹಾಗೂ ಕೀಟ ಬಾಧೆ; ಅನ್ನದಾತ ಕಂಗಾಲು

ರೈತರು ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ ನಿರಂತರವಾಗಿ ಮೋಡ ಕವಿದ ವಾತಾವರಣ ಇರುವುದರಿಂದ ಬೆಳೆಯ ಎಲೆಗಳು ಹಳದಿಯಾಗಿ ನಂಜಾಣು ರೋಗ ತಗುಲಿ ಬೆಳೆ ಕಮರುತ್ತಿದೆ.

Gadag News: ಹೆಸರು, ಶೇಂಗಾ ಬೆಳೆಗಳಿಗೆ ಹಳದಿ ನಂಜಾಣು ರೋಗ ಹಾಗೂ ಕೀಟ ಬಾಧೆ; ಅನ್ನದಾತ ಕಂಗಾಲು
ಹಳದಿ ನಂಜಾಣು ರೋಗ ಹಾಗೂ ಕೀಡೆಗಳ ಬಾಧೆಯಿಂದ ಹಾಳಾದ ಬೆಳೆ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 24, 2022 | 11:59 AM

ಗದಗ: ಜಿಲ್ಲೆಯಲ್ಲಿ ಅತಿಯಾದ ಮಳೆಯಾದ ಕಾರಣ ಬೆಳೆಗಳಿಗೆ ರೀಗ ಅಂಟಿಕೊಂಡು ಅಪಾರ ಬೆಳೆ ಹಾಳಾಗುತ್ತಿದ್ದು, ಹೀಗಾಗಿ ಗದಗ ಜಿಲ್ಲೆಯ ರೈತರು (Farmers) ಕಂಗಾಲಾಗಿದ್ದಾರೆ. ಗದಗ ತಾಲೂಕಿನ ಹರ್ಲಾಪೂರ, ಲಕ್ಕುಂಡಿ, ತಿಮ್ಮಾಪೂರ, ಕಣಗಿನಹಾಳ, ಹಾತಲಗೇರಿ ಗ್ರಾಮಗಳ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಅಂಟಿಕೊಂಡಿದ್ದು, ರೈತ ಸಮೂಹ ಸಂಕಷ್ಟಕ್ಕಿಡಾಗಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಮಳೆಯಾಗಿದ್ದು, ಹೆಸರು, ಶೇಂಗಾ ಉಷ್ಣಾಂಶದ ಕೊರತೆಯಿಂದ ಹಳದಿ ನಂಜಾಣು ರೋಗ ಅಧಿಕವಾಗಿ ಬೆಳೆಗಳು ನಾಶವಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೇ ರೈತ ಸಮೂಹ ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ ಅಂತ ರೈತರು ಗೋಳಾಡುತ್ತಿದ್ದಾರೆ.

ಇದನ್ನೂ ಓದಿ: Gadag News: ಎಮ್ಮೆಯಿಂದ ಬಸ್​​ ತಂಗುದಾಣ ಉದ್ಘಾಟನೆ: ಗದಗ ಜಿಲ್ಲೆಯ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ರೈತರು ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ ನಿರಂತರವಾಗಿ ಮೋಡ ಕವಿದ ವಾತಾವರಣ ಇರುವುದರಿಂದ ಬೆಳೆಯ ಎಲೆಗಳು ಹಳದಿಯಾಗಿ ನಂಜಾಣು ರೋಗ ತಗುಲಿ ಬೆಳೆ ಕಮರುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೊರಕ ಹುಳು ಹಾಗೂ ಕೀಡೆಗಳು ಉತ್ಪತ್ತಿಯಾಗಿ ಬೆಳೆ ಹೂವು ಕಾಯಿ ಬಿಡುವ ಮುನ್ನ ಕಾಂಡ ಮತ್ತು ಎಲೆಗಳನ್ನು ತಿಂದು ಎಲೆಗಳ ಮೇಲೆ ಮೊಟ್ಟೆಯಿಟೆಗಳು ಉತ್ಪತ್ತಿಯಾಗಿ ಎಲೆಗಳು ರಂದ್ರ ಬಿದ್ದು ಬೆಳೆಯನ್ನು ನಾಶಪಡಿಸುತ್ತಿವೆ ಎಂದು ರೈತರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ನರಗುಂದದ ರೈತ ಹುತಾತ್ಮ ದಿನಾಚರಣೆಯಲ್ಲಿ ಹೈಡ್ರಾಮಾ: ಸಿ.ಸಿ. ಪಾಟೀಲ್ ಬೆಂಬಲಿಗರು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹಾಗೂ ರೈತರ ನಡುವೆ ಬಿಗ್ ಫೈಟ್

ರೋಗದ ಹತೋಟಿಗೆ ಕ್ರಿಮಿನಾಶಕ ಸಿಂಪಡಣೆ

ಹೆಸರು ಹಾಗೂ ಶೇಂಗಾ ಬೆಳೆಗಳು ಪ್ರತಿವರ್ಷ ಯಾವುದೇ ಕೀಟನಾಶಕ ಸಿಂಪಡಣೆ ಮಾಡದೆ ಬೆಳೆ ಬರುತ್ತಿತ್ತು. ಆದರೆ ಈ ವರ್ಷ ಗಾಯದ ಮೇಲೆ ಬರೆ ಎಂಬಂತೆ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಆದುದರಿಂದ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ರೋಗದ ಬಗ್ಗೆ ಸಂಪೂರ್ಣ ರೈತರಿಗೆ ಮಾಹಿತಿ ನೀಡಿ ಬೆಳೆ ಹಾನಿಯ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್ ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ‌ಹಾಗೂ ಹುಚ್ಚೀರಪ್ಪ ಜೋಗಿನ ಶರಣಪ್ಪ ಜೋಗಿನ ಶೇಖಪ್ಪ ಘಂಟಿ ಹಾಗೂ ಲಕ್ಕುಂಡಿ ರೈತರಾದ ಹನುಮಪ್ಪ ಕರಿ ಉಮೇಶ ಗೌಡ್ರು ಮತ್ತು ಕಣಗಿನಹಾಳ ರೈತರಾದ ಬಾಲರಾಜ್ ಹೂಲಗೋಳ, ಸಿದ್ದಪ್ಪ ಪಾಟೀಲ್, ರಾಮಣ್ಣ ಖಂಡ್ರಿ ಬಾಳಪ್ಪ ಗಂಗರಾತ್ರಿ ಅಂದಪ್ಪ ಕೂಳುರು ಒತ್ತಾಯಿಸಿದ್ದಾರೆ.

ವರದಿ: ಸಂಜೀವ್ ಕುಮಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada