ತುಂಗಭದ್ರೆಯ ಅಂಗಳದಲ್ಲಿ ಅಪ್ಪಟ ಸ್ವದೇಶಿ ಹಕ್ಕಿಗಳ ಕಲವರ: ಬೆಳ್ಳಕ್ಕಿಗಳ ಚೆಲ್ಲಾಟ, ನದಿಯ ನಿನಾದ ನೋಡೋದೆ ಕಣ್ಣಿಗೆ ಹಬ್ಬ

ಮೊದಲು ತುಂಗಭದ್ರ ನದಿಯ ನೋಡೋಕೆ ಒಂದು ಸಣ್ಣ ಹಕ್ಕಿ ಕೂಡ ಕಣ್ಣಿಗೆ ಕಾಣುತ್ತಿಲ್ಲ. ಅದ್ರೆ, ಈಗ ತುಂಗಭದ್ರ ನದಿಯಲ್ಲಿ ಬೆಳ್ಳಕ್ಕಿಗಳ ಲೋಕವೇ ಸೃಷ್ಠಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನದಿಗೆ ಎಂಟ್ರಿ ಕೊಡುವ ಹಕ್ಕಿಗಳ ಸಾಮ್ರಾಜ್ಯ ಜನ್ರನ್ನು ಕೈ ಬೀಸಿ ಕರೆಯುತ್ತಿದೆ.

  • TV9 Web Team
  • Published On - 13:44 PM, 7 Mar 2021
ತುಂಗಭದ್ರೆಯ ಅಂಗಳದಲ್ಲಿ ಅಪ್ಪಟ ಸ್ವದೇಶಿ ಹಕ್ಕಿಗಳ ಕಲವರ: ಬೆಳ್ಳಕ್ಕಿಗಳ ಚೆಲ್ಲಾಟ, ನದಿಯ ನಿನಾದ ನೋಡೋದೆ ಕಣ್ಣಿಗೆ ಹಬ್ಬ
ನದಿಯಲ್ಲಿ ಬೆಳ್ಳಕ್ಕಿಗಳ ಚೆಲ್ಲಾಟ

ಗದಗ: ಅದೊಂದು ಕಾಲವಿತ್ತು ತುಂಗಾಭದ್ರಾ ತೀರದಲ್ಲಿ ಮರಳು ಮಾಫಿಯಾ, ಜೆಸಿಬಿಗಳ ಘರ್ಜನೆ ಜೋರಾಗಿತ್ತು. ಆದ್ರೆ ಈಗ ಆ ತುಂಗಾಭದ್ರಾ ತೀರದಲ್ಲಿ ಜೆಸಿಬಿ ಘರ್ಜನೆ ಇಲ್ಲ. ಬದಲಾಗಿ ಬೆಳ್ಳಕ್ಕಿಗಳ ಸಾಮ್ರಾಜ್ಯ ನಿರ್ಮಾಣವಾಗಿದೆ. ಝುಳು ಝುಳು ಹರಿಯುವ ನದಿಯಲ್ಲಿ ಬೆಳ್ಳಕ್ಕಿಗಳ ಚೆಲ್ಲಾಟ, ನಿನಾದ ನೋಡೋದೆ ಕಣ್ಣಿಗೆ ಹಬ್ಬ. ಬಾನಾಡಿನಿಂದ ಗುಂಪು ಗುಂಪಾಗಿ ಬಾನಾಡಿಗಳು ರಂಗೋಲಿ ಚಿತ್ತಾರ ನದಿತೀರದ ಜನ್ರಿಗೆ ಮುದ ನೀಡುತ್ತಿದೆ.

ತುಂಗಭದ್ರೆಯ ಅಂಗಳದಲ್ಲಿ ಅಪ್ಪಟ ಸ್ವದೇಶಿ ಹಕ್ಕಿಗಳ ಕಲವರ
ವಿಶಾಲವಾಗಿ ಹರಿಯುತ್ತಿರೋ ತುಂಗಭದ್ರೆಯ ಅಂಗಳದಲ್ಲಿ ಅಪ್ಪಟ ಸ್ವದೇಶಿ ಹಕ್ಕಿಗಳ ಕಲವರ ಬಲು ಜೋರಾಗಿದೆ. ನದಿ ತೀರಕ್ಕೆ ಬಂದ್ರೆ ಸಾಕು ಹಕ್ಕಿ ಲೋಕವೇ ಕಣ್ಣಿಗೆ ರಾಚುತ್ತದೆ. ಝುಳು ಝುಳು ಹರಿಯುವ ನದಿಯಲ್ಲಿ ಸ್ವಚ್ಛಂದವಾಗಿ ಹಾರಾಟ, ಚೆಲ್ಲಾಟ, ಬೆಳ್ಳಕ್ಕಿಗಳ ಚಿಲಿಪಿಲಿ ಕಲವರ ನೋಡೋದೆ ಕಣ್ಣಿಗೆ ಹಬ್ಬ. ಹೌದು ಈ ಕಲರಫುಲ್ ಹಕ್ಕಿಗಳ ಲೋಕ ಕಂಡಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದ ಬಳಿ. ತುಂಗಭದ್ರಾ ತೀರ ಅಂದ್ರೆ ಸಾಕು ಅಲ್ಲಿ ಜೆಸಿಬಿ ಘರ್ಜನೆ, ಟಿಪ್ಪರ್​ಗಳ ಅಬ್ಬರ್ ಭರ್ಜರಿಯಾಗಿರುತ್ತೆ. ಆದ್ರೆ, ಸಧ್ಯ ಅಲ್ಲಿ ಬೆಳ್ಳಕ್ಕಿಗಳ ಜಾತ್ರೆಯೇ ಭರ್ಜರಿಯಾಗಿದೆ.

ನದಿಯತ್ತ ಹಿಂಡು ಹಿಂಡಾಗಿ ಬರ್ತಾವೆ
ಯಾವುದೇ ಮರಳು ಮಾಫಿಯಾದ ಅಬ್ಬರ ಇಲ್ಲದೇ ತಮ್ಮದೇ ಆದ ಲೋಕ ಸೃಷ್ಠಿಸಿಕೊಂಡು ಬೆಳ್ಳಕ್ಕಿಗಳು ಇಡೀ ದಿನ ಮೆಯಲು ಹೋಗುತ್ತವೆ. ಆದ್ರೆ, ಸಾಯಂಕಾಲ ಆದ್ರೆ ಸಾಕು ತುಂಗಭದ್ರ ನದಿಯತ್ತ ಹಿಂಡು ಹಿಂಡಾಗಿ ಬರ್ತಾವೆ. ನೀರಲ್ಲಿ ಅವ್ರಗಳ ಚೆಲ್ಲಾಟ, ತುಂಟಾಟ ಬಲು ಚಂದವಾಗಿರುತ್ತೆ. ಹರಿಯುವ ನದಿಯಲ್ಲಿ ದೂರದಿಂದ ನೋಡಿದ್ರೆ ರಂಗೋಲಿಯ ಚಿತ್ತಾರದಂತೆ ಕಾಣಿಸುತ್ತದೆ. ಯಾರ ಕಾಟವೂ ಇಲ್ಲದೇ ತಮ್ಮ ಸಾಮ್ರಾಜ್ಯದಲ್ಲಿ ಮಿಂದೆಳುವ ಹಕ್ಕಿಗಳು ನದಿ ತೀರದ ಜನ್ರ ಮನಸು ಹಗುರ ಮಾಡುತ್ತಿವೆ.


ಮೊದಲು ತುಂಗಭದ್ರ ನದಿಯ ನೋಡೋಕೆ ಒಂದು ಸಣ್ಣ ಹಕ್ಕಿ ಕೂಡ ಕಣ್ಣಿಗೆ ಕಾಣುತ್ತಿಲ್ಲ. ಅದ್ರೆ, ಈಗ ತುಂಗಭದ್ರ ನದಿಯಲ್ಲಿ ಬೆಳ್ಳಕ್ಕಿಗಳ ಲೋಕವೇ ಸೃಷ್ಠಿಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ನದಿಗೆ ಎಂಟ್ರಿ ಕೊಡುವ ಹಕ್ಕಿಗಳ ಸಾಮ್ರಾಜ್ಯ ಜನ್ರನ್ನು ಕೈ ಬೀಸಿ ಕರೆಯುತ್ತಿದೆ. ಅಕ್ಕಪಕ್ಕ ಗ್ರಾಮಗಳ ಜನ್ರಿಗೂ ಈ ಹಕ್ಕಿಗಳ ಲೋಕ ನೋಡಿ ಖಷಿಯಾಗಿದೆ. ಬರದನಾಡು ಅಂತಲೇ ಫೆಮಸ್ ಆದ ಮುಂಡರಗಿ ತಾಲೂಕಿನಲ್ಲಿ ಈಗ ಪಕ್ಷ ಲೋಕವೇ ಧರೆಗಿಳಿದಂತಾಗಿದೆ.


ಬೆಳ್ಳಕ್ಕಿಗಳು ಈಗ ನದಿಯತ್ತ ಲಗ್ಗೆ ಇಟ್ಟಿವೆ
ಇನ್ನು ಮರಳು ಮಾಫಿಯಾದಿಂದ ಹಕ್ಕಿ ಅಲ್ಲ ಸಣ್ಣ ಜೀವಗಳು ಕೂಡ ಇತ್ತ ಸುಳಿಯುತ್ತಿರಲಿಲ್ಲ. ಆದ್ರೆ, ಈಗ ತುಂಗಭದ್ರೆ ಶಾಂತವಾಗಿದ್ದಾಳೆ. ಅದಕ್ಕಾಗಿ ಬೆಳ್ಳಕ್ಕಿಗಳು ಈಗ ನದಿಯತ್ತ ಲಗ್ಗೆ ಇಟ್ಟಿವೆ. ಬರದನಾಡಿ ಜನ್ರಿಗೆ ಹಕ್ಕಿಗಳು ಅಂದ್ರೆ ಅಪರೂಪ. ಹೀಗಾಗಿ ಈ ಹಕ್ಕಿಗಳ ಲೋಕ ನೋಡಿ ಫುಲ್ ಫಿದಾ ಆಗಿದ್ದಾರೆ. ಹಕ್ಕಿಗಳ ಸಾಮ್ರಾಜ್ಯದ ಬಗ್ಗೆ ಪಕ್ಷಿ ಪ್ರೀಯರು ಹೇಳೋದು ಹೀಗೆ.


ಗಣಿ ಇಲಾಖೆ ಮರಳು ಗಣಿಗಾರಿಕೆ ನಿಷೇಧಿಸಿ ನೋಟಿಸ್ ನೀಡಿತ್ತು
ಇನ್ನು ಕಪ್ಪತ್ತಗುಡ್ಡ ಪ್ರದೇಶಕ್ಕೆ ಈ ನದಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ. ಈಗ ಕಪ್ಪತ್ತಗುಡ್ಡ ವನ್ಯಜೀವಿ ಧಾವಮವಾಗಿದೆ. ಹೀಗಾಗಿ ಒಂದು ಕಿಲೋ ಮೀಟರ್ ವ್ಯಾಪ್ತಿಗೆ ಸಿಂಗಟಾಲೂರ ಗ್ರಾಮದ ಬಳಿಯ ತುಂಗಭದ್ರ ನದಿ ಈ ಪ್ರದೇಶ ಒಳಪಡುತ್ತದೆ. ಗಣಿ ಇಲಾಖೆ ಮರಳು ಗಣಿಗಾರಿಕೆ ನಿಷೇಧಿಸಿ ನೋಟಿಸ್ ನೀಡಿತ್ತು. ಆದ್ರೆ ಗಣಿ ಮಾಲೀಕರು ತಡೆಯಾಜ್ನೆ ತಂದಿದ್ದಾರೆ. ಈಗ ನದಿಯಲ್ಲಿ ನೀರು ಇರೋದ್ರಿಂದ ಮರಳು ಗಣಿಗಾರಿಕೆ ನಿಂತಿದೆ. ನೀರು ಕಡಿಮೆಯಾದ್ರೆ ಮತ್ತೆ ನದಿಯಲ್ಲಿ ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಗಳ ಅಬ್ಬರ್ ಹೆಚ್ಚಾಗಲಿದೆ. ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧ ಮಾಡಿ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಮುಂದಾಗಬೇಕು ಅನ್ನೋದು ಪಕ್ಷಿ ಪ್ರೀಯರ ಒತ್ತಾಯ.

ಇದನ್ನೂ ಓದಿ:ಕಾಫಿನಾಡಲ್ಲಿ ಪಕ್ಷಿ ಪ್ರಿಯರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಬೆಳ್ಳಕ್ಕಿಗಳ ವೈಯ್ಯಾರ..!