ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಟ್ವಿಸ್ಟ್; ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದ ಕಾಂಗ್ರೆಸ್ ಸದಸ್ಯ
ಗದಗ- ಬೆಟಗೇರಿ ನಗರಸಭೆ ಆಧ್ಯಕ್ಷ, ಉಪಾಧ್ಯಕ್ಷರಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರವಾಗಿ ನಗರಸಭೆ ಆಯುಕ್ತರ ಜೊತೆ ಮಾತುಕತೆ ನಡೆಸಲಾಗಿದೆ. ಲಕ್ಷ್ಮಣ ಚಂದಾವರಿ ಹೇಳಿಕೆಯನ್ನು ಬಿಜೆಪಿ ಸದಸ್ಯರು ನಿರಾಕರಿಸಿದ್ದಾರೆ.
ಗದಗ: ಇಲ್ಲಿನ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಚಾರವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಗೆಜೆಟ್ ನೋಟಿಫಿಕೆಷನ್‌ಗೆ ತಡೆ ನೀಡಲಾಗಿದೆ. ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಚಂದಾವರಿ ಹೇಳಿಕೆ ನೀಡಿದ್ದಾರೆ. ಲಕ್ಷ್ಮಣ ಚಂದಾವರಿ ಹೇಳಿಕೆ ಹಿನ್ನೆಲೆ ಗೊಂದಲ ಉಂಟಾಗಿದೆ. ಗದಗ- ಬೆಟಗೇರಿ ನಗರಸಭೆ ಆಧ್ಯಕ್ಷ, ಉಪಾಧ್ಯಕ್ಷರಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರವಾಗಿ ನಗರಸಭೆ ಆಯುಕ್ತರ ಜೊತೆ ಮಾತುಕತೆ ನಡೆಸಲಾಗಿದೆ. ಲಕ್ಷ್ಮಣ ಚಂದಾವರಿ ಹೇಳಿಕೆಯನ್ನು ಬಿಜೆಪಿ ಸದಸ್ಯರು ನಿರಾಕರಿಸಿದ್ದಾರೆ.
ಗದಗ- ಬೆಟಗೇರಿ ನಗರಸಭೆ ಬಿಜೆಪಿ ಪಾಲಾಗಿತ್ತು. ಅಧ್ಯಕ್ಷೆಯಾಗಿ ಬಿಜೆಪಿಯ ಉಷಾ ದಾಸರ್, ಉಪಾಧ್ಯಕ್ಷರಾಗಿ ಸುನಂದಾ ಬಾಕಳೆ ಆಯ್ಕೆಯಾಗಿದ್ದರು. ಜನವರಿ 24ರ ಗದಗ ಬೆಟಗೇರಿ ನಗರಸಭೆಯಲ್ಲಿ ಗೊಂದಲದ ವಾತಾವರಣ ಇತ್ತು. ಈ ನಡುವೆ ತೀವ್ರ ಕುತೂಹಲ ಕೆರಳಿಸಿದ್ದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದೆ. ಸಂಖ್ಯೆ ಬಲ ಕಡಿಮೆ ಇದ್ದರು ಬಿಜೆಪಿಗೆ ಕಾಂಗ್ರೆಸ್ ಶಾಕ್ ನೀಡಿತ್ತು. ಕೈ ಎತ್ತುವ ಮೂಲಕ 19 ಮತಗಳನ್ನು ಬಿಜೆಪಿ ಅಭ್ಯರ್ಥಿಗಳು ಪಡೆದಿದ್ದರು. ಅಂತಿಮವಾಗಿ ನಗರಸಭೆ ಕಾರ್ಯಾಲಯದಲ್ಲಿ ಚುನಾವಣಾ ಅಧಿಕಾರಿ ರಾಯಪ್ಪ ಬಿಜೆಪಿ ಗೆಲುವನ್ನು ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಬಾಗಲಕೋಟೆ ಜಿಲ್ಲೆ ಬಾದಾಮಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ; ಗದಗ-ಬೆಟಗೇರಿ ನಗರಸಭೆ ಬಿಜೆಪಿ ಪಾಲು
ಇದನ್ನೂ ಓದಿ: ಗದಗ-ಬೆಟಗೇರಿ ನಗರಸಭೆ ಚುನಾವಣೆ: ಕರ್ನಾಟಕ ಮುನ್ಸಿಪಲ್ ಕಾಯ್ದೆ ಗಾಳಿಗೆ ತೂರಿ ಮನಬಂದವರೆಲ್ಲ ಚುನಾವಣೆಗೆ ಸ್ಪರ್ಧೆ