ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಲೇಔಟ್​ಗಳ ಹಾವಳಿ! ನಗರಸಭೆ ಅಧಿಕಾರಿಗಳೇ ಸಾಥ್ ನೀಡಿದ್ರಾ?

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಲೇಔಟ್​ಗಳ ಹಾವಳಿ ಹೆಚ್ಚಾಗಿದ್ದು, ಗದಗ ಅಭಿವೃದ್ಧಿ ಪ್ರಾಧಿಕಾರದ ಅಂತಿಮ ಅನುಮೋದನೆ ಇಲ್ಲದೇ ಬೇಕಾಬಿಟ್ಟಿ ಮಾರಾಟ ಮಾಡಲಾಗಿದೆ. ಈ ಮೂಲಕ ಅವಳಿ ನಗರದ ಜನರಿಗೆ ಮೋಸ ಮಾಡಿ ಭರ್ಜರಿ ಕಮಾಯಿ ಮಾಡುತ್ತಿದ್ದಾರೆ. 200 ಕ್ಕೂ ಹೆಚ್ಚು ಲೇಔಟ್​ಗಳು ಅಂತಿಮ ಅನುಮೋದನೆ ಹೊಂದಿಲ್ಲ. ಆದ್ರೆ, ನಗರಸಭೆ ಫಾರ್ಮ್-3 ನೀಡಿ ಅಕ್ರಮಕ್ಕೆ ಸಾಥ್ ನೀಡಿದೆ. ಈಗ ಸೈಟ್ ಖರೀದಿ ಮಾಡಿದ‌ ಸಾವಿರಾರು ಜನರು ಕಂಗಾಲಾಗಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಅಧಿಕಾರಿಗಳ ಮೋಸದ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಲೇಔಟ್​ಗಳ ಹಾವಳಿ! ನಗರಸಭೆ ಅಧಿಕಾರಿಗಳೇ ಸಾಥ್ ನೀಡಿದ್ರಾ?
ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಲೇಔಟ್​ಗಳ ಹಾವಳಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 06, 2024 | 4:00 PM

ಗದಗ, ಅ.05: ಗದಗ-ಬೆಟಗೇರಿ(Gadag-Betageri)ಅವಳಿ ನಗರದಲ್ಲಿ ಅಕ್ರಮ ಲೇಔಟ್​​ಗಳ ಹಾವಳಿ ಮಿತಿಮೀರಿದೆ. ಸರ್ಕಾರದ ಎಲ್ಲ ನಿಯಮ ಗಾಳಿಗೆ ತೂರಿ ಲೇಔಟ್ ಮಾಲೀಕರು ಹಣ‌ ಕಮಾಯಿ ಮಾಡುವ ಕೆಲಸ ನಡೆಸಿದ್ದಾರೆ. ಒಂದು ಲೇಔಟ್ ಪೂರ್ಣ ಆಗಬೇಕಾದರೆ ರಸ್ತೆ, ಯುಜಿಡಿ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಆ ಬಳಿಕ ಗದಗ-ಬೆಟಗೇರಿ ಅಭಿವೃದ್ಧಿ ಪ್ರಾಧಿಕಾರ ಅಂತಿಮ ಅನುಮೋದನೆ ನೀಡುತ್ತದೆ. ತದನಂತರವೇ ನಗರಸಭೆ ಫಾರ್ಮ್-3 ನೀಡಬೇಕು. ಅಂದಾಗ ಮಾತ್ರ ಮುಂದೆ ಖರೀದಿ ಆಗುತ್ತದೆ. ಆದ್ರೆ, ನಗರಸಭೆ ಅಧಿಕಾರಿಗಳು ಸರ್ಕಾರದ ಎಲ್ಲ ಕಾನೂನು ಉಲ್ಲಂಘಿಸಿ ರಿಯಲ್ ಎಸ್ಟೆಟ್ ಕುಳಗಳು ನೀಡುವ ಹಣ ಪಡೆದು ಫಾರ್ಮ್-3 ನೀಡಿದ್ದಾರೆ. ಅದೇ ನಗರಸಭೆ ಈಗ ಸೈಟ್ ಖರೀದಿ ಮಾಡಿದ ಬಡ, ಸಾಮಾನ್ಯ ಜನರಿಗೆ ಫಾರ್ಮ್-3 ನೀಡುತ್ತಿಲ್ಲ.

ನಗರಸಭೆ ಸಾಥ್ ನೀಡಿದ ಆರೋಪ

ಅಷ್ಟೇ ಅಲ್ಲ, ಮನೆ ನಿರ್ಮಾಣಕ್ಕೆ ಅನುಮತಿ ಕೂಡ ನೀಡುತ್ತಿಲ್ಲ.ಈ ಕುರಿತು ಪ್ರಶ್ನಿಸಿದರೆ, ನಿಮ್ಮ ಲೇಔಟ್ ಪೂರ್ಣ ಆಗಿಲ್ಲ. ಹೀಗಾಗಿ ನೀಡುವುದಿಲ್ಲ ಅಂತಿದ್ದಾರೆ. ಇದು ಸೈಟ್ ಖರೀದಿ ಮಾಡಿದ ಅವಳಿ ನಗರದ ಅಮಾಯಕ ಜನರು ಕಂಗಾಲಾಗುವಂತೆ ಮಾಡಿದೆ. ಸರ್ಕಾರದ ಎಲ್ಲ ಕಾನೂನು ಗಾಳಿಗೆ ತೂರಿ ರೀಯಲ್ ಎಸ್ಟೇಟ್ ಮಾಲೀಕರು ಬೇಕಾಬಿಟ್ಟಿ ಮಾರಾಟ ನಡೆಸಿದ್ದಾರೆ. ಯಾವುದೇ ಲೇಔಟ್​ಗಳಲ್ಲಿ ‌ಕನಿಷ್ಠ ಸೌಲಭ್ಯವನ್ನು ರಿಯಲ್ ಎಸ್ಟೇಟ್ ‌ಮಾಲೀಕರು ನೀಡಿಲ್ಲ. ಅನುಮೋದನೆ ಇಲ್ಲದ ಅಕ್ರಮ ಲೇಔಟ್ ಮಾಲೀಕರಿಗೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಾಥ್ ನೀಡಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದ ಅವಳಿ ನಗರದ ಜನರ ಕನಸು ಕನಸಾಗಿಯೇ ಉಳಿದಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದ ಅವಳಿ ನಗರದ ಜನ ಗೋಳಾಡುವಂತಾಗಿದೆ ಎಂದು ಜನ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಅಕ್ರಮ ಆಸ್ತಿಗೆ ತೆರಿಗೆ; ಬಿಬಿಎಂಪಿ ನಿಯಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ

ಗದಗ-ಬೆಟಗೇರಿ ಅಭಿವೃದ್ಧಿ ಪ್ರಾಧಿಕಾರ ಪ್ರಕಾರ ಗದಗ-ಬೆಟಗೇರಿ ಅವಳಿ ನಗರದ 260ಕ್ಕೂ ಅಧಿಕ ಲೇಔಟ್​ಗಳಲ್ಲಿ ಸುಮಾರು 60 ಲೇಔಟ್​ಗಳಿಗೆ ಮಾತ್ರ ಅಂತಿಮ ಅನುಮೋದನೆ ಹೊಂದಿವೆ. ಹೀಗಾಗಿ ಸೈಟ್ ಖರೀದಿ ಮಾಡಿದ‌ ಅಮಾಯಕ ಸಾವಿರಾರು ಜನರು ಈಗ ಕಂಗಾಲಾಗಿದ್ದಾರೆ. ಲೇಔಟ್ ಮಾಲೀಕರು ಕಾನೂನು ಮೀರಿ ಮಾರಾಟಕ್ಕೆ ನಗರಸಭೆ ಅಧಿಕಾರಿಗಳು ಸಾಥ್ ನೀಡಿದ್ದು, ದಾಖಲೆಗಳಲ್ಲಿ ಗೊತ್ತಾಗಿದೆ. ಅಷ್ಟಕ್ಕೇ ಸುಮ್ಮನಾಗದ ನಗರಸಭೆ, ಸಿಸಿ ಇಲ್ಲದ ಲೇಔಟ್​ಗಳಲ್ಲಿ ಮನೆಗಳ ಕಟ್ಟಡಕ್ಕೂ ಅನುಮತಿ ‌ನೀಡಿದೆ.

ರಿಯಲ್ ಎಸ್ಟೇಟ್ ‌ಮಾಲೀಕರ ಎಂಜಲು‌ ಕಾಸಿಗೆ ಅವಳಿ ನಗರದ ಸಾವಿರಾರು ಜನರಿಗೆ ಅಧಿಕಾರಿಗಳು ಮೋಸ‌ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ‌ ಮನೆ ಕಟ್ಟಿದ, ಸೈಟ್ ಖರೀದಿ ಮಾಡಿದ ಸಾವಿರಾರು ಜನರು ಈಗ ವಿಲವಿಲ ಅಂತಿದ್ದಾರೆ. ಇಷ್ಟೊಂದು ದೊಡ್ಡ ಮಾಫಿಯಾ‌ ಅವಳಿ ನಗರದಲ್ಲಿ ನಡೆದರೂ ಗದಗ-ಬೆಟಗೇರಿ ಅಭಿವೃಧ್ಧಿ ಪ್ರಾಧಿಕಾರ ಡೋಂಟ್ ಕೇರ್ ಅಂತಿದೆ. ಎರಡು ವರ್ಷದ ಹಿಂದೆ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಾನೂನು ಮೀರಿದ ಲೇಔಟ್ ಮಾಲೀಕರಿಗೆ ನೋಟಿಸ್ ನೀಡಿತ್ತು. ಆದ್ರೆ, ವರ್ಷಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ.

ಲೇಔಟ್ ಮಾಲೀಕರು ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯಿಸಿದ್ದಾರೆ. ಗದಗ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿ ಗಪ್ ಚುಪ್ ಆಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಾಮಾನ್ಯ ಜನರಿಗೆ ಆಗುತ್ತಿರುವ ಅನ್ಯಾಯ ಸರಿ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sat, 5 October 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ