Gadag: ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಪೊಲೀಸರಿಂದ ಮೊಬಿಫೈ ತಂತ್ರಜ್ಞಾನ ಜಾರಿ; ಏನಿದರ ವೈಶಿಷ್ಟ್ಯ, ಇಲ್ಲಿದೆ ಮಾಹಿತಿ

ಗದಗವನ್ನು ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಗದಗ ಪೊಲೀಸ್​​ ಇಲಾಖೆ ಹೊಸ ಮಾರ್ಗವೊಂದನ್ನು ಕಂಡುಕೊಂಡಿದೆ. ಗದಗ ನಗರದ ಯಾವುದೇ ಭಾಗದಲ್ಲಿ ಮೊಬೈಲ್​ ಕಳ್ಳತನವಾದರೂ ಸುಲಭವಾಗಿ ಪತ್ತೆಹಚ್ಚಲು "ಮೊಬಿಫೈ" ತಂತ್ರಜ್ಞಾನವೊಂದನ್ನು ಪ್ರಾರಂಭಿಸಿದೆ.

Gadag: ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಪೊಲೀಸರಿಂದ ಮೊಬಿಫೈ ತಂತ್ರಜ್ಞಾನ ಜಾರಿ; ಏನಿದರ ವೈಶಿಷ್ಟ್ಯ, ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 21, 2023 | 1:47 PM

ಗದಗ: ಗದಗ (Gadag) ಅನ್ನು ಮೊಬೈಲ್​ ಕಳ್ಳತನ ಮುಕ್ತ ನಗರವಾಗಿಸಲು ಗದಗ ಪೊಲೀಸ್​​ ಇಲಾಖೆ (Gadag Police Department) ಹೊಸ ಮಾರ್ಗವೊಂದನ್ನು ಕಂಡುಕೊಂಡಿದೆ. ಗದಗ ನಗರದ ಯಾವುದೇ ಭಾಗದಲ್ಲಿ ಮೊಬೈಲ್​ ಕಳ್ಳತನವಾದರೂ ಸುಲಭವಾಗಿ ಪತ್ತೆಹಚ್ಚಲು “ಮೊಬಿಫೈ” (Mobify technology) ತಂತ್ರಜ್ಞಾನವೊಂದನ್ನು ಪ್ರಾರಂಭಿಸಿದೆ. ಈ ಮೂಲಕ ಗದಗ ನಗರವನ್ನು ಮೊಬೈಲ್​ ಕಳ್ಳತನ ಮುಕ್ತವನ್ನಾಗಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಈ ಮೊಬಿಫೈ ನಾಲ್ಕು ದಿನಗಳ ಹಿಂದೆ ಪ್ರಾರಂಭಿಸಲಾಗಿದ್ದು, ಶನಿವಾರ (ಫೆ.18) ರವರೆಗೆ ಈಗಾಗಲೇ 200 ಪ್ರಕರಣಗಳು ದಾಖಲಾಗಿವೆ.

ಸದ್ಯ ಪೊಲೀಸ್​ ಇಲಾಖೆ ಈ ಪ್ರಕರಣಗಳನ್ನು ಒಂದೊಂದಾಗಿ ತನಿಖೆ ನಡೆಸುತ್ತಿದೆ. ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಗದಗ ಪೊಲೀಸ್​ ಇಲಾಖೆಗೆ ಸಲ್ಲುತ್ತದೆ. ಇನ್ಮುಂದೆ ಜನರು ಮೊಬೈಲ್​ ಕಳ್ಳತನವಾದ ಬಳಿಕ ಪೊಲೀಸ್​ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಮೊಬೈಲ್​ ಕಳೆದುಕೊಂಡಿರುವ ವ್ಯಕ್ತಿ ತಾನು ಇದ್ದ ಜಾಗದಿಂದಲೇ ವೇಗವಾಗಿ ಮೊಬಿಫೈ ಮೂಲಕ ದೂರು ನೀಡಬಹುದಾಗಿದೆ.

ದೂರುದಾರ, ಮೊಬಿಫೈ ತಂತ್ರಜ್ಞಾನದ ಮೂಲಕ, ಪೊಲೀಸ್​​ ಇಲಾಖೆ ನೀಡಿದ ನಂಬರ್​ಗೆ ಸಂದೇಶ ರವಾನೆ ಮಾಡಬೇಕು. ಇದರಿಂದ ದೂರುದಾರನ ಬೊಬೈಲ್​ನನ್ನು ಬ್ಲಾಕ್​​ ಮಾಡಲಾಗುತ್ತದೆ. ಇದರಿಂದ ಕಳ್ಳನಿಗೆ ಕದ್ದ ಮೊಬೈಲ್​ನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಆಗ ಕದ್ದ ಮೊಬೈಲ್​ ಡಮ್ಮಿಯಾಗುತ್ತದೆ. ಇದರಿಂದ ಕಳ್ಳರು ಮೊಬೈಲ್​ ಕಳ್ಳತನಕ್ಕೆ ಕೈ ಹಾಕುವುದಿಲ್ಲ. ಈ ಮೂಲಕ ಮೊಬೈಲ್ ಕಳ್ಳತನ ಮುಕ್ತ ನಗರವಾಗಲಿದೆ. ಈ ಹೊಸ ತಂತ್ರಜ್ಞಾನಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿ ನಿಮಿಷಕ್ಕೊಂದು ಪ್ರಕರಣ ದಾಖಲಾಗುತ್ತಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಈ ಬಗ್ಗೆ ಗದಗ ಎಸ್​ಪಿ ಬಿಎಸ್​ ನೇಮಗೌಡ ಮಾತನಾಡಿ ನಾವು ಮೊದಲು ಪ್ರಾಯೋಗಿಕವಾಗಿ ಜಾರಿಗೆ ಮಾಡಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇದನ್ನು ಉತ್ತಮಗೊಳಿಸಿ ಜಾರಿಮಾಡಲಾಗುತ್ತದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ತಂತ್ರಜ್ಞಾನದಿಂದ ಕದ್ದ ಮೊಬೈಲ್​ ಟ್ರ್ಯಾಕಿಂಗ್​, ಬ್ಲಾಕ್​, ಮೊಬೈಲ್​ ಲೊಕೇಶನ್​ ಪತ್ತೆ ಹಚ್ಚಲು ಸುಲಭವಾಗುತ್ತಿದೆ. ಮತ್ತು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರಯೋಗ ಮಾಡುತ್ತಿರುವುದು ಗದಗ ನಗರ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಏನಿದು ಮೊಬಿಫೈ ತಂತ್ರಜ್ಞಾನ

ಯಾರು ಮೊಬೈಲ್​ನ್ನು ಕಳೆದುಕೊಂಡಿರುತ್ತಾರೋ ಅವರು ಬೇರೊಂದು ಮೊಬೈಲ್​ನಿಂದ ಹಾಯ್​ ಎಂದು 8277969900 ನಂಬರ್​ ಅಥವಾ ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಕ್ಯೂ ಆರ್​ ಕೋಡ್​​ ಅನ್ನು ಸ್ಕ್ಯಾನ್​ ಮಾಡಬೇಕು. ಇದರಿಂದ ಇಲಾಖೆಯ Whatsapp ಸಂಖ್ಯಗೆ ಸಂದೇಶ ಹೋಗುತ್ತದೆ.

ಕೂಡಲೇ ಇಲಾಖೆ ನಿಮಗೆ ಲಿಂಕ್​ವೊಂದನ್ನು ಕಳುಹಿಸುತ್ತದೆ. ಆಗ ಲಿಂಕ್​ ಒತ್ತಿ ನೀವು ಕಳೆದುಕೊಂಡ ಮೊಬೈಲ್​​ನ ಮಾಹಿತಿ ದಾಖಲಿಸಬೇಕು. ಇದರ ಮೂಲಕ ಮೊಬೈಲ್​ ಲೊಕೇಶನ್ ಪತ್ತೆಹಚ್ಚಲಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೇ ಮೊಬೈಲ್​ನಲ್ಲಿದ್ದ ನಿಮ್ಮ ಖಾಸಗಿ ಮಾಹಿತಿಗಳನ್ನು ರಕ್ಷಣೆ ಮಾಡಲು ಮೊಬೈಲ್​ನ್ನು ಬ್ಲಾಕ್​​ ಮಾಡಲಾಗುತ್ತದೆ. ಇದೇ ಮಾಹಿತಿಯನ್ನು ಇಲಾಖೆ Central Equipment Identity Register (CEIR) ನೊಂದಿಗೆ ಹಂಚಿಕೊಳ್ಳುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:18 pm, Tue, 21 February 23