ಧ್ವಜಾರೋಹಣಕ್ಕೆಂದು ಗಾರ್ಡನ್​ಗೆ ಹೋಗಿದ್ದಾಗ ಮನೆ ಕಳ್ಳತನ: ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ದಂಪತಿ ಹಣ, ಚಿನ್ನ ಕಳೆದುಕೊಂಡು ಕಂಗಾಲು

ಇಂದು ಗದಗ-ಬೆಟಗೇರಿ ಅವಳಿ ನಗರದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಜನ್ರು ಹಾಗೂ ಪೊಲೀಸ್ ಇಲಾಖೆ ಇತ್ತು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಕಿಲಾಡಿ ಕಳ್ಳರು ಬೆಳ್ಳಂಬೆಳಗ್ಗೆಯೇ ಮನೆಯೊಂದನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.

ಧ್ವಜಾರೋಹಣಕ್ಕೆಂದು ಗಾರ್ಡನ್​ಗೆ ಹೋಗಿದ್ದಾಗ ಮನೆ ಕಳ್ಳತನ: ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ದಂಪತಿ ಹಣ, ಚಿನ್ನ ಕಳೆದುಕೊಂಡು ಕಂಗಾಲು
ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ದಂಪತಿ ಹಣ, ಚಿನ್ನ ಕಳೆದುಕೊಂಡು ಕಂಗಾಲು
Follow us
TV9 Web
| Updated By: ಆಯೇಷಾ ಬಾನು

Updated on: Aug 15, 2022 | 11:09 PM

ಗದಗ: ಇಡೀ ದೇಶ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಅದರಂತೆಯೇ ಗದಗದ ದಂಪತಿ ಕೂಡ ಮುಂಜಾನೆ ಧ್ವಜಾರೋಹಣಕ್ಕೆಂದು ಪಕ್ಕದ ಗಾರ್ಡನ್ ಗೆ ಹೋಗಿದ್ರು. ಆದ್ರೆ ಕಿಲಾಡಿ ಕಳ್ಳರು ಹೊಂಚು ಹಾಕಿಕೊಂಡು ಕಳುತ್ತಿದ್ರು. ದಂಪತಿಗಳು ಧ್ವಜಾರೋಹಣಕ್ಕೆ ಹೋಗಿದ್ದೇ ತಡ ಇಡೀ ಮನೆಯಲ್ಲಿದ್ದ ಲಕ್ಷಾಂತರ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸಂಭ್ರಮದಲ್ಲಿದ್ದ ದಂಪತಿ ಹಣ, ಚಿನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ.

ಹಿತ್ತಲ ಬಾಗಿಲು ಮುರಿದು ಮನೆಗೆ ಎಂಟ್ರಿ ಕೊಟ್ಟ ಕಳ್ಳರು

ಇಂದು ಗದಗ-ಬೆಟಗೇರಿ ಅವಳಿ ನಗರದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಜನ್ರು ಹಾಗೂ ಪೊಲೀಸ್ ಇಲಾಖೆ ಇತ್ತು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಕಿಲಾಡಿ ಕಳ್ಳರು ಬೆಳ್ಳಂಬೆಳಗ್ಗೆಯೇ ಮನೆಯೊಂದನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಗದಗನ ಹೋಡ್ಕೋ ಕಾಲೋನಿಯ ಸಿದ್ದಲಿಂಗ ನಗರದ ನಿವಾಸಿಯಾದ ಬಸವರಾಜ್ ರಾಯಪುರ ಎನ್ನುವವರ ಮನೆ ಕಳ್ಳತನ ಮಾಡಲಾಗಿದೆ. ಮೂಲತಃ ಕ್ರಷರ ಮಾಲೀಕರಾದ ಬಸವರಾಜ್ ರಾಯಪುರ, ಹಾಗೂ ಅವರ ಧರ್ಮ ಪತ್ನಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ರು. ಸಿದ್ದಲಿಂಗ ನಗರದ ಬಡಾವಣೆಯ ಎಲ್ಲಾ ಜನ್ರು ಸೇರಿಕೊಂಡು, ಉದ್ಯಾನವನದಲ್ಲಿ ಧ್ವಜಾರೋಹಣ ಮಾಡಲು ಹೋಗಿದ್ರು. ದಂಪತಿ ಕೂಡ ಆಜಾದಿ ಕಾ ಅಮೃತ ಮಹೋತ್ಸವದ ಧ್ವಜಾರೋಹಣಕ್ಕೆ ಗಾರ್ಡನ್ ಗೆ ಹೋಗಿದ್ದಾರೆ. ಮೊದಲೇ ಪ್ಲಾನ್ ಮಾಡಿದ್ದ ಕಿಲಾಡಿಗಳು, ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಮುರಿದು, ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿನ 250 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂಪಾಯಿ ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ ಅಂತ ಮನೆ ಮಾಲೀಕ ಬಸವರಾಜ್ ರಾಯಪೂರ ತಿಳಿಸಿದ್ದಾರೆ. ಧ್ವಜಾರೋಹಣ ಮುಗಿಸಿ ಮನೆಗೆ ಬಂದ್ ದಂಪತಿ ಶಾಕ್ ಆಗಿದ್ದಾರೆ. ಮನೆಯಲ್ಲಿ ಚೆಲ್ಲಾಪಿಲ್ಲಿಯಾದ ವಸ್ತುಗಳನ್ನು ನೋಡಿ ಕಂಗಾಲಾದ ಮನೆಯ ಯಜಮಾನ ಕಳ್ಳತನವಾಗಿದೆ ಎಂದು ಪಕ್ಕಾ, ಮಾಡಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ತಿಂಗಳಲ್ಲಿ ಒಂದು ಎರಡು, ಮನೆಗಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಅದರಲ್ಲೂ ಇಂದು ಸ್ವಾತಂತ್ರ್ಯೋತ್ಸವ ಇರುವುದರಿಂದ ಜನ್ರು ಹಾಗೂ ಪೊಲೀಸ್ ಇಲಾಖೆ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವದನ್ನು ಖಾತ್ರಿ ಮಾಡಿಕೊಂಡೆ, ಜನನಿಬಿಡ ಪ್ರದೇಶದಲ್ಲಿ ಮನೆಯಲ್ಲಿ ಟಾರ್ಗೆಟ್ ಮಾಡಿಕೊಂಡು ಅಟ್ಯಾಕ್ ಮಾಡಿದ್ದಾರೆ. ಇನ್ನೂ ಮನೆಯಲ್ಲಿ ಸಿಸಿ ಕ್ಯಾಮರಾ ಕೂಡಾ ಬಂದ್ ಆಗಿವೆ. ಕಿಲಾಡಿ ಕಳ್ಳರು ಕಾರು ತೆಗೆದುಕೊಂಡು, ಮೂರ್ನಾಲು ಜನ್ರು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು, ಮನೆಯನ್ನು ದೋಚಿದ್ದಾರೆ ಎನ್ನಲಾಗಿದೆ. ಕಳ್ಳತನ ನಡೆದಿರೋ ವಿಷಯ ತಿಳಿದ ಕೂಡಲೇ ಗದಗ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಿಟ್ಟು, ದೌಡಾಯಿಸಿ ಬಂದಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಯನ್ನು ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ಗಂಭೀರವಾಗಿ ಪರಿಗಣಿಸಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ