ಬಿತ್ತನ ಬಳಿಕ ಚಿಗುರೊಡೆದಿದ್ದ ಬೆಳೆ! ದಾಯಾದಿಗಳೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದರು

ಗದಗ ಜಿಲ್ಲೆಯ ಅವರೆಲ್ಲರು ಒಂದೇ ಕುಟುಂಬಸ್ಥರು. ಆದ್ರೆ, ಅದೊಂದು ಜಮೀನಿಗಾಗಿ ಈ ಎರಡು ಕುಟುಂಬಗಳ ನಡುವೆ ದೊಡ್ಡ ಕಲಹವೇ ಏರ್ಪಟ್ಟಿದೆ. ನೀ ಕೊಡೆ, ನಾ ಬಿಡೇ ಎಂದು ಗುದ್ದಾಟ ನಡೆದಿದೆ. ಈ ಮಧ್ಯೆ ಒಂದು ಕುಟುಂಬ ಇಡೀ ಜಮೀನಿನಲ್ಲಿ ಬದನೆಕಾಯಿ, ಬೆಂಡಿಕಾಯಿ, ಕೋತಂಬರಿ, ಮೆಂತ್ಯ ಸೇರಿ ವಿವಿಧ ತರಕಾರಿ ಬಿತ್ತನೆ ಮಾಡಿತ್ತು. ನಿನ್ನೆ(ಜೂ.07) ಬೆಳ್ಳಂಬೆಳಗ್ಗೆ ಇಡೀ ಜಮೀನನ್ನು ಸರ್ವನಾಶ ಮಾಡಿದ್ದಾರೆ. ತಡೆಯಲು ಬಂದವರ ಮೇಲೆ ಹಲ್ಲೆ ಮಾಡಿ ಓಡಿಸಿದ್ದಾರೆ. ಹೀಗಾಗಿ ದಾಯಾದಿಗಳ ನಡುವೆ ಈಗ ಮತ್ತೆ ಬಿಗ್ ಫೈಟ್ ಶುರುವಾಗಿದೆ.

ಬಿತ್ತನ ಬಳಿಕ ಚಿಗುರೊಡೆದಿದ್ದ ಬೆಳೆ! ದಾಯಾದಿಗಳೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದರು
ಬೆಲದಡಿ ಗ್ರಾಮದಲ್ಲಿ ಬೆಳೆ ನಾಶ ಮಾಡಿದ ಸಂಬಂಧಿಕರು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 08, 2024 | 4:19 PM

ಗದಗ, ಜೂ.08: ‘ಗದಗ ತಾಲೂಕಿನ ಬೆಳದಡಿ(Beladhadi) ಗ್ರಾಮದಲ್ಲಿ. ಸೋಮಪ್ಪ ತೋಟದ ಹಾಗೂ ಶಿವಪ್ಪ ತೋಟದ ಕುಟುಂಬಗಳ ಮಧ್ಯೆ ಜಮೀನು ಯುದ್ಧ ಶುರುವಾಗಿದೆ. ಇದು ಮೂರು ತಲೆಮಾರಿನ ಜಮೀನು. ಸಧ್ಯ ಈ ಜಮೀನು ಸೋಮಪ್ಪ ತೋಟದ ಕುಟುಂಬ ಉಳುಮೆ ಮಾಡುತ್ತಿದೆ. ಹೀಗಾಗಿ ಸರ್ವೇ ನಂಬರ್ 94 ಹಾಗೂ 116 ರ ಸುಮಾರು ಮೂರು ಎಕರೆ ಜಮೀನಿನಲ್ಲಿ ಬದನೆಕಾಯಿ, ಬೆಂಡಿಕಾಯಿ, ಮೆಂತ್ಯ ಸೇರಿದಂತೆ ವಿವಿಧ ಬೆಳೆಗಳಿಗೆ 15 ದಿನಗಳ ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದಾರೆ. ಶಿವಪ್ಪ ತೋಟದ ಕುಟುಂಬ ಸದಸ್ಯರು ನಿನ್ನೆ(ಜೂ.07) ಬೆಳ್ಳಂಬೆಳಗ್ಗೆ ಜಮೀನಿಗೆ ನುಗ್ಗಿ ಐದು ಟ್ರ್ಯಾಕ್ಟರ್​ಗಳ ಮೂಲಕ ಇಡೀ ಜಮೀನು ಹರಗುವ ಮೂಲಕ ಎಲ್ಲ ತರಕಾರಿ ಬೆಳೆ ಸರ್ವನಾಶ ಮಾಡಿದ್ದಾರೆ.

ನ್ಯಾಯಕ್ಕಾಗಿ ಗದಗ ಗ್ರಾಮೀಣ ಪೊಲೀಸ್ ಠಾಣೆ ಎದುರು ಗೋಳಾಟ

ವಿಷಯ ಕೇಳಿ ಸೋಮಪ್ಪ ತೋಟದ ಇಡೀ ಕುಟುಂಬ ಜಮೀನಿಗೆ ಓಡೋಡಿ ಬಂದಿದೆ. ತಡೆಯಲು ಯತ್ನಿಸಿದ್ದಾರೆ. ಆಗ ಶಿವಪ್ಪ ತೋಟದ ಕುಟುಂಬಸ್ಥರು ಮಹಿಳೆಯರು, ಮಕ್ಕಳು ಸೇರಿ ಎಲ್ಲರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆ, ಕುಟುಂಬಸ್ಥರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರು ವರ್ಷದ ಮಗುವಿನ ಮೇಲೂ ಕಿರಾತಕರು ಅಟ್ಟಹಾಸ ತೋರಿದ್ದು, ಮಗುವಿಗೆ ಗಾಯವಾಗಿದೆ. ವಾಲು ಮಾನಪ್ಪ ತೋಟದ, ರಾಮು ತೋಟದ, ನೇಮಪ್ಪ ತೋಟದ, ಕಾಳಪ್ಪ ತೋಟದ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಸೋಮಪ್ಪನ ಕುಟುಂಬ ನ್ಯಾಯಕ್ಕಾಗಿ ಗದಗ ಗ್ರಾಮೀಣ ಪೊಲೀಸ್ ಠಾಣೆ ಎದುರು ಗೋಳಾಡುತ್ತಿದೆ. ದೂರು ದಾಖಲಿಸಿಕೊಳ್ಳದೇ ಗ್ರಾಮೀಣ ಪೊಲೀಸ್ರು ಸತಾಯಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಒಂದೂವರೆ ಎಕರೆ ಜಮೀನಿಗಾಗಿ ಚಿಕ್ಕಪ್ಪನನ್ನೇ ಕೊಂದ ಮಗ

ಕಾಪಾಡಿ ಎಂದರೂ ಪೊಲೀಸರು ಡೋಂಟ್ ಕೇರ್

ಪೊಲೀಸ್ ಠಾಣೆ ಎದುರು ಕಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಜಮೀನಿನಲ್ಲಿ ಐದು ಟ್ರ್ಯಾಕ್ಟರ್​ಗಳಿಂದ ಬೆಳೆ ನಾಶ ಮಾಡುತ್ತಿದ್ದಾರೆ ಕಾಪಾಡಿ ಎಂದರೂ ಪೊಲೀಸರು ಡೋಂಟ್ ಕೇರ್ ಎಂದಿರುವುದಾಗಿ ಹೇಳಿಕೊಂಡು ಟಿವಿ9 ಎದುರು ಕುಟುಂಬಸ್ಥರು ಗೋಳು ತೋಡಿಕೊಂಡಿದ್ದಾರೆ. ಈ ವಿಷಯ ಗದಗ ಎಸ್ಪಿ ಬಿ ಎಸ್ ನೇಮಗೌಡ ಅವ್ರ ಗಮನಕ್ಕೆ ತಂದ ಬಳಿಕ ತಕ್ಷಣ ಸ್ಪಂದಿಸಿದ ಎಸ್ಪಿ ನೇಮಗೌಡ ಕೂಡಲೇ ದೂರು ದಾಖಲಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಎಸ್ಪಿ ಅವರ ಸೂಚನೆ ಬಳಿಕ ಅಲರ್ಟ್ ಆದ ಪೊಲೀಸ್ರು, ರಕ್ಷಣೆಗೆ ಮುಂದಾಗಿದ್ದಾರೆ.

ಪೊಲೀಸರು ಬೇಗ ಸ್ಪಂದಿಸಿದ್ರೆ ನಮ್ಮ ಬೆಳೆ ಉಳಿಯುತ್ತಿತ್ತು. ಆದ್ರೆ, ಪೊಲೀಸರು ‌ತಕ್ಷಣಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಶಿವಪ್ಪ ತೋಟದ ಕುಟುಂಬಸ್ಥರನ್ನು ಕೇಳಿದ್ರೆ ಇಲ್ಲ ಸರ್ 1978ರಲ್ಲಿ ಈ ಜಮೀನು ಎಲ್ಲರಿಗೂ ಹಂಚಿಕೆಯಾಗಬೇಕು ಎಂದು ಆದೇಶ ಆಗಿದೆ. ಹೀಗಾಗಿ ಈ ಜಮೀನಿನಲ್ಲಿ ನಮ್ಮದೂ ಹಿಸ್ಸಾ ಇದೆ. ಇದು ನಮ್ಮ ಜಮೀನು ಇದರಲ್ಲಿ ಏನೂ ಬೆಳೆ ಇಲ್ಲ. ನಮ್ಮ ಜಮೀನು ನಾವು ಹರಗಿದ್ದೇವೆ ಅಂತಿದ್ದಾರೆ.

ಊರು ಪಕ್ಕಕ್ಕೆ ಫಲವತ್ತಾ ಜಮೀನು ಇದೆ. ಇಲ್ಲಿನ ಒಂದು ಎಕರೆ ಜಮೀನು ಕೋಟಿ ಬೆಲೆ ಬಾಳುತ್ತೆ. ಇದೇ ಇದೇ ಕಾರಣಕ್ಕೆ ಸಹೋದರರ ನಡುವೆ ಎರಡು ತಲೆಮಾರುಗಳಿಗೆ ಗುದ್ದಾಟ ಶುರುವಾಗಿದೆ. ಎರಡು ಕುಟುಂಬಗಳು ಈ ಜಮೀನು ನಮ್ದು ನಮ್ದು ಅಂತಿವೆ. ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸ್ ತನಿಖೆಯಿಂದಲೇ ಈ ಜಮೀನು ಯಾರಿಗೆ ಸೇರಿದ್ದೂ ಅನ್ನೋದು ಗೋತ್ತಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕೇಂದ್ರವನ್ನು ಟೀಕಿಸಿದ್ದ ಇವರು ಈಗ ಬೆಲೆ ಏರಿಕೆ ಮಾಡಿದ್ಯಾಕೆ? ಕುಮಾರಸ್ವಾಮಿ
ಕೇಂದ್ರವನ್ನು ಟೀಕಿಸಿದ್ದ ಇವರು ಈಗ ಬೆಲೆ ಏರಿಕೆ ಮಾಡಿದ್ಯಾಕೆ? ಕುಮಾರಸ್ವಾಮಿ
ದರ್ಶನ್-ಪವಿತ್ರಾ ಗೌಡ ಅವರನ್ನು ನ್ಯಾಯಾಲಯಕ್ಕೆ ಕರೆತಂದ ವಿಡಿಯೋ
ದರ್ಶನ್-ಪವಿತ್ರಾ ಗೌಡ ಅವರನ್ನು ನ್ಯಾಯಾಲಯಕ್ಕೆ ಕರೆತಂದ ವಿಡಿಯೋ
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ದರ್ಶನ್ ಕೇಸ್ನಲ್ಲಿ ಒತ್ತಡ ಹಾಕ್ತಿರೋ ಆ ಸಚಿವ ಯಾರು? ಜಾರಕಿಹೊಳಿ ಏನಂದ್ರು
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಸಫಾರಿ ಕಾರಿನಲ್ಲಿ ಬಂದು ಬಿಡಾಡಿ ದನ ಕಳ್ಳತನಕ್ಕೆ ಯತ್ನ; ವಿಡಿಯೋ ವೈರಲ್​
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಮೇಕೆದಾಟು ಬಗ್ಗೆ ಕೇಂದ್ರ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದ್ದೇನು?
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಕೊಲೆಗಡುಕರಿಗೆ ಶಿಕ್ಷೆ ಆಗಲಿ; MLA ಮುಂದೆ ಮೃತ ರೇಣುಕಾ ಸ್ವಾಮಿ ತಾಯಿ ಗೋಳಾಟ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ಲಕ್ಷ ವೃಕ್ಷ ಯೋಜನೆಗೆ ಸಿದ್ದರಾಮಯ್ಯ ಚಾಲನೆ: 5ಕೋಟಿ ಗಿಡ ಬೆಳೆಸುವ ಗುರಿ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ದರ್ಶನ್-ಪವಿತ್ರಾ ಗೌಡ ಸಂಬಂಧದ ಬಗ್ಗೆ ವಕೀಲರ ಸ್ಪಷ್ಟನೆ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್​ಡಿ ಕುಮಾರಸ್ವಾಮಿ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ
ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಶಿಕ್ಷಣದ ಕೊರತೆ ಇದೆ; ಅಡ್ಡಂಡ