ಕೌಟುಂಬಿಕ ಕಲಹ: ಮಲಗಿದ್ದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪುತ್ರ
ಕಾರು ಚಾಲಕನ ಗಮನ ಬೇರೆಡೆ ಸೆಳದು 18 ಲಕ್ಷ ಕಳ್ಳತನ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ. ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ನಿಂದ 18 ಲಕ್ಷ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿಟ್ಟಿದ್ದ ವೇಳೆ ಕಾರಿನ ಮುಂಭಾಗದ ಮೇಲೆ ಆಯಿಲ್ ಹಾಕಿ ಗಮನ ಬೇರೆಡೆ ಸೆಳೆದ ಖದೀಮರು ಹಣ ಎಗರಿಸಿದ್ದಾರೆ.
ಗದಗ: ಮಲಗಿದ್ದ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಪುತ್ರ ಕೊಲೆಗೈದ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. ಪುತ್ರ ವಿಜಯ್‌ನಿಂದ ಗಣೇಶ್(51) ಬರ್ಬರ ಕೊಲೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎಸ್‌ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಮನ ಬೇರೆಡೆ ಸೆಳೆದು 18 ಲಕ್ಷ ಕಳ್ಳತನ
ವಿಜಯಪುರ: ಕಾರು ಚಾಲಕನ ಗಮನ ಬೇರೆಡೆ ಸೆಳದು 18 ಲಕ್ಷ ಕಳ್ಳತನ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ. ಚಡಚಣ ಪಟ್ಟಣದ ಕರ್ನಾಟಕ ಬ್ಯಾಂಕ್ ನಿಂದ 18 ಲಕ್ಷ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿಟ್ಟಿದ್ದ ವೇಳೆ ಕಾರಿನ ಮುಂಭಾಗದ ಮೇಲೆ ಆಯಿಲ್ ಹಾಕಿ ಗಮನ ಬೇರೆಡೆ ಸೆಳೆದ ಖದೀಮರು ಹಣ ಎಗರಿಸಿದ್ದಾರೆ.
ಚಾಲಕ ಕಾರಿನ ಮುಂಭಾಗದತ್ತ ನೋಡುವಾಗ ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ವ್ಯಾಪಾರಿ ಸಿದ್ದಾರಾಮ ಕಾಪ್ಸೆ ಎಂಬುವವರ ಹಣ ಕಳ್ಳತನ ಆಗಿದೆ. ಘಟನೆ ವೇಳೆ ಸಿದ್ದರಾಮ ಬ್ಯಾಂಕ್ ನೊಳಗೆ ಇದ್ದರು. ಬೈಕ್ ಮೇಲೆ ಬಂದಿದ್ದ ಮೂವರು ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನಕ್ಕೆ ಹೊಂಚುಹಾಕಿದ್ದ ಯುವಕರನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಗದಗ: ರಾತ್ರಿ ಸಮಯದಲ್ಲಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಖದೀಮರನ್ನು ಸ್ಥಳೀಯರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ. ಜಿಲ್ಲೆಯ ನರಗುಂದ ಪಟ್ಟಣದ ಮೆಣಸಿನಕಾಯಿಯವರ ಓಣಿಯಲ್ಲಿ ಯುವಕರಿಬ್ಬರು ಅತ್ತಿಂದಿತ್ತ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದರು. ಈ ಅಪರಿಚಿತ ಯುವಕರ ಚಲನವಲನಗಳನ್ನು ಗಮನಿಸಿದ ಸ್ಥಳೀಯರು, ಅಲ್ಲಿಯೇ ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ. ಒಂದಕ್ಕೂ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಇನ್ನಷ್ಟು ಅನುಮಾನಗೊಂಡ ಸಾರ್ವಜನಿಕರು ಅವರು ಓಡಾಡುತ್ತಿದ್ದ ಸ್ಥಳದ ಮನೆಗಳನ್ನು ಪರಿಶೀಲಿಸಿದಾಗ ಯಾವುದೋ ಕಬ್ಬಿಣದ ವಸ್ತುವಿನಿಂದ ಮನೆಯೊಂದರ ಬಾಗಿಲಿನ ಬೀಗದ ತಟ್ಟೆಯನ್ನು ಒಡೆಯಲು ಪ್ರಯತ್ನಿಸಿರುವ ಅನುಮಾನ ವ್ಯಕ್ತವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಹಿಡಿದು ಥಳಿಸಿ ನರಗುಂದ ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ.
ಯುವಕರಲ್ಲಿ ಒಬ್ಬ ಬಾಗಲಕೋಟೆ ಮೂಲದ ಕಿರಣ್ ಎಂದು ಪತ್ತೆಯಾಗಿದ್ದು, ಈತನೊಂದಿಗಿದ್ದ ಇನ್ನೊಬ್ಬ ಅಪ್ರಾಪ್ತ ವಯೋಮಾನದ ಹುಡುಗನೆಂದು ತಿಳಿದುಬಂದಿದೆ. ಇವರು ಎಲ್ಲಿಯವರು, ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಣವೇನೆಂಬುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.
Published On - 9:01 pm, Wed, 17 August 22