ಮನೆಗಳ ನಡುವೆ ಹುದುಗಿ ಹೋದ ಐತಿಹಾಸಿಕ ದೇವಸ್ಥಾನ: ಲಕ್ಕುಂಡಿ ಗ್ರಾಮದಲ್ಲಿ ಒಕ್ಕಲೆಬ್ಬಿಸುವ ಆತಂಕ

ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದ್ದು, 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ವಿದೇಶಿ ಎನ್‌ಜಿಒ ಸಹಯೋಗದೊಂದಿಗೆ ತೆರೆದ ವಸ್ತುಸಂಗ್ರಹಾಲಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಲಕ್ಕುಂಡಿ ಇನ್ನು ಮುಂದೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲಿದೆ. ಆದಾಗ್ಯೂ, ದೇವಸ್ಥಾನಗಳ ಸಮೀಪದ ನಿವಾಸಿಗಳಿಗೆ ಸ್ಥಳಾಂತರದ ಆತಂಕ ಎದುರಾಗಿದೆ.

ಮನೆಗಳ ನಡುವೆ ಹುದುಗಿ ಹೋದ ಐತಿಹಾಸಿಕ ದೇವಸ್ಥಾನ: ಲಕ್ಕುಂಡಿ ಗ್ರಾಮದಲ್ಲಿ ಒಕ್ಕಲೆಬ್ಬಿಸುವ ಆತಂಕ
ಮನೆ, ಐತಿಹಾಸಿಕ ದೇವಸ್ಥಾನ
Image Credit source: tv9 kannada
Edited By:

Updated on: Feb 02, 2026 | 9:33 PM

ಗದಗ, ಫೆಬ್ರವರಿ 02: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಭರದಿಂದ ಉತ್ಖನನ ಕಾರ್ಯ (Excavation) ನಡೆಯುತ್ತಿದೆ. ಇನ್ನೊಂದೆಡೆ ಐತಿಹಾಸಿ ದೇವಸ್ಥಾನ ಮನೆಗಳ ಕಟ್ಟಡದಲ್ಲಿ‌ ಮಾಯವಾಗಿದೆ. ಈ ದೇವಸ್ಥಾನದ ಅಕ್ಕಪಕ್ಕದಲ್ಲಿ ವಾಸ ಮಾಡುತ್ತಿರುವ ಕುಟುಂಬಸ್ಥರಿಗೆ ಸ್ಥಳಾಂತರದ ಆತಂಕ ಎದುರಾಗಿದೆ. ಪುರಾತನ ಕಾಲದ ಗತ ವೈಭವ ಹೊಂದಿರುವ ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ವಿದೇಶಿ ಎನ್​​ಜಿಒ ಆಸಕ್ತಿ ಹೊಂದಿದ್ದು, ಲಕ್ಕುಂಡಿ ಇನ್ನು ಮುಂದೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಣೆ ಕೇಂದ್ರವಾಗಲಿದ್ದು, ದೇಶ ಹಾಗೂ ವಿದೇಶ ಗಮನ ಸೆಳೆಯುತ್ತಿದೆ.

50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆ

ಕಲ್ಯಾಣ ಚಾಳುಕ್ಯರು, ವಿಜಯನಗರ ಅರಸರು ಆಳ್ವಿಕೆ ಐತಿಹಾಸಿಕ ನಾಡು ಲಕ್ಕುಂಡಿ ಗ್ರಾಮ. ಇಂತಹ ಲಕ್ಕುಂಡಿ ಗ್ರಾಮದಲ್ಲಿ ಮಣ್ಣಿನಲ್ಲಿ ಅಡಗಿರೋ ಸಂಪತ್ತು, ಲಕ್ಕುಂಡಿಯ ಗತವೈಭವದ ಕುರುಹುಗಳ ಹೊರ ತೆಗೆಯುವ ಕೆಲಸ ಆಗ್ತಾಯಿದೆ. ಇಂದು‌ 15ನೇ ದಿನದ ಉತ್ಖನನ ಕಾರ್ಯ ನಡೆದಿದ್ದು, ಈವರಿಗೆ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಅಮೂಲ್ಯ ವಸ್ತುಗಳು ಸಿಗುತ್ತಾವೆ ಎನ್ನುವ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Lakkundi Excavation: ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಜ್ಜು

ಒಂದು ಕಡೆ ಉತ್ಖನನ ನಡೆಯುತ್ತಿದ್ದರೆ, ಇನ್ನೊಂದೆಡೆ ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಜನವರಿ 31ರಂದು ಗದಗ ಜಿಲ್ಲಾಧಿಕಾರಿ ಸಿ. ಎನ್ ಶ್ರೀಧರ್ ಅವರು ಲಕ್ಕುಂಡಿಯ ಪುರಾತನ ಕಾಲದ ಶ್ರೀ ಕುಂಬಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ಕುಂಬಾರೇಶ್ವರ ದೇವಸ್ಥಾನದ ಅಕ್ಕಪಕ್ಕದ 18ಕ್ಕೂ ಹೆಚ್ಚು ಮನೆಗಳನ್ನು ಸ್ಥಳಾಂತರ ‌ಮಾಡಲು‌ ಸೂಚನೆ ನೀಡಿದ್ದರು. ಈ ಕುಟುಂಬಸ್ಥರಿಗೆ ಈ ಹಿಂದೆ ಕೇಂದ್ರ ಪುರಾತತ್ವ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ಆದರೂ ಕೂಡ ಸ್ಥಳಾಂತರ ಕಾರ್ಯವಾಗಿಲ್ಲ. ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಶೀಘ್ರ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಕುಂಬಾರೇಶ್ವರ ದೇವಸ್ಥಾನದ ಅಕ್ಕಪಕ್ಕದ ಕುಟುಂಬಸ್ಥರಿಗೆ ಸ್ಥಳಾಂತರ ಆತಂಕ ಎಂದುರಾಗಿದೆ.

ಕುಂಬಾರೇಶ್ವರ ದೇವಸ್ಥಾನದ ಅಕ್ಕಪಕ್ಕ ಮನೆಗಳು ನಿರ್ಮಾಣ ಮಾಡಿರುವುದರಿಂದ ದೇವಾಲಯವೇ ಸ್ಪಷ್ಟವಾಗಿ‌ ಕಾಣುತ್ತಿಲ್ಲ. ಇನ್ನು ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿದೇಶಿ ಎನ್‌ಜಿಒ ಆಸಕ್ತಿ ತೋರಿಸಿದೆ. ಇಟಲಿ ಹಾಗೂ ಗ್ರೀಸ್ ದೇಶಗಳ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಪ್ರಾಚ್ಯಾವಶೇಷಗಳ ಬಯಲು ವಸ್ತು ಸಂಗ್ರಹಾಲಯ ಹಾಗೂ ಐತಿಹಾಸಿಕ ದೇವಸ್ಥಾನಗಳನ್ನು ಪರಿಶೀಲನೆ ನಡೆಸಿತು.

2 ಕೋಟಿ 25 ಲಕ್ಷ ರೂ ವೆಚ್ಚದಲ್ಲಿ ಯೋಜನೆ

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥೆ ಡಾ. ಹೆಲೆನ್ ನೇತೃತ್ವದ ತಜ್ಞರ ತಂಡ, ಸುಮಾರು 3 ಎಕರೆ ವಿಸ್ತೀರ್ಣದಲ್ಲಿರುವ ಬಯಲು ವಸ್ತು ಸಂಗ್ರಹಾಲಯ ಪ್ರದೇಶದಲ್ಲಿ ಸಂಗ್ರಹಿಸಿರುವ ಅಪರೂಪದ ಪ್ರಾಚ್ಯಾವಶೇಷಗಳನ್ನು ವೀಕ್ಷಿಸಿ ಅಭಿವೃದ್ಧಿ ಸಾಧ್ಯತೆಗಳ ಕುರಿತು ಅಧ್ಯಯನ ಮಾಡಿತು. ಸರ್ಕಾರ ಈಗಾಗಲೇ ಸುಮಾರು 2 ಕೋಟಿ 25 ಲಕ್ಷ ರೂ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಟೆಂಡರ್ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ತಂಡದೊಂದಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಹಕಾರ ನೀಡಲು ಮುಂದಾಗಿದೆ. ಸ್ಥಳಪರಿಶೀಲನೆ ನಡೆಸಿದ ತಜ್ಞರು ಶೀಘ್ರದಲ್ಲೇ ಸಮಗ್ರ ಪ್ರಾಜೆಕ್ಟ್ ವರದಿ ಸಿದ್ಧಪಡಿಸಲಿದ್ದು, ನಂತರ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿ ಹಾಗೂ ಲಕ್ಕುಂಡಿ ಕುರಿತು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಗೈಡ್ ಪುಸ್ತಕ ತಯಾರಿಕೆಗೆ ಕ್ರಮಕೈಗೊಳ್ಳಲಾಗುತ್ತದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಗೈಡ್ ಬುಕ್ ಸಿದ್ಧಗೊಳ್ಳಲಿದ್ದು, ಇದರಿಂದ ಲಕ್ಕುಂಡಿಯ ಐತಿಹಾಸಿಕ ಮಹತ್ವ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿ ಅಪಾಯದಲ್ಲಿ! ಐತಿಹಾಸಿಕ ಲಕ್ಕುಂಡಿ ಬಳಿಯೇ ಇದ್ದರೂ ನಿರ್ಲಕ್ಷ್ಯ

ಐತಿಹಾಸಿಕ ಲಕ್ಕುಂಡಿ ಗ್ರಾಮದ ಉತ್ಖನನ ಶರವೇಗದಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಸಂಪತ್ತು ಸಿಗುತ್ತೇ ಎನ್ನುವ ಕುತೂಹಲ ಹೆಚ್ಚಳವಾಗಿದೆ. ಪುರಾತನ ಕಾಲದ ದೇವಸ್ಥಾನ ಸೇರಿ ಲಕ್ಕುಂಡಿ ಸಮಗ್ರವಾದ ಅಭಿವೃದ್ಧಿ ಆಗ್ಬೇಕಾಗಿದೆ. ಅದರ ಜೊತೆಗೆ ಗ್ರಾಮಸ್ಥರ ಹಿತವನ್ನು ಸರ್ಕಾರ ಕಾಪಾಡಬೇಕಾಗಿದೆ. ಸರ್ಕಾರ ಸಾಕಷ್ಟು ಸೂಕ್ಷ್ಮ ‌ಹೆಜ್ಜೆ ಇಡ್ತಾಯಿದ್ದು, ಮುಂದಿನ ದಿನಗಳಲ್ಲಿ ಏನ್ನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಕಾದುನೋಡ್ಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:31 pm, Mon, 2 February 26