Mulgund Panchayath: ಗ್ರಾಮಸ್ಥರಿಂದ ಪಟ್ಟಣ ಪಂಚಾಯತ್​ ಕಚೇರಿ ಮುಂದೆ ಶವಸಂಸ್ಕಾರ ಮಾಡುವ ಎಚ್ಚರಿಕೆ!

| Updated By: ಸಾಧು ಶ್ರೀನಾಥ್​

Updated on: Jan 03, 2022 | 9:44 AM

last rites: ಗ್ರಾಮದ ಪಕ್ಕದಲ್ಲೆ ಸ್ಮಶಾನಕ್ಕಾಗಿ ಭೂಮಿ ಖರೀದಿಸಿ ಎಂದು ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ, ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಕೊಟ್ಟಿದ್ದು ಈ ವರೆಗೂ ಬೇಡಿಕೆಗೆ ಅವರು ಸ್ಪಂದಿಸಿಲ್ಲ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯತಿ ಮುಂದೆ ಶವ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಹೋನ್ನೇಶ ಜೋಗಿ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

Mulgund Panchayath: ಗ್ರಾಮಸ್ಥರಿಂದ ಪಟ್ಟಣ ಪಂಚಾಯತ್​ ಕಚೇರಿ ಮುಂದೆ ಶವಸಂಸ್ಕಾರ ಮಾಡುವ ಎಚ್ಚರಿಕೆ!
ಗ್ರಾಮಸ್ಥರಿಂದ ಪಟ್ಟಣ ಪಂಂಚಾಯತ್​ ಕಚೇರಿ ಮುಂದೆ ಶವಸಂಸ್ಕಾರ ಮಾಡುವ ಎಚ್ಚರಿಕೆ!
Follow us on

ಗದಗ: ಗದಗ ತಾಲೂಕಿನ ಮುಳಗುಂದ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ (mulgund panchayath) ಬರುವ ವಾರ್ಡ ಸಂಖ್ಯೆ 18 ರ ಶೀತಾಲಹರಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಮಶಾನಕ್ಕೆ ಜಾಗವಿಲ್ಲ, ಹೀಗಾಗಿ ಮುಳ್ಳಿನ ಪೊದೆಯಲ್ಲಿ ಶವ ಸಂಸ್ಕಾರ ಮಾಡುವುದು ಅನಿವಾರ್ಯತೆ ಎದುರಾಗಿದೆ. ಮುಳಗುಂದ ಪಟ್ಟಣದಿಂದ 4 ಕಿ.ಮೀ. ದೂರದಲ್ಲಿರುವ ಈ ಪುಟ್ಟ ಗ್ರಾಮ 200ಕ್ಕೂ ಹೆಚ್ಚು ಮನೆಗಳನ್ನ ಹೊಂದಿದೆ. ಇಲ್ಲಿ ಯಾರಾದರೂ ನಿಧನರಾದ್ರೆ ಶವ ಸಂಸ್ಕಾರಕ್ಕೆ ( place for last rites) ನಿಗದಿತ ಜಾಗ ಮಾತ್ರ ಲಭ್ಯವಿಲ್ಲ. ಊರ ಪಕ್ಕದ ಗುಡ್ಡದ ಮುಳ್ಳಿನ ಕಂಟಿಗಳ ಪೊದೆಯಲ್ಲಿ ಶವಗಳನ್ನ ಸುಡಲಾಗುತ್ತಿದೆ. ಕೆಲವು ಸಮುದಾಯಗಳಲ್ಲಿ ಹೂಳುವ ಪದ್ದತಿ ಇದ್ದರೂ ಸಹ ಕಲ್ಲಿನ ಗುಡ್ಡದಲ್ಲಿ ಗುಣಿ ತೋಡಲು ಸಾಧ್ಯವಾಗದೆ ಸುಡುವುದು ಸಾಮಾನ್ಯವಾಗಿದೆ.

ಶೀತಾಲಹರಿ ಗ್ರಾಮದಲ್ಲಿ ಸ್ಮಶಾನಕ್ಕೆ ಇಲ್ಲ ಜಾಗ, ಮುಳ್ಳಿನ ಪೊದೆಯಲ್ಲಿ ಶವ ಸಂಸ್ಕಾರ:
ಈ ಜಾಗ ಗಲೀಜು ಗಲೀಜಾಗಿದ್ದು, ಮುಳ್ಳು ಕಂಟಿಗಳಿಂದ ಕೂಡಿದೆ. ಶವ ತೆಗೆದುಕೊಂಡು ಹೋಗುವ ಮೊದಲು ಜೆಸಿಬಿ ಬಳಸಿ ದಾರಿ ಮಾಡಿದ ನಂತರವಷ್ಟೇ ಹೋಗಲು ಸಾಧ್ಯ. ಮಳೆಗಾಲದಲ್ಲಿ ಶವ ಸಂಸ್ಕಾರ ಮಾಡುವುದೇ ಸವಾಲಿನ ಕೆಲಸವಾಗಿದೆ. ನಮ್ಮ ಗ್ರಾಮದ ಪಕ್ಕದಲ್ಲೆ ಸ್ಮಶಾನಕ್ಕಾಗಿ ಭೂಮಿ ಖರೀದಿಸಿ ಎಂದು ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ, ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಕೊಟ್ಟಿದ್ದು ಈ ವರೆಗೂ ಬೇಡಿಕೆಗೆ ಅವರು ಸ್ಪಂದಿಸಿಲ್ಲ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯತಿ ಮುಂದೆ ಶವ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಹೋನ್ನೇಶ ಜೋಗಿ ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದಾರೆ.

ಶೀತಾಲಹರಿ ಹತ್ತಿರ 2 ಎಕರೆ 35 ಗುಂಟೆ ಜಮೀನಿನ ಮಾಲೀಕರು ಸ್ಮಶಾನಕ್ಕಾಗಿ ತಮ್ಮ ಜಮೀನು ಮಾರಾಟ ಮಾಡುವುದಾಗಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಜನವರಿ 2021 ರಲ್ಲಿ ಗದಗ ತಹಶೀಲ್ದಾರರಿಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಅಲ್ಲದೇ ಈಗಿರುವ ಜಾಗ ಕಂದಾಯ ಇಲಾಖೆಯದ್ದಾಗಿದ್ದು ಅದಿನ್ನೂ ಪರಿಶೀಲನೆ ಹಂತದಲ್ಲಿದೆ. ಶೀಘ್ರದಲ್ಲೆ ಸ್ಮಶಾನ ಜಾಗ ಗುರುತಿಸಲಾಗುವದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ತಿಳಿಸಿದ್ದಾರೆ.

Also Read:
MLA Preetham Gowda: ಕಲ್ಲಿನಿಂದ ಹೊಡೆದು ಶಾಸಕ ಪ್ರೀತಂಗೌಡ ಭಾವಚಿತ್ರ ಹಾನಿ

Published On - 9:43 am, Mon, 3 January 22