ಗದಗದಲ್ಲಿ ಮನೆ, ನಿವೇಶನ ನೀಡುವುದಾಗಿ ಜನರಿಗೆ ಕೋಟಿ ಕೋಟಿ ರೂ. ವಂಚನೆ ಮಾಡಿದ್ದ ಫೈನಾನ್ಸ್ ಮಾಲೀಕ ಅರೆಸ್ಟ್!
ಹೆಚ್ಚಿನ ಬಡ್ಡಿ ಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ.
ಗದಗ: ಮನೆ (Home) ಹಾಗೂ ನಿವೇಶನ (Site) ನೀಡುವುದಾಗಿ ಕೋಟಿ ಕೋಟಿ ರೂ. ಹಣ ಪಡೆದು ಜನರಿಗೆ ವಂಚನೆ ಮಾಡಿದ್ದ ಫೈನಾನ್ಸ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜೀವ್ ಗಾಂಧಿ ನಗರದ ನಿವಾಸಿ ವಿಜಯ್ ಶಿಂಧೆ ಬಂಧಿತ ಆರೋಪಿ. ಆರೋಪಿ ಗದಗ ನಗರದ ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ಹಲವರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು, ಕಳೆದ ಹಲವು ವರ್ಷಗಳಿಂದ ವಿಜಯ ಶಿಂಧೆ ಶ್ರೀ ಪುಟ್ಟರಾಜ ಫೈನಾನ್ಸ್ ಕಾರ್ಪೊರೇಷನ್ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದ. ಈತ ಹಲವರಿಗೆ ವಂಚಿಸಿದ್ದಾನೆ ಎಂದು ಹೇಳಿದರು.
ಹೆಚ್ಚಿನ ಬಡ್ಡಿ ಹಣ, ನಿವೇಶನ ಹಾಗೂ ಜಮೀನು ನೀಡುವ ದುರಾಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಚಿಟ್ ಫಂಡ್, ಬಂಗಾರದ ವ್ಯಾಪಾರ, ಪಿಗ್ಮಿ ಹೆಸರಲ್ಲಿ ವಿಜಯ ಶಿಂಧೆ ಫೈನಾನ್ಸ್ ನಡೆಸುತ್ತಿದ್ದ. ಇದ್ದಕ್ಕಿದ್ದಂತೆ ಕಳೆದ ಎರಡು ವರ್ಷಗಳ ಹಿಂದೆ ಲಾಸ್ ಆಗಿದ್ದೀನಿ ಎಂದು ಹೇಳಿದ್ದ ವಿಜಯ ಶಿಂಧೆ ಬಗ್ಗೆ ಯಾರೂ ದೂರು ಕೊಡಲು ಮುಂದಾಗಿರಲಿಲ್ಲ. ಆದರೆ ಓರ್ವ ವ್ಯಕ್ತಿ ಆತನ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು ಎಂದು ಎಸ್ಪಿ ದೇವರಾಜು ತಿಳಿಸಿದರು.
ಆರೋಪಿ ಕಳೆದ 10 ವರ್ಷಗಳಿಂದ ಅವಳಿ ನಗರದ ಜನರಿಗೆ ಮೋಸ ಮಾಡುತ್ತಿದ್ದಾನೆ ಎಂದು ಹೇಳಿದ ಎಸ್ಪಿ, ಯಾರ್ಯಾರು ಮೋಸ ಹೋಗಿದ್ದೀರೋ ಅವರು ಎಸ್ಪಿ ಕಚೇರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಪೊಲೀಸರೆಂದು ಹೇಳಿಕೊಂಡು ಚಿನ್ನಾಭರಣ ದೋಚಿದ ಖದೀಮರು: ಚಿತ್ರದುರ್ಗ: ಪೊಲೀಸರೆಂದು ಹೇಳಿಕೊಂಡು ಖದೀಮರು ಚಿನ್ನಾಭರಣ ದೋಚಿರುವ ಘಟನೆ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದ ಬಳಿ ನಡೆದಿದೆ. ಕಳ್ಳರು ಬೈಕ್ ಸವಾರ ವಿಶ್ವನಾಥ್ ಬಳಿಯಿದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಚಿನ್ನಾಭರಣ ರಿಪೇರಿಗೆಂದು ವಿಶ್ವನಾಥ್ ಬೈಕ್ನಲ್ಲಿ ಅನ್ನೇಹಾಳ್ನಿಂದ ಹೊಳಲ್ಕೆರೆಗೆ ತೆರಳುತ್ತಿದ್ದರು. ಟಿ.ನುಲೇನೂರು ಬಳಿ ಪೊಲೀಸರೆಂದು ಹೇಳಿಕೊಂಡು ಬೈಕ್ನ ತಡೆದಿದ್ದಾರೆ. ಖದೀಮರು ಗಾಂಜಾ ಸಾಗಣೆ ಮಾಡುತ್ತಿದ್ದೀರೆಂದು ಪರಿಶೀಲಿಸಿದರು. ಕಳ್ಳರಿದ್ದಾರೆಂದು ಎಚ್ಚರಿಸುವ ನೆಪದಲ್ಲಿ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇಬ್ಬರು 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಮಹಿಳಾ ಪೊಲೀಸ್ ಮೇಲೆ ವ್ಯಾನ್ ಹತ್ತಿಸಿ ಕೊಲೆ; ಜಾರ್ಖಂಡ್ನಲ್ಲಿ ಮತ್ತೊಂದು ಆಘಾತಕಾರಿ ಘಟನೆ
Published On - 10:52 am, Wed, 20 July 22