ಗದಗ: ರಜೆಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

ರಜೆಗೆಂದು ಯೋಧ ಚನ್ನಬಸಪ್ಪ ಮನೆಗೆ ಆಗಮಿಸಿದ್ದರು. ರಜೆ ಮುಗಿಸಿ ಮತ್ತೆ ತನ್ನ ಕರ್ತವ್ಯದಲ್ಲಿ ಭಾಗಿಯಾಗಬೇಕಿತ್ತು. ಆದರೆ ಹೃದಯಾಘಾತದಿಂದ ಕೊನೆಯುಸಿರೆಳಿದಿದ್ದಾರೆ.

ಗದಗ: ರಜೆಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ
ಯೋಧ ಚನ್ನಬಸಪ್ಪ ನಿಂಗಜ್ಜ ಚನ್ನಳ್ಳಿ

ಗದಗ: ರಜೆಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 39 ವರ್ಷದ ಯೋಧ ಚನ್ನಬಸಪ್ಪ ನಿಂಗಜ್ಜ ಚನ್ನಳ್ಳಿ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯೋಧ ಚನ್ನಬಸಪ್ಪ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ನಿವಾಸಿ. ಚನ್ನಬಸಪ್ಪ ಕಳೆದ 22 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 242 ಮೀಡಿಯಂ ರೆಜಿಮೆಂಟಿನಲ್ಲಿ ಟೆಲಿಫೋನ್ ಆಪರೇಟರ್ ಆಗಿದ್ದರು. ಸದ್ಯ ಪಂಜಾಬ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ರಜೆಗೆಂದು ಯೋಧ ಚನ್ನಬಸಪ್ಪ ಮನೆಗೆ ಆಗಮಿಸಿದ್ದರು. ರಜೆ ಮುಗಿಸಿ ಮತ್ತೆ ತನ್ನ ಕರ್ತವ್ಯದಲ್ಲಿ ಭಾಗಿಯಾಗಬೇಕಿತ್ತು. ಆದರೆ ಹೃದಯಾಘಾತದಿಂದ ಕೊನೆಯುಸಿರೆಳಿದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳು, ಒಬ್ಬ ಸಹೋದರ ಹಾಗೂ ತಂದೆ ತಾಯಿಯನ್ನ ಅಗಲಿದ ಯೋಧ ಇಹಲೋಕಕ್ಕೆ ತೆರಳಿದ್ದಾರೆ. ಇಂದು ಸ್ವಗ್ರಾಮ ಹಳ್ಳಿಗುಡಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಯೋಧ ನಿನ್ನೆ (ಸೆ.18) ತಡ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಯೋಧನ ದಿಢೀರ್ ಸಾವು ಕುಟುಂಬ ಹಾಗೂ ಇಡೀ ಗ್ರಾಮವನ್ನೇ ಕಣ್ಣೀರು ಕಡಲಿನಲ್ಲಿ ಮುಳುಗುವಂತೆ ಮಾಡಿದೆ. ಚೆನ್ನಬಸಪ್ಪ ಚಿಕ್ಕವನ್ನಿದ್ದಾಗಲೇ ದೇಶ ಸೇವೆ ಮಾಡಬೇಕು ಅನ್ನೋ ಹಂಬಲವಿತ್ತು. ಹೀಗಾಗಿ ಆರ್ಮಿ ಸೇವೆಗೆ ಸೇರಲು ಚಿಕ್ಕವನ್ನಿಂದಲೇ ಕಸರತ್ತು ಮಾಡಿದ್ದರು. ಕಂಡ ಕನಸಿನಂತೆ ಅಕ್ಟೋಬರ್ 21, 2000 ರಲ್ಲಿ ಆರ್ಮಿಗೆ ಆಯ್ಕೆಯಾಗಿದ್ದರು. ಸುದೀರ್ಘ 21 ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟದ ನಾಸಿಕನಿಂದ ಆರಂಭವಾದ ಯೋಧ ಚೆನ್ನಬಸಪ್ಪ ಚೆನ್ನಳ್ಳಿ ಸೇವೆ ಜಮ್ಮು ಕಾಶ್ಮೀರ, ಕಾರ್ಗಿಲ್, ಇಂಡೋ ಚೀನಾ ಬಟಾಲಿಯ ಸೇರಿದಂತೆ ದೇಶದ ಸೇವೆ ಮಾಡಿದ್ದಾರೆ.

ಪಂಜಾಬ್​ನಲ್ಲಿ ಸೇವೆ
ಸದ್ಯ ಪಂಜಾಬ್ ರಾಜ್ಯದ ಬಜಿಂದರ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳ ಆಗಸ್ಟ್ 26 ಒಂದು ತಿಂಗಳ ರಜೆ ಹಾಕಿ ಸ್ವಗ್ರಾಮ ಹಳ್ಳಿಗುಡಿ ಗ್ರಾಮಕ್ಕೆ ಆಗಮಿಸಿದ್ದರು. ಆದರೆ ನಿನ್ನೆ ತಡರಾತ್ರಿ ಬಾರದ ಲೋಕಕ್ಕೆ ಹೋಗಿದ್ದಾರೆ.

ಕುಟುಂಬಕ್ಕೆ ಆಧಾರ
ತಾಯಿ ಅನ್ನಪೂರ್ಣ, ತಂದೆ ನಿಂಗಜ್ಜ ಜೇಷ್ಠ ಪುತ್ರ ಚೆನ್ನಬಸಪ್ಪ ಚೆನ್ನಳ್ಳಿ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ. ಕೃಷಿ ಕುಟುಂಬದ ಚೆನ್ನಬಸಪ್ಪ ಆರ್ಥಿಕವಾಗಿ ಸಬಲವಾಗಬೇಕು. ಆರ್ಮಿ ನಿವೃತ್ತಿ ಬಳಿಕ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹತ್ತಾರು ಕನಸು ಕಂಡಿದ್ದರು. ಆದರೆ ಈಗ ಕುಟುಂಬದ ಆಧಾರವೇ ಕುಸಿದು ಹೋದಂತಾಗಿದೆ. ಇಡೀ ಕುಟುಂಬ ದುಖಃದಲ್ಲಿದೆ.

ಯೋಧನ ಮದುವೆ
2014 ರಲ್ಲಿ ಸವಿತಾ ಎಂಬುವರ ಜೊತೆಗೆ ಯೋಧ ಚೆನ್ನಬಸಪ್ಪ ಹಸೆಮಣೆ ಏರಿದ್ದಾರೆ. ಯೋಧನಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಇದ್ದಾರೆ. 5 ವರ್ಷದ ಧನುಷರೆಡ್ಡಿ, ಒಂದುವರೆ ವರ್ಷದ ಕೋಮಲ್ ರೆಡ್ಡಿ. ಈಗ ಪತ್ನಿ ಸವಿತಾ ಗರ್ಭಿಣಿಯಿದ್ದಾರೆ. ಪತ್ನಿ ಗರ್ಭಿಣಿಯಾಗಿರುವುದರಿಂದ ಯೋಧ ಚೆನ್ನಬಸಪ್ಪ ಕಳೆದ ತಿಂಗಳ ಆಗಸ್ಟ್ 26 ಒಂದು ತಿಂಗಳ ರಜೆ ಹಾಕಿ ಸ್ವಗ್ರಾಮ ಹಳ್ಳಿಗುಡಿ ಗ್ರಾಮಕ್ಕೆ ಆಗಮಿಸಿದ್ದರು. ಇನ್ನೆನೂ ಹತ್ತು ದಿನ ಕಳೆದರೆ ರಜೆ ಮುಗಿಸಿ ಪಂಜಾಬ್​ನ ಬಜಿಂದರ್​ಗೆ ಹೊರಡಬೇಕಿತ್ತು.

ದುಃಖದ ಕಡಲಲ್ಲಿ ಕುಟುಂಬ
2023ರಲ್ಲಿ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದದಂತೆ. 2023ರಲ್ಲಿ ಪ್ರಮೋಷನ್ ಆದರೆ ಸೇವೆಯಲ್ಲಿ ಮುಂದುವರೆಯುತ್ತೇನೆ. ಇಲ್ಲವಾದರೆ ಸೇವೆಯಿಂದ ನಿವೃತ್ತಿಯಾಗಿ ಊರಿಗೆ ಮರಳುತ್ತೇನೆ ಅಂತ ಕುಟುಂಬಕ್ಕೆ ಹೇಳಿದ್ದರು. ಹೀಗಾಗಿ ಪತ್ನಿ, ಹೆತ್ತವರು, ಮಕ್ಕಳು ಖುಷಿಯಾಗಿದ್ದರು. ಇಷ್ಟು ವರ್ಷ ದೇಶ ಸೇವೆ ಮಾಡಿದ್ದ. ಇನ್ಮುಂದೆಯಾದರೂ ಮುದ್ದಾದ ಮಕ್ಕಳು, ಪೋಷಕರು, ಪತ್ನಿ ಜೊತೆ ಇರಲು ನಿರ್ಧರಿಸಿದರು. ಆದರೆ ಯೋಧ ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಇದು ಇಡೀ ಕುಟುಂಬವನ್ನು ದುಖಃದ ಕಡಲಲ್ಲಿ ಮುಳುಗುವಂತಾಗಿದೆ.

ಇದನ್ನೂ ಓದಿ

‘ಬಿಜೆಪಿಗೆ ನರೇಂದ್ರ ಮೋದಿ ನೈಜ ಮುಖ, ಉಳಿದವರೆಲ್ಲ ಹರಿದ ಮಾಸ್ಕ್​ಗಳು‘-ಸಾಮ್ನಾದಲ್ಲಿ ಶಿವಸೇನೆ ಲೇಖನ

ಬೋರ್​ವೆಲ್​ಗೆ ಹಾಕಿ ಮಗುವನ್ನು ಕೊಂದಿದ್ದು ತಂದೆ! ಪೊಲೀಸರ ವಿಚಾರಣೆಯಲ್ಲಿ ಬಾಯಿಬಿಟ್ಟ ಕೊಲೆಗಡುಕ

(Soldier has died of a heart attack in Gadag)

Read Full Article

Click on your DTH Provider to Add TV9 Kannada