‘ಬಿಜೆಪಿಗೆ ನರೇಂದ್ರ ಮೋದಿ ನೈಜ ಮುಖ, ಉಳಿದವರೆಲ್ಲ ಹರಿದ ಮಾಸ್ಕ್​ಗಳು‘-ಸಾಮ್ನಾದಲ್ಲಿ ಶಿವಸೇನೆ ಲೇಖನ

ಜೆಪಿ ನಡ್ಡಾ ಬಿಜೆಪಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಿವೆ. 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ, ಬಿಜೆಪಿ ಆಡಳಿತ ಇರುವ ಅನೇಕ ರಾಜ್ಯಗಳಲ್ಲಿ ಈಗಿನಿಂದಲೇ ಸಿದ್ಧತೆ ಮಾಡಲಾಗುತ್ತಿದೆ ಎಂದು ಶಿವಸೇನೆ ಹೇಳಿದೆ.

‘ಬಿಜೆಪಿಗೆ ನರೇಂದ್ರ ಮೋದಿ ನೈಜ ಮುಖ, ಉಳಿದವರೆಲ್ಲ ಹರಿದ ಮಾಸ್ಕ್​ಗಳು‘-ಸಾಮ್ನಾದಲ್ಲಿ ಶಿವಸೇನೆ ಲೇಖನ
ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on: Sep 19, 2021 | 8:56 AM

ಶಿವಸೇನೆ ಮತ್ತು ಬಿಜೆಪಿ ಮೈತ್ರಿ (Shiv Sena-BJP Alliance) ಮುರಿದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡ ನಂತರ ಆ ಪಕ್ಷ,  ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಆದರೆ ಪ್ರಧಾನಿ ಮೋದಿಯವರ ಬಗ್ಗೆ ಆಗಾಗ ಒಳ್ಳೆಯ ಮಾತುಗಳನ್ನೇ ಆಡುತ್ತ ಬಂದಿದೆ. ಇದೀಗ  ತನ್ನ ಮುಖವಾಣಿ ಪತ್ರಿಕೆ ಸಾಮ್ನಾದ  ಸಂಪಾದಕೀಯದ ಮೂಲಕವೂ ಮೋದಿಯವರನ್ನು ಶಿವಸೇನೆ ಹೊಗಳಿದೆ. ಪ್ರಧಾನಿ ಮೋದಿ (PM Modi)ಯವರು ಭಾರತೀಯ ಜನತಾ ಪಾರ್ಟಿಯ ನಿಜವಾದ ಮುಖ ಎಂದು ಹೇಳಿದೆ. ಅಂದರೆ ಬಿಜೆಪಿಗೆ ಅವರೇ ಶಕ್ತಿ ಎಂಬರ್ಥದಲ್ಲಿ ಲೇಖನ ಬರೆಯಲಾಗಿದೆ. 

ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ನಿಜವಾದ ಮುಖ. ಉಳಿದವರೆಲ್ಲ ಆ ಪಕ್ಷದ ಹರಿದ ಮಾಸ್ಕ್​ಗಳಂತೆ. ನರೇಂದ್ರ ಮೋದಿಯವರು ಇಲ್ಲದಿದ್ದರೆ, ಈಗಿರುವ ಬಿಜೆಪಿಯ ಹಲವು ಮಾಸ್ಕ್​ಗಳು ಎಲ್ಲ ಎಲ್ಲ ಚುನಾವಣೆಗಳಲ್ಲೂ ಖಂಡಿತ ಸೋಲುತ್ತವೆ. ಪ್ರಧಾನಿ ಮೋದಿಗೂ ಇದು ಗೊತ್ತಿರುವ ವಿಚಾರ. ಹಾಗಾಗಿ ಈಗಿನಿಂದಲೇ 2024ರ ಚುನಾವಣೆಗೆ ಸಿದ್ಧವಾಗುತ್ತಿದ್ದಾರೆ. ಕೆಲವು ದುರಸ್ತಿ ಕಾರ್ಯ ನಡೆಸಲು, ಧೈರ್ಯವಾಗಿ ಮುಂದಡಿ ಇಡುತ್ತಿದ್ದಾರೆ ಎಂದು ಶಿವಸೇನೆ ಸಂಪಾದಕೀಯದಲ್ಲಿ ವಿವರಿಸಲಾಗಿದೆ.

ನಡ್ಡಾ ಬಂದ ಮೇಲೆ ಬದಲಾವಣೆ ಜೆಪಿ ನಡ್ಡಾ ಬಿಜೆಪಿ ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಿವೆ. 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ, ಬಿಜೆಪಿ ಆಡಳಿತ ಇರುವ ಅನೇಕ ರಾಜ್ಯಗಳಲ್ಲಿ ಈಗಿನಿಂದಲೇ ಸಿದ್ಧತೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಸೇರಿ ಈ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದಕ್ಕೆ ಉದಾಹರಣೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಬದಲಾವಣೆ. ಅದರಲ್ಲೂ ಗುಜರಾತ್​​ನಲ್ಲಿ ಇಡೀ ಮಂತ್ರಿಮಂಡಳವನ್ನೇ ಬದಲಿಸಿದ್ದಾರೆ. ಹಳೇ ಮರಗಳನ್ನೆಲ್ಲ ಬುಡಸಮೇತ ಕಿತ್ತು, ಹೊಸ ಗಿಡಗಳನ್ನು ನೆಟ್ಟಿದ್ದಾರೆ(ವಿಜಯ್​ ರೂಪಾನಿ ಮಾತ್ರವಲ್ಲ ಇಲ್ಲಿ ಹಳೇ ಸಚಿವರೆಲ್ಲರನ್ನೂ ಈಗಿನ ಸರ್ಕಾರದಲ್ಲಿ ಕೈಬಿಡಲಾಗಿದೆ). ಹಾಗೇ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಹರ್ಯಾಣ ಮುಖ್ಯಮಂತ್ರಿಗಳ ಮೇಲೆ ಕೂಡ ಒಂದು ಕಣ್ಣಿಟ್ಟಿದ್ದಾರೆ ಎಂದು ಸಾಮ್ನಾ ಬರೆದಿದೆ.

ಅಮಿತ್​ ಶಾ ವಿರುದ್ಧ ಟೀಕೆ ಬಿಜೆಪಿಗೆ ಜೆಪಿ ನಡ್ಡಾ ಅಧ್ಯಕ್ಷರಾಗಿ ಬಂದ ನಂತರ ಹಲವು ದುರಸ್ತಿ ಕಾರ್ಯಗಳು ಆಗುತ್ತಿವೆ ಎಂದು ಹೇಳಿದ ಶಿವಸೇನೆ, ಅಮಿತ್​ ಶಾಗೆ ಯಾವುದೇ ಸ್ಪರ್ಧೆಯೊಡ್ಡಿದರೂ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಶಿವಸೇನೆ-ಬಿಜೆಪಿ ಮೈತ್ರಿ ಮುರಿದುಹೋಯಿತು. ಈಗ ಬಿಜೆಪಿ ನಮ್ಮ ವಿರೋಧ ಪಕ್ಷವಾಗಿ ಕುಳಿತಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: ಬೋರ್​ವೆಲ್​ಗೆ ಹಾಕಿ ಮಗುವನ್ನು ಕೊಂದಿದ್ದು ತಂದೆ! ಪೊಲೀಸರ ವಿಚಾರಣೆಯಲ್ಲಿ ಬಾಯಿಬಿಟ್ಟ ಕೊಲೆಗಡುಕ

ದಾವಣಗೆರೆಯಲ್ಲಿಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ; ಮೂರು ಪ್ರಮುಖ ನಿರ್ಣಯ ಸಾಧ್ಯತೆ

(PM Narendra Modi real face of BJP says Shiv Sena by its Saamana)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ