ಗದಗ: ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ಅಗೆದ ಖದೀಮರು

ಐತಿಹಾಸಿಕ ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಅದರ ಕೆಳಗೆ ಸುಮಾರು ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ. ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ.

ಗದಗ: ನಿಧಿ ಆಸೆಗಾಗಿ ದೇವಸ್ಥಾನದಲ್ಲಿ ಗುಂಡಿ ಅಗೆದ ಖದೀಮರು
ನಿಧಿಗಾಗಿ ದೇವಸ್ಥಾನ ಅಗೆದ ಕಳ್ಳರು
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 02, 2023 | 10:26 PM

ಗದಗ, ಸೆ.02: ಗದಗ (Gadag) ತಾಲೂಕಿನ ಲಕ್ಕುಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಟೆಲ್ ಹಾಗೂ ಮನೆಗಳ ಕಳ್ಳತನ (Theft) ಘಟನೆಗಳು ಇನ್ನೂ ಹಸಿಯಾಗಿರುವಾಗಲೇ, ಇಲ್ಲಿಯ ಐತಿಹಾಸಿಕ ದೇವಸ್ಥಾನವೊಂದರಲ್ಲಿ ನಿಧಿ (Treasure) ಆಸೆಗಾಗಿ ಕಳ್ಳರು ಮೂರ್ತಿಯಿರುವ ಸ್ಥಳ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಕ್ಕುಂಡಿ ಗ್ರಾಮದಿಂದ 3 ಕೀ.ಮೀ ದೂರದಲ್ಲಿರುವ ಕದಾಂಪೂರ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಜಮೀನೊಂದರಲ್ಲಿ ಈ ಘಟನೆ ನಡೆದಿದೆ.

ಐತಿಹಾಸಿಕ ಸೋಮೇಶ್ವರ ದೇವಾಲಯದ ಒಳಗೆ ಈಶ್ವರಲಿಂಗ ಮೂರ್ತಿಯ ಮುಂದೆ ಇದ್ದ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿ, ಅದರ ಕೆಳಗೆ ಸುಮಾರು ಹತ್ತು ಅಡಿ ಆಳಕ್ಕೆ ಅಗೆಯಲಾಗಿದೆ. ನೂಲು ಹುಣ್ಣಿಮೆ ದಿನ ರಾತ್ರಿ ಈ ಪ್ರಕರಣ ನಡೆದಿದ್ದು, ಅರ್ಚಕರು ಮುಂಜಾನೆ ಪೂಜೆ ನೆರವೇರಿಸಲು ತೆರಳಿದಾಗ ಕೃತ್ಯ ಗಮನಕ್ಕೆ ಬಂದಿದೆ. ನಿಧಿ ಆಸೆಗಾಗಿ ಕಳ್ಳರು ಇಂತಹ ಕೃತ್ಯವನ್ನು ಎಸಗಿರಬಹುದು ಎಂದು ದೇವಸ್ಥಾನದ ಅರ್ಚಕ ಶಿದ್ರಾಮಯ್ಯ ಮಾಯಾಕರಮಠ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ನಿಧಿ ಆಸೆಗಾಗಿ ಜಮೀನಿನಲ್ಲಿ ದೇವರ ಕಲ್ಲು ಕಿತ್ತು ಶೋಧ ನಡೆಸಿದ ದುಷ್ಕರ್ಮಿಗಳು, ಆತಂಕದಲ್ಲಿ ಜಮೀನು ಮಾಲೀಕ

ಕಳೆದ ಎರಡು ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ಇಂತಹ ಪ್ರಕರಣ ನಡೆದಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ. ಸೋಮನಕಟ್ಟಿ ಪ್ರದೇಶವೇಂದು ಹೇಳಲಾಗುತ್ತಿರುವ ಇಲ್ಲಿ, ನೂರಾರು ವರ್ಷಗಳ ಹಿಂದೆ ಜನ ವಸತಿಯಿತ್ತು. ಇಲ್ಲಿನ ಕಲಾತ್ಮಕ ಕೆತ್ತನೆಯ ಸೋಮೇಶ್ವರ ದೇವಸ್ಥಾನವು ಅಂದಿನಿಂದಲೇ ಪೂಜೆಗೊಳ್ಳುತ್ತಿದೆ. ಇದರ ಕೂಗಳತೆಯ ದೂರದಲ್ಲಿ ಮಾರುತಿ ದೇವಸ್ಥಾನವೂ ಇದೆ. ದೇವಸ್ಥಾನಕ್ಕೆ ರಕ್ಷಣಾ ಕವಚ ಒದಗಿಸಬೇಕೆಂದು ಸಮಾಜ ಸೇವಕ ಮರಿಯಪ್ಪ ವಡ್ಡರ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Sat, 2 September 23

Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us