ಕೆಸರು ತುಂಬಿದ ರಸ್ತೆಯಲ್ಲಿ ಶವ ಸಾಗಿಸಲು ಪರದಾಡಿದ ಗ್ರಾಮಸ್ಥರು: ರಸ್ತೆ ದುರಸ್ಥಿಗೆ ಒತ್ತಾಯ

ಕೆಸರು ಶೇಖರಣೆಯಾದ ಹಳ್ಳವನ್ನು ದಾಟಲು ಗ್ರಾಮಸ್ಥರು ಪರದಾಡಿದ್ದಾರೆ. ಜಮೀನಿಗೆ ಹೋದಾಗ ಕರಿಯಪ್ಪ ಮಾಯನ್ನವರ (60) ಸಾವನ್ನಪ್ಪಿದ್ದರು. ಜಮೀನಿಂದ ಮೃತ ದೇಹವನ್ನು ತೆಗೆದುಕೊಂಡು ಬರಲು ಪರದಾಟ ನಡೆಸಿದ್ದಾರೆ.

ಕೆಸರು ತುಂಬಿದ ರಸ್ತೆಯಲ್ಲಿ ಶವ ಸಾಗಿಸಲು ಪರದಾಡಿದ ಗ್ರಾಮಸ್ಥರು: ರಸ್ತೆ ದುರಸ್ಥಿಗೆ ಒತ್ತಾಯ
ಮೃತ ರೈತ ಕರಿಯಪ್ಪ ಮಾಯನ್ನವರ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 16, 2022 | 6:38 PM

ಗದಗ: ಮೃತ ದೇಹವನ್ನು ಸಾಗಿಸಲು ಗ್ರಾಮಸ್ಥರು ಪರದಾಟ ನಡೆಸಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ. ಕೆಸರು ಶೇಖರಣೆಯಾದ ಹಳ್ಳವನ್ನು ದಾಟಲು ಗ್ರಾಮಸ್ಥರು ಪರದಾಡಿದ್ದಾರೆ. ಜಮೀನಿಗೆ ಹೋದಾಗ ಕರಿಯಪ್ಪ ಮಾಯನ್ನವರ (60) ಸಾವನ್ನಪ್ಪಿದ್ದರು. ಜಮೀನಿಂದ ಮೃತ ದೇಹವನ್ನು ತೆಗೆದುಕೊಂಡು ಬರಲು ಪರದಾಟ ನಡೆಸಿದ್ದಾರೆ. ಹಳ್ಳದ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಬಿಆರ್​ಟಿಎಸ್​ ಚಿಗರಿ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ

ಧಾರವಾಡ: ಚಲಿಸುತ್ತಿದ್ದ ಬಿಆರ್​ಟಿಎಸ್​ ಚಿಗರಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಘಟನೆ ಸಂಭವಿಸಿದೆ. ಚಿಗರಿ ಬಸ್​ನಲ್ಲಿ ಹೊಗೆ ಬರುತ್ತಿದ್ದಂತೆ ಪ್ರಯಾಣಿಕರು ಇಳಿದು ಓಡಿದ್ದಾರೆ. ನಂತರ ಚಾಲಕ ಖಾಲಿ ಜಾಗವಿರುವ ಕೋರ್ಟ್​ ವೃತ್ತದ BRTC​ ಕಾರಿಡಾರ್​ಗೆ ತಂದು ನಿಲ್ಲಿಸಲಾಗಿದೆ. BRTC​ ಬಸ್​ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಧಾರವಾಡದ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿಯ ಬೋರ್​ವೆಲ್​ಗೆ ಕ್ರೂಸರ್ ವಾಹನ​ ಡಿಕ್ಕಿ

ಬಾಗಲಕೋಟೆ: ರಸ್ತೆ ಬದಿಯ ಬೋರ್​ವೆಲ್​ಗೆ ಕ್ರೂಸರ್ ವಾಹನ​ ಡಿಕ್ಕಿಯಾಗಿ ಇಬ್ಬರು ಕ್ರೀಡಾಪಟುಗಳು ಸೇರಿ ಮೂವರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಶಿರಗುಪ್ಪಿ ಗ್ರಾಮದ ಹೊಸ ಪ್ಲಾಟ್ ಹತ್ತಿರ ನಡೆದಿದೆ. ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕುಂದರಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ರೀಡಾಕೂಟ ಮುಗಿಸಿ ಊರಿಗೆ ವಾಪಸ್ಸಾಗುವಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೀಳಗಿ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸರಣಿ ಅಪಘಾತದಲ್ಲಿ ಇಬ್ಬರ ದುರ್ಮರಣ

ದಾವಣಗೆರೆ: ಸರಣಿ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿದ ಘಟನೆ ದಾವಣಗೆರೆ ಹೊರವಲಯದ ಕಲ್ಪನಹಳ್ಳಿ ಬಳಿ ನಡೆದಿದೆ. ಶಿಕ್ಷಕಿ ಜ್ಯೋತಿ (43) ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದ್ದರು. ಆದರೆ ಪ್ರವಾಸದಲ್ಲಿದ್ದಾಗಲೇ ಅವರ ಪತಿಗೆ ಹೃದಯಾಘಾತವಾಗಿದೆ. ಪರಿಣಾಮವಾಗಿ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ಹಾಗೂ ಬೈಕ್​ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದ್ದು, ಆ್ಯಂಬುಲೆನ್ಸ್​ನಲ್ಲಿದ್ದ ಜ್ಯೋತಿ ಹಾಗೂ ಬೈಕ್ ಸವಾರ ಮಂಜುನಾಥ್ (68) ಸಾವನ್ನಪ್ಪಿದ್ದಾರೆ.

ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಮೀರನ್ ಅವರಿಗೆ ತೀವ್ರ ಗಾಯಗಳಾಗಿವೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಕೆ.ಎಸ್ ಬಸವಂತಪ್ಪ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:31 pm, Fri, 16 September 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್