ಚಿನ್ನ ಕಳ್ಳಸಾಗಣೆ: ರನ್ಯಾ ರಾವ್ ಪತಿಗೆ ಕೋರ್ಟ್ ರಿಲೀಫ್, ಬಂಧನದಿಂದ ಬಚಾವ್

ನಗರದ ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ. ಇನ್ನು ಈ ಪ್ರಕರಣದಲ್ಲಿ ಹಲವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಸಚಿವರ ಹೆಸರು ಸಹ ಕೇಳಿಬಂದಿದ್ದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರ ಮಧ್ಯ ಇದೀಗ ರನ್ಯಾ ರಾವ್ ಪತಿಗೆ ಕೋರ್ಟ್​ ತಾತ್ಕಾಲಿಕ ರಿಲೀಫ್ ನೀಡಿದೆ.

ಚಿನ್ನ ಕಳ್ಳಸಾಗಣೆ: ರನ್ಯಾ ರಾವ್ ಪತಿಗೆ ಕೋರ್ಟ್ ರಿಲೀಫ್, ಬಂಧನದಿಂದ ಬಚಾವ್
Ranya Rao Husband
Edited By:

Updated on: Mar 11, 2025 | 5:52 PM

ಬೆಂಗಳೂರು, (ಮಾರ್ಚ್​ 11): ಚಿನ್ನ ಕಳ್ಳಸಾಗಣೆ (Gold Smuggling)  ಪ್ರಕರಣದಲ್ಲಿ ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್ Ranya Rao)​ ಬಂಧನವಾಗಿದ್ದು, ಡಿಆರ್​ಐ ಹಾಗೂ ಸಿಬಿಐ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿವೆ. ಇನ್ನು ಇದರ ಮಧ್ಯೆ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ತಾತ್ಕಾಲಿಕವಾಗಿ ಬಂಧನದಿಂದ ಪಾರಾಗಿದ್ದಾರೆ. ಹೌದು….ಬಂಧನದ ಭೀತಿಯಿಂದ ರನ್ಯಾ ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ (Karnataka High COurt ಮೆಟ್ಟಿಲೇರಿದ್ದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ  ಇಂದು (ಮಾರ್ಚ್​ 11) ಮಹತ್ವದ ಆದೇಶ ನೀಡಿದೆ.

ಪತ್ನಿಯ ಮೇಲಿನ ಆರೋಪಕ್ಕೂ ಜತಿನ್​ಗೂ ಸಂಬಂಧವಿಲ್ಲ. ಡಿಆರ್​ಐ ಅಧಿಕಾರಿಗಳು ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ. ಎರಡನೇ ಬಾರಿಯೂ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸದೇ ಬಂಧಿಸುವ ಸಾಧ್ಯತೆ ಎಂದು ವಾದ ಮಂಡಿಸಿದರು. ಇನ್ನು ಈ ವಾದ ಆಲಿಸಿದ ಹೈಕೋರ್ಟ್, ಕಾನೂನಿನ ಪ್ರಕ್ರಿಯೆ ಪಾಲಿಸದೇ ಜತಿನ್​ ಅವರನ್ನು ಬಂಧಿಸದಂತೆ ಆದೇಶ ಹೊರಡಿಸಿದೆ. ಇದರೊಂದಿಗೆ ರನ್ಯಾ ರಾವ್ ಪತಿಗೆ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ಚಿನ್ನ ಕಳ್ಳಸಾಗಾಣಿಕೆ: ಪತಿ ನೀಡಿದ ಸುಳಿವಿನಿಂದ ಡಿಆರ್​ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ರನ್ಯಾ ರಾವ್​?

ಹೆಂಡ್ತಿ ಕಳ್ಳಾಟ ಮಾಹಿತಿ ಕೊಟ್ಟಿದ್ದೇ ಗಂಡ ಜತಿನ್?

ನಟಿ ರನ್ಯಾ ಚಿನ್ನದ ರಹಸ್ಯ ಬಗೆದಷ್ಟು ಬಯಲಾಗುತ್ತಿದೆ. ದೊಡ್ಡ ದೊಡ್ಡ ಕುಳಗಳೇ ಸ್ಮಗ್ಲಿಂಗ್​ನಲ್ಲಿ ಕೈ ಜೋಡಿಸಿರುವ ಒಳಸುಳಿಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಒಂದೇ ದಿನಕ್ಕೆ ದುಬೈಗೆ ಹೋಗಿ ಬರುತ್ತಿದ್ದ ನಟಿ ರನ್ಯಾ ಮೇಲೆ ದೆಹಲಿ ಅಧಿಕಾರಿಗಳು ಕಣ್ಣಿಟ್ಟಿದ್ರು ಎನ್ನುವುದು ನಮಗೆಲ್ಲ ಗೊತ್ತಿದ್ದ ವಿಚಾರ. ಆದ್ರೆ ಸದ್ಯ ಅದಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ನಟಿ ರನ್ಯಾ ಗಂಡನಿಂದ ಮಾಹಿತಿ ಹೋಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ
ಚಿನ್ನ ಕಳ್ಳ ಸಾಗಣೆ: ರನ್ಯಾ ಜತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿಗಳು
ಸ್ಮಗ್ಲಿಂಗ್ ಹಿಂದಿರೋ ಸಚಿವರಾರು? ಸದನದಲ್ಲೂ ಸದ್ದು ಮಾಡಿದ ರನ್ಯಾ ರಾವ್ ಕೇಸ್
ರನ್ಯಾ ಪ್ರಕರಣ: ಏರ್​ಪೋರ್ಟ್ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳ ಮೇಲೂ ಶಂಕೆ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!

ಯಾಕಂದ್ರೆ ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಹೋಗಿ ಬರುತ್ತಿದ್ದಳು. ಹೀಗಾಗಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಈ ಹಿನ್ನೆಲೆ ಮಾಹಿತಿ ಶಂಕೆ ವ್ಯಕ್ತವಾಗಿದೆ. ರನ್ಯಾ ಪದೇ ಪದೆ ವಿದೇಶಕ್ಕೆ ಹೋಗಿ ಬರುತ್ತಿದ್ದರಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಇದೆ ಕಾರಣಕ್ಕೆ ಡೈರ್ವಸ್‌ ಹಂತಕ್ಕೂ ತಲುಪಿತ್ತು ಅನ್ನೋ ಮಾಹಿತಿ ಇದೆ. ಈ ಹಿನ್ನೆಲೆ ರನ್ಯಾ ಪತಿ ಸಚಿವರೊಬ್ಬರಿಗೆ ಮಾಹಿತಿ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಆಗ ಆ ಸಚಿವರೇ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿರುವ ಶಂಕೆ ಇದೆ. ಇನ್ನು ಈ ರೀತಿಯ ಸ್ಮಗ್ಲಿಂಗ್​ನಿಂದ ಜ್ಯುವೆಲ್ಲರ್ಸ್‌ ವ್ಯಾಪರಿಗಳು ನಮಗೆ ನಷ್ಟವಾಗುತ್ತೆ ಅನ್ನೋ ದ್ವೇಷದಿಂದಲೂ ಮಾಹಿತಿ ನೀಡಿರುವ ಶಂಕಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ