Bengaluru rains: ಬಿರು ಬಿಸಿಲಿನ ನಡುವೆಯೂ ಬೆಂಗಳೂರಿನಲ್ಲಿ ಮಳೆ, ವರುಣ ಸಿಂಚನದಿಂದ ಜನರು ಕೂಲ್ ಕೂಲ್
ಕರ್ನಾಟಕದಲ್ಲಿ ಬೇಸಿಗೆಯ ಬಿರು ಬಿಸಿಲಿನ ಝಳ ಜನರನ್ನು ತತ್ತರಿಸಿದೆ. ರಾಜ್ಯಾದ್ಯಂತ ವಿಪರೀತ ಬಿಸಿಲಿಗೆ ಜನ ತತ್ತರಿಸಿದ್ದಾರೆ. ಇನ್ನು ಈ ಬಿರು ಬೇಸಿಗೆ ಹಾಗೂ ಸೆಕೆಗೆ ಬಸವಳಿದಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಜನರಿಗೆ ವರುಣಾ ಕೂಲ್ ಕೂಲ್ ಮಾಡಿದ್ದಾರೆ. ಹೌದು.. ಬೆಂಗಳೂರಿನಲ್ಲಿ ಇಂದು (ಮಾರ್ಚ್ 11) ಒಮದು ಸುತ್ತು ಭರ್ಜರಿ ಮಳೆಯಾಗಿದ್ದು, ಈ ಬೇಸಿಗೆ ಕಾಲದಲ್ಲೂ ಮಳೆ ಬಂತೆಂದು ಜನ ಅಚ್ಚರಿಗೊಂಡಿದ್ದಾರೆ.

ಬೆಂಗಳೂರು, (ಮಾರ್ಚ್ 11): ಸಿಲಿಕಾನ್ ಸಿಟಿ ಬೆಂಗಳೂರು (Bengaluru) ನಗರದ ಹಲವೆಡೆ ದಿಢೀರ್ ಮಳೆಯಾಗಿದೆ (Rains). ಇಂದು (ಮಾರಚ್ 11) ಸಂಜೆ ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನವಾಗಿದೆ. ಇದು ಬೇಸಿಗೆಯ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪನೆಯ ವಾತಾವರಣ ಸಿಕ್ಕಂತಾಗಿದೆ.
ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಹವಾಮಾನ ಇಲಾಖೆ ನೀಡಿದ್ದ ಮುನ್ಸೂನೆ ನಿಜವಾಗಿದ್ದು, ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ಜನ ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಯಾಕಂದ್ರೆ, ಬೇಸಿಗೆ ಬಿಸಿಲಿನಿಮದ ತತ್ತರಿಸಿ ಹೋಗಿದ್ದರು. ತಾಪಮಾನಕ್ಕೆ ತಾಳಲಾಗದೇ ಸಿಟಿ ಜನರು ತಂಪುಪಾನೀಯ ಮೊರೆ ಹೋಗಿದ್ದಾರೆ. ಇದೀಗ ವರುಣ ಆಗಮಿಸಿ ಸಿಟಿಕಾನ್ ಸಿಟಿ ಜನಕ್ಕೆ ಕೊಂಚ ಕೂಲ್ ಕೂಲ್ ಮಾಡಿದ್ದಾನೆ.
ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ತಾಪಮಾನ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ತಾಪಮಾನ ಮತ್ತಷ್ಟು ಏರಿಕೆಯಾಗಿತ್ತು. ಆದರೆ, ಸಂಜೆ 6 ಗಂಟೆ ವೇಳೆಗೆ ಹಲವು ಏರಿಯಾಗಳಲ್ಲಿ ಏಕಾಏಕಿ ಮಳೆಯಾಗಿದೆ. ಇನ್ನು ಈ ಬೇಸಿಗೆ ಕಾಲದಲ್ಲೂ ಮಳೆಯಾಗಿರುವುದರಿಂದ ಜನರು ಅಚ್ಚರಿಯಾಗಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮಾರ್ಚ್ 11 ರಿಂದ 13 ರವರೆಗೆ ಬೆಂಗಳೂರು ನಗರ ಸೇರಿದಂತೆ 12 ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿಗಳು ಮತ್ತೆ ಮಳೆ ನಿರೀಕ್ಷೆ ಮಾಡಬಹುದು. ಹವಾಮಾನ ಇಲಾಖೆ ಹೇಳಿದ್ರೆ ಮಳೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ, ಇದೀಗ ಮುನ್ಸೂಚನೆಯಂತೆ ಮಳೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Tue, 11 March 25