ಚಿನ್ನ ಕಳ್ಳಸಾಗಾಣಿಕೆ: ಪತಿ ನೀಡಿದ ಸುಳಿವಿನಿಂದ ಡಿಆರ್‌ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ರನ್ಯಾ ರಾವ್?
ನಟಿ ರನ್ಯಾ ರಾವ್ ಅವರನ್ನು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ.ನಟಿ ರನ್ಯಾ ರಾವ್ ಬಂಧನ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮಧ್ಯೆ ನಟಿ ರನ್ಯಾ ರಾವ್ ಡಿಆರ್‌ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಾಗಿದೆ. ರಾನ್ಯಾ ರಾವ್ ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿದ್ದರು, ಇದು ಡಿಆರ್‌ಐ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೇ, ರನ್ಯಾ ರಾವ್ ಪತಿಯೇ ಈ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಅನುಮಾನವೂ ಇದೆ. ರನ್ಯಾ ರಾವ್ ಒಂದೇ ವರ್ಷದಲ್ಲಿ 28 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ.

ಬೆಂಗಳೂರು, ಮಾರ್ಚ್ 11: ಚಿನ್ನ ಕಳ್ಳಸಾಗಾಣಿಕೆ (Gold Smuggling) ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ (Ranya Rao) ಸದ್ಯ ನಾಯಾಂಗ ಬಂಧನದಲ್ಲಿದ್ದಾರೆ. ಅಷ್ಟಕ್ಕೂ ನಟಿ ರನ್ಯಾ ರಾವ್ ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಾಗಿದೆ. ನಟಿ ರನ್ಯಾ ರಾವ್ ಹೆಚ್ಚು ವಿದೇಶ ಪ್ರಯಾಣ ಮಾಡುತ್ತಿದ್ದರು. ಮದುವೆಯಾದ ನಂತರವೂ ತಮ್ಮ ವಿದೇಶ ಪ್ರಯಾಣವನ್ನು ಮುಂದುವರೆಸಿದ್ದರು.
ಮದುವೆಯಾದ ಎರಡೇ ತಿಂಗಳಿಗೆ ನಟಿ ರನ್ಯಾ ರಾವ್ ವಿದೇಶಕ್ಕೆ ತೆರಳಿದ್ದರು. ಇದು, ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾಗಿತ್ತಂತೆ. ರನ್ಯಾ ರಾವ್ ಪದೇ ಪದೆ ವಿದೇಶಕ್ಕೆ ಪ್ರಯಾಣ ಮಾಡುವ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳವಾಗಿದ್ದು, ವಿಚ್ಛೇದನ ಹಂತಕ್ಕೂ ತಲುಪಿತ್ತಂತೆ. ಈ ಹಿನ್ನೆಲೆಯಲ್ಲಿ ಚಿನ್ನ ಕಳ್ಳಸಾಗಾಣಿಕೆ ಬಗ್ಗೆ ಸ್ವತಃ ರನ್ಯಾ ರಾವ್ ಪತಿಯೇ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಡಿಆರ್ಐಗೆ ನಟಿ ಮೇಲೆ ಮೂಡಿದ್ದ ಅನುಮಾನ
ನಟಿ ರನ್ಯಾ ರಾವ್ ಹೆಚ್ಚು ಹೆಚ್ಚು ವಿದೇಶ ಪ್ರಯಾಣ ಮಾಡುತ್ತಿದ್ದರು. ಇದು, ಡಿಐಆರ್ ಅಧಿಕಾರಿಗಳಲ್ಲಿ ಅನುಮಾನ ಹುಟ್ಟುವಂತೆ ಮಾಡಿತ್ತು. ಹೀಗಾಗಿ, ರನ್ಯಾ ರಾವ್ ಟ್ರಾವೆಲಿಂಗ್ ಹಿಸ್ಟ್ರಿ ಮೇಲೆ ಡಿಐಆರ್ ಅಧಿಕಾರಿಗಳು ಕಳೆದ ಆರು ಕಣ್ಣಿಟ್ಟಿದ್ದರು. ನಟಿ ರನ್ಯಾ ರಾವ್ ಒಂದೇ ದಿನಕ್ಕೆ ದುಬೈಗೆ ಹೋಗಿ ಬರುತ್ತಿದ್ದಳು. ಈ ಹಿನ್ನೆಲೆಯಲ್ಲಿ ನಟಿ ರನ್ಯಾ ರಾವ್ ಮೇಲೆ ದೆಹಲಿಯ ಡಿಆರ್‌ಐ ಅಧಿಕಾರಿಗಳು ನಿಗಾ ಇಟ್ಟಿದ್ದರು. ಹೀಗಾಗಿ, ನಟಿ ರನ್ಯಾ ರಾವ್ ಡಿಆರ್‌ಐ ಬಲೆಗೆ ಬಿದ್ದಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು, ಚಿನ್ನ ವ್ಯಾಪರಿಗಳ ದ್ವೇಷದಿಂದ ಮತ್ತು ಸಚಿವರೊಬ್ಬರು ದೆಹಲಿಯ ಅಧಿಕಾರಿಗಳಿಗೆ ನೀಡಿದ ಮಾಹಿತಿಯಿಂದ ರನ್ಯಾ ರಾವ್ ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾಳೆ ಎಂಬ ಅನುಮಾನವೂ ಇದೆ.
28 ಬಾರಿ ವಿದೇಶಿ ಪ್ರಯಾಣ
ನಟಿ ರನ್ಯಾ ರಾವ್ ಒಂದೇ ವರ್ಷದಲ್ಲಿ 28 ಬಾರಿ ವಿದೇಶಿ ಪ್ರಯಾಣ ಮಾಡಿದ್ದಳು. ಕಳೆದ 15 ದಿನದಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದಳು. ಐದನೇ ಬಾರಿ ಪ್ರಯಾಣದ ವೇಳೆ ರನ್ಯಾ ರಾವ್ ಸಿಕ್ಕಿಬಿದ್ದಾಳೆ. ನಟಿ ರನ್ಯಾ ರಾವ್ ಬಂಧನದ ಬೆನ್ನಲ್ಲೆ ಮತ್ತೊಬ್ಬ ಆರೋಪಿಯನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತವಾಗಿರುವ ಎರಡನೇ ಆರೋಪಿ ತರುಣ್ ಕೊಂಡಾರುರಾಜು ಗೊಲ್ಡ್ ಸ್ಮಗ್ಲಿಂಗ್ನ ಕಿಂಗ್ ಪಿನ್ ಆಗಿದ್ದಾನೆ.
ನಟಿ ರನ್ಯಾ ರಾವ್ ಮುಖಾಂತರ ದುಬೈನಿಂದ ಬೆಂಗಳೂರಿಗೆ ತರುಣ್ ಚಿನ್ನ ತರಿಸುತ್ತಿದ್ದಿದ್ದನು. ಬೆಂಗಳೂರಿನಿಂದ ಹವಾಲ ಮೂಲಕ ಹಣ ದುಬೈಗೆ ಕಳುಹಿಸುತ್ತಿದ್ದನು. ಮತ್ತು ದುಬೈನಲ್ಲಿ ಚಿನ್ನ ಖರೀದಿ, ಟ್ರಾನ್ಸಪೋರ್ಟ್ ಖರ್ಚನ್ನು ತರುಣ್ ನೋಡಿಕೊಳ್ಳುತ್ತಿದ್ದಿದ್ದನು. ಐಪಿಎಸ್ ಅಧಿಕಾರಿ ಮಗಳಾದ ಹಿನ್ನೆಲೆಯಲ್ಲಿ ರನ್ಯಾ ರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದೇ ಹೊರ ಬರುತ್ತಾಳೆ. ಇದನ್ನು ತಿಳಿದ ತರುಣ ಆಕೆಯ ಜೊತೆ ಸೇರಿ ಚಿನ್ನ ಕಳ್ಳಸಾಗಾಣಿಕೆಗೆ ಪ್ಲಾನ್ ಮಾಡಿದ್ದನು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Tue, 11 March 25