ಬೆಂಗಳೂರು, ಮಾರ್ಚ್.05: ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಸುಂದರ ಬೆಟ್ಟಗಳು, ಹಸಿರ ತಪ್ಪಲಿನಲ್ಲಿ ಎದ್ದು ಕಾಣುವ ಬೃಹತ್ ಶಿವನ ಮೂರ್ತಿ ಇರುವ ಇಶಾ ಫೌಂಡೇಶನ್ (Isha Foundation) ನೋಡಲು ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ವಾರಾಂತ್ಯ, ರಜಾ ದಿನಗಳು ಬಂತೆಂದರೆ ಜನ ಸಾಗರವೇ ಕಂಡು ಬರುತ್ತೆ. ಸದ್ಯ ಈಶಾ ಫೌಂಡೇಶನ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ (BMTC) ವಿಶೇಷ ಟೂರ್ ಪ್ಯಾಕೆಜ್ ವ್ಯವಸ್ಥೆ ಮಾಡಿದೆ. ನಾಳೆಯಿಂದ (ಮಾರ್ಚ್.06) ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಆರಂಭವಾಗಲಿದೆ.
ಈಶಾ ಫೌಂಡೇಶನ್ ಹೆಸರಿನ ಟೂರ್ ಪ್ಯಾಕೇಜ್ ಸೇವೆಯನ್ನು ಬಿಎಂಟಿಸಿ ನೀಡಲು ಮುಂದಾಗಿದೆ. ಈ ವಿಶೇಷ ಟೂರ್ ಪ್ಯಾಕೇಜ್ ಅಡಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಧ್ಯಾಹ್ನ 12 ಗಂಟೆಗೆ ಬಸ್ ಸೇವೆ ಶುರುವಾಗಲಿದ್ದು ರಾತ್ರಿ 9.30ಕ್ಕೆ ಮೆಜೆಸ್ಟಿಕ್ಗೆ ವಾಪಸ್ ಕರೆದುಕೊಂಡು ಬರಲಾಗುತ್ತೆ. ಒಂದು ಸೀಟಿಗೆ 500 ರೂಪಾಯಿ ದರ ನಿಗದಿ ಮಾಡಲಾಗಿದೆ. ಈಶಾ ಫೌಂಡೇಶನ್ ಸೇರಿದಂತೆ ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅವಕಾಶವಿದೆ. ನಾಳೆಯಿಂದ ಎಲ್ಲ ಸಾರ್ವತ್ರಿಕ ರಜೆ ದಿನಗಳಲ್ಲಿ ಈ ಸೇವೆ ಲಭ್ಯವಿರಲಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಈಶಾ ಫೌಂಡೇಶನ್‌ನ ಸದ್ಗುರು ಸನ್ನಿಧಿಯಲ್ಲಿ ನಾಳೆ ವಿಶೇಷ ನಾಗಾರಾಧನೆ! ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆಯು 112 ಅಡಿ ಇದ್ದು ಉಕ್ಕಿನಿಂದ ಮಾಡಲಾಗಿದೆ. ಸುಮಾರು 500 ಟನ್ ತೂಕವಿದೆ. ಇದು 34 ಮೀಟರ್ ಎತ್ತರ, 45 ಮೀಟರ್ ಉದ್ದ ಮತ್ತು 25 ಮೀಟರ್ ಅಗಲವಿದೆ. ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಳಿಯ ಇಶಾ ಫೌಂಡೇಶನ್‌ಗೆ ತೆರಳಲು ಟ್ರಾಫಿಕ್‌ಗೆ ಅನುಗುಣವಾಗಿ ಸುಮಾರು 1 ಗಂಟೆ 30 ನಿಮಿಷ ಬೇಕಾಗುತ್ತೆ. ಇದೆ ಸಂದರ್ಭದಲ್ಲಿ ಹತ್ತಿರದಲ್ಲಿರುವ ನಂದಿ ಗಿರಿಧಾಮ ಹಾಗೂ ಭೋಗ ನಂದೀಶ್ವರ ದೇವಾಲಯಕ್ಕೂ ಜನ ಹೆಚ್ಚಾಗಿ ಭೇಟಿ ನೀಡುತ್ತಾರೆ. ಬಿಎಂಟಿಸಿಯ ವಿಶೇಷ ಟೂರ್ ಪ್ಯಾಕೇಜ್ ಮೂಲಕ ಪ್ರವಾಸಿಗರು ಕೇವಲ 500 ರೂಗೆ ನಾಲ್ಕು ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ