ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ: ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು, ಪ್ರವಾಸೋದ್ಯಮಕ್ಕೆ ಜೀವ

| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2024 | 10:37 PM

ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವಿಶ್ವ ಮನ್ನಣೆ ಪಡೆದಿವೆ. ಗಗನಚುಂಬಿ ಬೆಟ್ಟಗುಡ್ಡಗಳು, ಹಸಿರ ರಾಶಿ. ಮುತ್ತಿಕ್ಕುವ ಮಂಜಿನ ಹನಿ ಎಲ್ಲವೂ ಪ್ರವಾಸಿಗರಿಗೆ ಬಹಳ ಇಷ್ಟ. ಹಾಗಾಗಿಯೇ ಪ್ರವಾಸ ಬರಲು ಬಹಳಷ್ಟು ಮಂದಿ ಕೊಡಗು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. 2023ರಲ್ಲಿ ಕೊಡಗು ಪ್ರವಾಸೋದ್ಯಮ ಇನ್ನಿಲ್ಲದಂತೆ ಚೇತರಿಸಿಕೊಂಡಿತ್ತು. ಸ್ವತಃ ಪ್ರವಾಸೋದ್ಯಮಗಳೇ ಅಚ್ಚರಿ ಪಡುವಷ್ಟು ಜಿಲ್ಲೆ ವೃದ್ಧಿಯಾಗಿತ್ತು.

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ: ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು, ಪ್ರವಾಸೋದ್ಯಮಕ್ಕೆ ಜೀವ
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ: ಕೈಬೀಸಿ ಕರೆಯುತ್ತಿವೆ ಪ್ರವಾಸಿ ತಾಣಗಳು, ಪ್ರವಾಸೋದ್ಯಮಕ್ಕೆ ಜೀವ
Follow us on

ಕೊಡಗು, ಮೇ 31: ಜಿಲ್ಲೆಯ ಆರ್ಥಿಕತೆ ಬಹಳಷ್ಟು ಪ್ರವಾಸೋದ್ಯಮವನ್ನೂ (tourism) ನೆಚ್ಚಿಕೊಂಡಿದೆ. ಆದರೆ ಈ ವರ್ಷ ಇಡೀ ದೇಶವನ್ನ ಕಾಡಿದ್ದ ಬರ ಹಾಗೂ ಬಿಸಿಲಿನ ತಾಪ, ಕೊಡಗು (Kodagu) ಪ್ರವಾಸೋದ್ಯಮವನ್ನೂ ಕಾಡಿತ್ತು. ಹಾಗಾಗಿ ಈ ಬಾರಿ ಮೊದಲ ಆರು ತಿಂಗಳು ಪ್ರವಾಸೋದ್ಯಮ ಇನ್ನಿಲ್ಲದಂತೆ ನೆಲಕಚ್ಚಿತ್ತು. ಆದರೆ ಇದೀಗ ಕಳೆದೊಂದು ವಾರದ ಮೇಲೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಆ ಕುರಿತಾಗಿ ಒಂದು ವರದಿ ಇಲ್ಲಿದೆ.

ಜಿಲ್ಲೆಯ ಪ್ರವಾಸಿ ತಾಣಗಳು ವಿಶ್ವ ಮನ್ನಣೆ ಪಡೆದಿವೆ. ಗಗನಚುಂಬಿ ಬೆಟ್ಟಗುಡ್ಡಗಳು, ಹಸಿರ ರಾಶಿ. ಮುತ್ತಿಕ್ಕುವ ಮಂಜಿನ ಹನಿ ಎಲ್ಲವೂ ಪ್ರವಾಸಿಗರಿಗೆ ಬಹಳ ಇಷ್ಟ. ಹಾಗಾಗಿಯೇ ಪ್ರವಾಸ ಬರಲು ಬಹಳಷ್ಟು ಮಂದಿ ಕೊಡಗು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. 2023ರಲ್ಲಿ ಕೊಡಗು ಪ್ರವಾಸೋದ್ಯಮ ಇನ್ನಿಲ್ಲದಂತೆ ಚೇತರಿಸಿಕೊಂಡಿತ್ತು.

ಇದನ್ನೂ ಓದಿ: ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ: ಕೆಆರ್​ಎಸ್, ಕಬಿನಿ ಡ್ಯಾಂಗಳಲ್ಲಿ ಹೆಚ್ಚುತ್ತಿದೆ ನೀರಿನ ಮಟ್ಟ

ಸ್ವತಃ ಪ್ರವಾಸೋದ್ಯಮಗಳೇ ಅಚ್ಚರಿ ಪಡುವಷ್ಟು ಜಿಲ್ಲೆ ವೃದ್ಧಿಯಾಗಿತ್ತು. 2013ರ ಜನವರಿಯಿಂದ ಡಿಸೆಂಬರ್ ವರೆಗೆ ಜಿಲ್ಲೆಗೆ ಭರ್ತಿ 43 ಲಕ್ಷ ರೂ. ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ 2024 ಮಾತ್ರ ಪ್ರವಾಸೋದ್ಯಮಿಗಳ ಪಾಲಿಗೆ ನೀರಸವಾಗಿತ್ತು. ಈ ವರ್ಷದ ಮೊದಲ ಐದು ತಿಂಗಳು ಜಿಲ್ಲೆಯತ್ತ ಪ್ರವಾಸಿಗರು ಮುಖ ಮಾಡಿರುವುದು ಬಹಳ ಕಡಿಮೆ.

ತೀವ್ರ ಬಿಸಿಲಿನ ತಾಪ ಹಾಗೂ ಬರದಿಂದ ಕಂಗೆಟ್ಟಿದ್ದ ಇಡೀ ನಾಡು ಪ್ರವಾಸೋದ್ಯಮದಲ್ಲೂ ಕುಸಿತ ಕಂಡಿತ್ತು. ಆದರೆ ಇದೀಗ ಕಳೆದೊಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಎಲ್ಲೆಡೆ ಹಸಿರು ನಳನಳಿಸುತ್ತಿದೆ. ಬೋಳಾಗಿದ್ದ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿದೆ. ಜಲಪಾತಗಳಲ್ಲಿ ನೀರು ಹರಿಯುತ್ತಿದೆ.

ಜಿಲ್ಲೆಯ ರಾಜಾಸೀಟ್, ಅಬ್ಬಿಫಾಲ್ಸ್​ ಮಾಂದಲಪಟ್ಟಿ, ತಲಕಾವೇರಿ ಭಾಗಮಂಡಲ, ಇಗ್ಗುತ್ತಪ್ಪ ದೇವಸ್ಥಾನ ಮಲ್ಲಳ್ಳಿ ಜಲಪಾತ, ನಾಗರಹೊಳೆ ಸಫಾರಿ, ಇರ್ಪು ಜಲಪಾತ ಹೀಗಿ ಹತ್ತು ಹಲವು ಪ್ರವಾಸಿ ತಾಣಗಳಿಗೆ
ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡ್ತಾ ಇದ್ದಾರೆ. ಆಗಿಂದ್ದಾಗೆ ಕಾಣಿಸಿಕೊಳ್ಳುವ ಮಂಜು ಪ್ರವಾಸಿಗರ ಸಂಭ್ರಮ ಹೆಚ್ಚಿಸಿದೆ. ಇನ್ನು ಜೂನ್ ಮೊದಲ ವಾರದಲ್ಲಿ ಮಳೆ ಅಬ್ಬರ ಜೋರಾಗಲಿದ್ದು ಜಲಪಾತಗಳು ಧುಮ್ಮಿಕ್ಕಲಾರಂಭಿಸುತ್ತವೆ. ಆಗ ಪ್ರವಾಸಿಗರಿಗೆ ಇನ್ನಷ್ಟು ರೋಚಕ ಅನುಭವ ಸಿಗಲಿದೆ.

ಇದನ್ನೂ ಓದಿ: Kushalnagar News: ಬಾಡಿದ ಸುವಿಶಾಲ ತಾವರೆ ಕೆರೆ: ಹೂಳೆತ್ತಲು ಮುಂದಾದ ಸ್ಥಳೀಯಾಡಳಿತ

ಇದೇ ವೇಳೆ ಜಿಲ್ಲೆಗೆ ಪ್ರತಿವರ್ಷ ಆಗಮಿಸುತ್ತಿರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ಆರೋಪವೂ ಇದೆ. ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಪ್ರವಾಸಿ ಮಿತ್ರರ ಕೊರತೆ ಇದೆ. ಪ್ರವಾಸಿ ತಾಣಗಳಲ್ಲಿ ಸೂಕ್ತ ಶೌಚಾಲಯದ ಅಗತ್ಯವಿದೆ. ಪ್ರವಾಸಿ ತಾಣಗಳಿಗೆ ತೆರಳುವ ರಸ್ತೆಗಳ ಅಭಿವೃದ್ಧಿಯಾಗಬೇಕಿದೆ. ಹಾಗೆಯೇ ಪ್ರವಾಸಿಗರನ್ನ ಸುಲಿಗೆ ಮಾಡುವವರ ವಿರುದ್ಧ ಕ್ರಮವಾಗಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:32 pm, Fri, 31 May 24