ಶತ್ರು ಸಂಹಾರ ಪೂಜೆ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​​ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್​ ಮಾಡಿರುವ ಅವರು ವಿಷಯವನ್ನು ಸಂದರ್ಭದಿಂದ ಹೊರಗಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದಿದ್ದಾರೆ.

ಶತ್ರು ಸಂಹಾರ ಪೂಜೆ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ಶತ್ರು ಸಂಹಾರ ಪೂಜೆ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್
Follow us
|

Updated on: May 31, 2024 | 9:50 PM

ಬೆಂಗಳೂರು, ಮೇ 31: ರಾಜ್ಯ ರಾಜಕೀಯದಲ್ಲಿ ಮತ್ತೆ ಮಾಟ ಮಂತ್ರ ತಂತ್ರದ ಮಾತು ಕೇಳಿಬರುತ್ತಿದೆ. ಸಿಎಂ, ಡಿಸಿಎಂ ಕಟ್ಟಿ ಹಾಕಲು ಮಹಾಯಾಗ (Mahayaga) ನಡೆದಿದೆಯಂತೆ. ಹೀಗೊಂದು ಹೊಸ ಬಾಂಬ್​ ಅನ್ನು ನಿನ್ನೆ ಡಿಕೆ ಶಿವಕುಮಾರ್ (DK Shivakumar)​ ಸಿಡಿಸಿದ್ದರು. ಕೇವಲ ನಾನೊಂದೇ ಅಲ್ಲ, ಸಿದ್ದರಾಮಯ್ಯರನ್ನ ಸಹ ಟಾರ್ಗೆಟ್ ಮಾಡಲಾಗಿದೆ ಎಂದಿದ್ದರು. ಆದರೆ ಕೇರಳ ಕಣ್ಣೂರಿನ ರಾಜರಾಜೇಶ್ವರ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆ ಮಾಡಲಾಗಿದೆ ಎಂದು ಕೆಲವರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಡಿಕೆ ಶಿವಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಡಿಕೆ ಶಿವಕುಮಾರ್​, ‘ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ದೇವಸ್ಥಾನದಿಂದ 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ.

ಡಿಕೆ ಶಿವಕುಮಾರ್ ಟ್ವೀಟ್​ 

‘ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ದೇವಿಯ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಪ್ಪು ಬಣ್ಣದ ಕುರಿ, ಮೇಕೆ ಬಲಿ: ಕೇರಳದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಪಂಚಬಲಿ ಪೂಜೆ

ಶತ್ರು ಸಂಹಾರ ಪೂಜೆಯಲ್ಲಿ 21 ಕುರಿ, 3 ಎಮ್ಮೆ, 3 ಹಂದಿ, ಕೋಳಿಗಳನ್ನ ಬಲಿ ಕೊಡಲಾಗ್ತಾ ಇದೆ. ಇದನ್ನ ಯಾರು ಮಾಡಿಸ್ತಾ ಇದಾರೆ ಎಂಬುದು ನನಗೆ ಗೊತ್ತಿದೆ. ನಮ್ಮನ್ನ ತುಳಿಯಲು ಪ್ರಯತ್ನ ಮಾಡ್ತಿದ್ದಾರೆ. ನಾವು ನಂಬಿದ ದೇವರು ನಮ್ಮನ್ನ ಕಾಪಾಡುತ್ತಾನೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ