
ತುಮಕೂರು, (ಜನವರಿ 24): ತಮಿಳುನಾಡು ಕೇರಳದಂತೆ ಕರ್ನಾಟಕದಲ್ಲೂ (Karnataka) ರಾಜ್ಯಪಾಲ (governor) ವರ್ಸಸ್ ಸರ್ಕಾರದ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ. ಮೊನ್ನೆ ಕರ್ನಾಟಕದ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ (Karnataka Assembly Session), ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಓದದೇ ತಮ್ಮ ಆದ ಎರಡು ಲೈನ್ ಓದಿ ಹೋಗಿದ್ದಾರೆ. ಫೂರ್ತಿ ಭಾಷಣ ಮಾಡದ ರಾಜ್ಯಪಾಲರ ನಡೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಕದನಕ್ಕೆ ವೇದಿಕೆಯಾಗಿದೆ. ರಾಜ್ಯಪಾಲರು ಸಾಂವಿಧಾನಿಕ ಕರ್ತವ್ಯ ಉಲ್ಲಂಘಿಸಿದ್ದಾರೆ. ಇದು ಕೇಂದ್ರದ ಕುಮ್ಮಕ್ಕು ಎಂದು ಕಿಡಿಕಾರಿದ್ರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಕೇಂದ್ರದ ವಿರುದ್ಧ ಸಂಘರ್ಷ ಮಾಡುತ್ತಿದ್ದೀರಾ ಎಂದು ಬಿಜೆಪಿ ಪಡೆ ತಿರುಗೇಟು ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ಶಾಸಕ ಸುರೇಶ್ ಗೌಡ , ಅವರು ಕರ್ನಾಟಕದಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಹೇರಲಿದ್ದಾರೆ ಎಂದು ಬಹಿರಂಗವಾಗಿಯೇ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆ ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ತುಮಕೂರಿನಲ್ಲಿಂದು ಮಾತನಾಡಿದ ಸುರೇಶ್ ಗೌಡ, ರಾಜ್ಯದಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಹೇರುತ್ತಾರೆ. ಅಸವಿಂಧಾನಕವನ್ನು ನನ್ನ ಕೈನಲ್ಲಿ ಓದಿಸಬೇಡಿ ಎಂದು ಈಗಾಗಲೇ ರಾಜ್ಯಪಾಲರು ತೋರಿಸಿದ್ದಾರೆ.ಇನ್ನಾದರೂ ಕಾಂಗ್ರೆಸ್ ನವರು ರಾಜ್ಯಪಾಲರನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಪಾಲರು ರಾಷ್ಟಪತಿ ಆಡಳಿತ ಹೇರುತ್ತಾರೆ. ಕಾಂಗ್ರೆಸ್ ಅನ್ನು ರಾಜ್ಯದಿಂದ ತೋಲಗಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕೆಲವು ಕಾಂಗ್ರೆಸ್ ಗೂಂಡಾ ಶಾಸಕರು ರಾಜ್ಯಪಾಲರಿಗೆ ಧಮ್ಕಿ ಹಾಕಿದ್ದಾರೆ. ಇವರ ಗೂಂಡಾ ವರ್ತನೆ ಇಂದ ರಾಜ್ಯಪಾಲರು ಗಡಿಬಿಡಿಯಿಂದ ಭಾಷಣ ಮಾಡದೇ ಹೋದರು. ಇವರು ಬೆದರಿಕೆ ಹಾಕಿರುವುದಕ್ಕೆ ರಾಜ್ಯಪಾಲರು ಭಯದಿಂದ ವಾಪಾಸ್ ಹೋದರು. ಹರಿಪ್ರಸಾದ್ ಅವರು ತಮ್ಮ ಹಿಂದಿನ ದಿನಗಳನ್ನ ನೆನೆಪಿಸಿಕೊಂಡು ಸದನದಲ್ಲಿ ವರ್ತನೆ ತೋರಿದ್ದಾರೆ ಎಂದು ಕಿರಿಕಾರಿರು.
ಕಾಂಗ್ರೆಸ್ ಸರ್ಕಾರ ರಾಮ್ ಜಿ ಯೋಜನೆ ವಿರೋಧಿಸಿ ಅಧಿವೇಶನ ಕರೆದಿತ್ತು. ಕಾಂಗ್ರೆಸ್ ನವರಿಗೆ ಶಾಲೆ ಮತ್ತು ಆಸ್ಪತ್ರೆ ಗಳ ಕುರಿತು ವಿಶೇಷ ಅಧಿವೇಶನ ಕರೆಯುವಂತೆ ಹಲವಾರು ಬಾರಿ ಒತ್ತಾಯ ಮಾಡಿದ್ದೇವೆ. ಆದರೆ ಅವರಿಗೆ ಬಡವರ ಶಾಲೆ, ಆಸ್ಪತ್ರೆ ಗೆ ಅವರಿಗೆ ಆಸಕ್ತಿ ಇಲ್ಲ. ಕಾಂಗ್ರೆಸ್ ಸರ್ಕಾರ ನೆಹರು ಕಾಲದಿಂದಲೂ ಗರಿಬಿ ಹಠಾವೋ ಎಂದು ಹೇಳಿತ್ತು. ಆದರೆ ಬಡತನ ಇನ್ನೂ ಹೋಗಿಲ್ಲ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿಗಿಂತ ಮೊದಲು, ನೆಹರು ರೋಜಗಾರ್ ಇತ್ತು.ಜಿ ರಾಮ್ ಜಿ ಯೋಜನೆ ಯಲ್ಲಿ 100 ದಿನ ಕೆಲಸದ ಬದಲು 125ದಿನ ಕೆಲಸ ಕೊಟ್ಟಿದ್ದೇವೆ. ಹಿಂದೆ 37ಸಾವಿರ ಒಂದು ಕುಟುಂಬಕ್ಕೆ ಹಣ ಬರುತ್ತಿತ್ತು. ಈಗ 47ಸಾವಿರ ಹಣ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ 40% ಅಷ್ಟು ಹಣ ವಿನಿಯೋಗ ಮಾಡಬೇಕು. ಅಷ್ಟು ಹಣ ವಿನಿಯೋಗ ಮಾಡಲು ಆಗುತ್ತಾ ಇಲ್ಲ. ಯಾಕಂದ್ರೆ ಸರ್ಕಾರ ದಿವಾಳಿ ಯಾಗಿದೆ. ಅದಕ್ಕಾಗಿ ರಾಮ್ ಜಿ ಯೋಜನೆ ವಿರೋಧ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ 5 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ನುಂಗಿ ನೀರು ಕುಡಿದಿದೆ.
ದೇಶದ ಎಲ್ಲಾ ಗ್ರಾಮಗಳು ವಿಕಾಸ ಆಗಬೇಕು ಎಂಬ ಚಿಂತನೆ ಪ್ರಧಾನಿ ಹೊಂದಿದ್ದಾರೆ. ಈ ಬಿಲ್ ಸಂಸತ್ ನಲ್ಲಿ ಅನುಮೋದನೆ ಆಗಿ ರಾಷ್ಟ್ರ ಪತಿಗಳ ಅಂಕಿತ ಆಗಿದೆ. ಅದಾದ ನಂತರ ರಾಜ್ಯಪಾಲರನ್ನು ಕರೆದು ಈ ಬಿಲ್ ಸರಿ ಇಲ್ಲ ಎಂದು ಹೇಳಿಸಲು ಕಾಂಗ್ರೆಸ್ ನವರು ಪ್ರಯತ್ನಪಟ್ಟರು. ರಾಷ್ಟ್ರಪತಿಗಳು ಅಂಕಿತ ಹಾಕಿರುವುದನ್ನು ರಾಜ್ಯಪಾಲರು ವಿರೋಧಿಸಲು ಸಾಧ್ಯನಾ ಎಂದು ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. CL 7 ಪರವಾನಿಗೆಗೆ 2.5ಕೋಟಿ ರೂ. ಲಂಚ ಕೇಳಿದ್ದಾರೆ. ಇಂದಿರಾ ಗಾಂಧಿ, ನೆಹರು ಹೆಸರಲ್ಲಿ 400 ಯೋಜನೆಗಳಿಗೆ ಹೆಸರು ಇಟ್ಟಿದಾರೆ. ಇವತ್ತು ರಾಮನ ಹೆಸರು ಇಟ್ಟಿರೋದಕ್ಕೆ ಅವರಿಗೆ ನಿದ್ದೆ ಬರುತ್ತಿಲ್ಲ. ರಾಮನ ಹೆಸರು ತೋರಿಸಿಕೊಂಡು ಕಾಂಗ್ರೆಸ್ ಸರ್ಕಾರ ಬರಿ ಅಲ್ಪಸಂಖ್ಯಾತರು, ಬಡವರನ್ನ ಶೋಷಣೆ ಮಾಡಿಕೊಂಡು ಬಂದಿದೆ. ರಾಹುಲ್ ಗಾಂಧಿ ಬೌದ್ಧಿಕವಾಗಿ ದಿವಾಳಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಕಾಂಗ್ರೆಸ್ ನವರು ಪದೇ ಪದೇ ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಮಾತಾಡ್ತಾರೆ. ಆದರೆ ಒಬ್ಬ ದಲಿತ ರಾಜ್ಯ ಪಾಲರಿಗೆ ಅವಮಾನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ