ಬೆಂಗಳೂರು, ಮೇ 26: ಗುಜರಾತ್ನಲ್ಲಿ ನಿನ್ನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ (Fire disaster)
ಸಾವಿನ ಸಂಖ್ಯೆ 33ಕ್ಕೇರಿದೆ. ರಾಜ್ಕೋಟ್ನ ಟಿಆರ್ಪಿ (TRP) ಗೇಮಿಂಗ್ ಝೋನ್ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು 9 ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 33 ಜನ ಸಜೀವ ದಹನವಾಗಿದ್ದಾರೆ. ಸದ್ಯ ಈ ಘಟನೆ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಎಚ್ಚೆತ್ತಿದ್ದು, ಬೆಂಗಳೂರಿನ ಮಾಲ್ ಮತ್ತು ಗೇಮಿಂಗ್ ಝೋನ್‌ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತಾಗಿ ಪತ್ರ ಬರೆದಿರುವ ಡಿಕೆ ಶಿವಕುಮಾರ್, ಬೆಂಗಳೂರಿನಾದ್ಯಂತ ಶಾಪಿಂಗ್ ಮಾಲ್‌ಗಳು, ಗೇಮಿಂಗ್ ಮತ್ತು ಸಾಹಸ ವಲಯಗಳಂತಹ ಹೆಚ್ಚಾಗಿ ಜನದಟ್ಟಣೆ ಇರುವ ಮನರಂಜನಾ ಸ್ಥಳಗಳಲ್ಲಿ ಅಹಿತಕರ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಸೂಕ್ತವಾದ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳ ಅನುಸರಣೆ ಅತ್ಯಂತ ಮಹತ್ವದ್ದಾಗಿದೆ.
Adherence to appropriate safety measures and precautions is of utmost importance for the prevention of untoward fire disasters in high traffic entertainment spaces like shopping malls, gaming and adventure zones across Bengaluru.
I have written to the BBMP Commissioner with… pic.twitter.com/0OmdKHxibm
— DK Shivakumar (@DKShivakumar) May 26, 2024
ಅಗ್ನಿ ಅವಘಡಗಳನ್ನು ತಪ್ಪಿಸುವುದಕ್ಕಾಗಿ ನಿಯಮಿತ ತಪಾಸಣೆಗಳನ್ನು ಕಡ್ಡಾಯವಾಗಿ ಮಾಡುವುದರೊಂದಿಗೆ, ನಗರದಾದ್ಯಂತ ಮನರಂಜನಾ ಸ್ಥಳಗಳಲ್ಲಿ ಸುರಕ್ಷಿತ ಕ್ರಮಗಳನ್ನು ತ್ವರಿತವಾಗಿ ಅಳವಡಿಸಲು ಸೂಚನೆ ನೀಡಿದ್ದಾರೆ.
ಗುಜರಾತ್‌ನ ರಾಜ್ ಕೋಟ್‌ನ ಮನರಂಜನಾ ಕೇಂದ್ರದಲ್ಲಿ (ಗೇಮ್ ರೋಝನ್) ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿರುವುದು ವರದಿಯಾಗಿದ್ದು, ಇದು ಅತ್ಯಂತ ಕಳವಳಿಕಾರಿ ದುರ್ಘಟನೆಯಾಗಿರುತ್ತದೆ. ಈ ದುರಂತವು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದ್ದು, ಬೆಂಗಳೂರಿನ ಹಲವು ಪ್ರತಿಷ್ಠಿತ ಮಾಲ್‌ಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಗೇಮ್ ಝನ್ ಹಾಗೂ ಸಾಹಸ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಇಂತಹ ಮನರಂಜನಾ ಕೇಂದ್ರಗಳು / ಗೇಮ್ ಜೋನ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕಿದೆ.
ಇದನ್ನೂ ಓದಿ: ಹೊರಗುತ್ತಿಗೆಯಲ್ಲಿ ಮೀಸಲಾತಿ ತರಲು ಮುಂದಾದ ಸರ್ಕಾರ: ಆರೋಗ್ಯ ಇಲಾಖೆ ನೌಕರರ ವಿರೋಧ ಏಕೆ?
ಮಜನರಂಜನಾ ಕೇಂದ್ರ, ಗೇಮಿಂಗ್ ರೋಝನ್ಗಳಿರುವ ಪ್ರದೇಶದಲ್ಲಿ ಅಗ್ನಿದುರಂತ ಸೇರಿದಂತೆ ಯಾವುದೇ ಅನಾಹುತ ಸಂಭವಿಸದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು, ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲು ಮತ್ತು ಈಗಾಗಲೇ ವಿಧಿಸಲಾಗಿರುವ ರಕ್ಷಣಾ ನಿಯಮ ಮತ್ತು ನಿಬರ್ಂಧಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಲು ತಿಳಿಸುತ್ತಾ, ಯಾವುದೇ ದುರ್ಘಟನೆಗಳು ಸಂಭವಿಸದಂತೆ ಕ್ರಮವಹಿಸಲು ಸೂಚಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.