ಚನ್ನಗಿರಿ ಲಾಕಪ್​ ಡೆತ್: ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ

ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ಲಾಕಪ್​ ಡೆತ್, ಠಾಣೆ ಬಳಿ ದಾಂಧಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಇಡಿ ಪ್ರಕರಣವನ್ನು ಸಿಐಡಿ ಹೆಗಲಿಗೆ ವಹಿಸಲಾಗಿದೆ. ಶೀಘ್ರವೇ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಲಿದ್ದಾರೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ‌ಪ್ರಶಾಂತ್‌ ಹೇಳಿದ್ದಾರೆ. ಸದ್ಯ 25 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ ಎಂದರು.

ಚನ್ನಗಿರಿ ಲಾಕಪ್​ ಡೆತ್: ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ
ಚನ್ನಗಿರಿ ಲಾಕಪ್​ ಡೆತ್, ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on:May 26, 2024 | 3:57 PM

ದಾವಣಗೆರೆ, ಮೇ 26: ಚನ್ನಗಿರಿ (channagiri) ಠಾಣೆಯಲ್ಲಿ ಲಾಕಪ್​ ಡೆತ್, ಠಾಣೆ ಬಳಿ ದಾಂಧಲೆ ಪ್ರಕರಣವನ್ನು ಇದೀಗ ಸಿಐಡಿ ಹಗಲಿಗೆ ವಹಿಸಲಾಗಿದೆ. ಶೀಘ್ರವೇ ಸಿಐಡಿ (CID) ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಲಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ 25 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತಾಗಿ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ‌ಪ್ರಶಾಂತ್​ ಮಾತನಾಡಿದ್ದು, ಪ್ರಕರಣದ ತನಿಖೆ ಸಿಐಡಿಗೆ ವಹಿಸಲಾಗಿದೆ. ಇಷ್ಟರಲ್ಲಿಯೇ ಸಿಐಡಿ ಅಧಿಕಾರಿಗಳು ಪ್ರಕರಣವನ್ನ ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ 25 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ. ಬಂಧಿತರು ಚನ್ನಗಿರಿ, ಹೊನ್ನೆಬಾಗಿ, ನಲ್ಲೂರು ಗ್ರಾಮಗಳ ನಿವಾಸಿಗಳು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 307ರಡಿ ಕೇಸ್ ದಾಖಲಾಗಿದೆ. ನಿಯಮದಂತೆ ಜಡ್ಜ್‌ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. 3 ದಿನದಲ್ಲಿ ಪೋಸ್ಟ್‌ ಮಾರ್ಟಂ ವರದಿ ಬರಲಿದ್ದು ಸತ್ಯಾಂಶ ತಿಳಿಯುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚನ್ನಗಿರಿ ಪೊಲೀಸ್​ ಠಾಣೆ ಮೇಲೆ ದಾಳಿ: ಶಾಂತಿ ಕಾಪಾಡುವಂತೆ DYSP ಕೈಮುಗಿದರೂ ಕೇಳದ ಕಿಡಿಗೇಡಿಗಳು, ಅಸಹಾಯಕರಾದ ಪೊಲೀಸರು

ಪ್ರಕರಣದ ಬಗ್ಗೆ ಮಾಹಿತಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಡಿವೈಎಸ್​ಪಿ ಪ್ರಶಾಂತ ಮುನ್ನೊಳ್ಳಿ ಮಾಹಿತಿ ಪಡೆದುಕೊಂಡಿದ್ದಾರೆ. ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದು, ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ​

ಚನ್ನಗಿರಿ ಠಾಣೆಯಲ್ಲಿ 6 ಪ್ರಕರಣ ದಾಖಲು

ಕಲ್ಲು ತೂರಾಟ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ನವರಿಗೆ ಗಾಯಪಡಿಸಿ ಹಾಗೂ ಸರ್ಕಾರಿ ಸ್ವತ್ತುಗಳನ್ನು ದ್ವಂಸಗೊಳಿಸಿ ಕೃತ್ಯಕ್ಕೆ ಸಂಬಂಧಪಟ್ಟಂತೆ ಚನ್ನಗಿರಿ ಠಾಣೆಯಲ್ಲಿ 6 ಪ್ರಕರಣಗಳು ದಾಖಲಾಗಿವೆ. ಘಟನೆ ಹಿನ್ನೆಲೆ ಸಂಪೂರ್ಣ ನಿಗಾವಹಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಐದು ತಂಡಗಳನ್ನು ರಚನೆ ಮಾಡಿದ್ದ ಪೊಲೀಸ್​​ ಸಿಸಿ ಸಿಸಿ ಕ್ಯಾಮರಾ, ಮೊಬೈಲ್ ಚಿತ್ರೀಕರಣದ ವಿಡಿಯೋ, ಸಾರ್ವಜನಿಕರು ಚಿತ್ರಿಕರಿಸಿದ ವಿಡಿಯೋಗಳನ್ನು ಪರಿಶೀಲಿಸುವ ಮೂಲಕ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದರು. ಆ ಮೂಲಕ 40 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಪತ್ತೆ ಮಾಡಿದ್ದರು.

ಮಟ್ಕಾ ಆಡಿಸ್ತಿದ್ದ ಆರೋಪದಲ್ಲಿ ಚನ್ನಗಿರಿ ಪೊಲೀಸರು ಆದಿಲ್ ಎಂಬಾತನನ್ನ ವಶಕ್ಕೆ ಪಡೆದಿದ್ದರು. ಕುಸಿದು ಬಿದ್ದಿದ್ದ ಆದಿಲ್​ನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಷ್ಟರಲ್ಲೇ ಆದಿಲ್ ಮೃತಪಟ್ಟಿದ್ದ. ಉದ್ವಿಗ್ನಗೊಂಡ ಮೃತನ ಸಂಬಂಧಿಕರು ಮತ್ತು ನೂರಾರು ಜನ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಇದನ್ನೂ ಓದಿ: ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಲಾಕಪ್ ಡೆತ್​​​​ ಕೇಸ್​ಗೆ ಟ್ವಿಸ್ಟ್: ಉಲ್ಟಾ ಹೊಡೆದ ಆದಿಲ್​ ತಂದೆ

ಇದಕ್ಕೂ ಮೊದಲು ಡಿವೈಎಸ್​ಪಿ ಪ್ರಶಾಂತ್ ಕೈಮುಗಿದು ಮನವಿ ಮಾಡಿಕೊಂಡಿದ್ದರು. ಪೋಸ್ಟ್ ಮಾರ್ಟಂ ರಿಪೋರ್ಟ್ ಬರೋವರೆಗೆ ಕಾಯಿರಿ ಅಂದಿದ್ದರು. ಆದರೆ ಉದ್ರಿಕ್ತರ ಕೋಪದ ಮುಂದೆ ಪೊಲೀಸರು ಅಸಹಾಯಕರಾಗುವಂತಾಯ್ತು.

ಇದು ನಿಮ್ಮದೇ ಆಸ್ತಿ ಅಂತಾ ಡಿವೈಎಸ್​ಪಿ ಪ್ರಶಾಂತ್ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದರು. ಆದ್ರೆ ಉದ್ರಿಕ್ತರು ಪೊಲೀಸ್ ಅಧಿಕಾರಿಯ ಮನವಿಗೆ ಕ್ಯಾರೆ ಅನ್ನಲಿಲ್ಲ. ಇದೀಗ ಕೈಮಗಿದು ಬೇಡಿಕೊಂಡಿದ್ದ ಡಿವೈಎಸ್​ಪಿ ಪ್ರಶಾಂತ್ ಅಮಾನತಾಗಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿ ಕೂಡ ಸಸ್ಪೆಂಡ್ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:22 pm, Sun, 26 May 24

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK