ಶಾಸಕ ಮುನಿರತ್ನ ವಿರುದ್ಧದ ಕೇಸ್​ಗಳ ತನಿಖೆಗೆ ಎಸ್​ಐಟಿ ರಚನೆ ಮಾಡಿದ ಸರ್ಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2024 | 6:36 PM

ನಿನ್ನೆ ಅದ್ಯಾವ ಜೈಲಿನಿಂದ ಶಾಸಕ ಮುನಿರತ್ನ ಹೊರಬಂದಿದ್ರೋ ಇವತ್ತು ಅದೇ ಜೈಲಿಗೆ ಮರಳಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕನನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇದರ ನಡುವೆ ಮುನಿರತ್ನ ವಿರುದ್ಧದ ಪ್ರಕರಣಗಳ‌ ತನಿಖೆಗೆ ಎಸ್​ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಾಸಕ ಮುನಿರತ್ನ ವಿರುದ್ಧದ ಕೇಸ್​ಗಳ ತನಿಖೆಗೆ ಎಸ್​ಐಟಿ ರಚನೆ ಮಾಡಿದ ಸರ್ಕಾರ
ಶಾಸಕ ಮುನಿರತ್ನ ವಿರುದ್ಧದ ಕೇಸ್​ಗಳ ತನಿಖೆಗೆ ಎಸ್​ಐಟಿ ರಚನೆ ಮಾಡಿದ ಸರ್ಕಾರ
Follow us on

ಬೆಂಗಳೂರು, ಸೆಪ್ಟೆಂಬರ್​ 21: ಬೆಂಗಳೂರಿನ ಆರ್​.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ಧದ ಪ್ರಕರಣಗಳ‌ ತನಿಖೆಗೆ ಬಿ.ಕೆ.‌ಸಿಂಗ್ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಾತಿ ನಿಂದನೆ, ಜೀವ ಬೆದರಿಕೆ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಶಾಸಕ ಮುನಿರತ್ನರನ್ನು ನಿನ್ನೆ ಮತ್ತೆ ಪೊಲೀಸರು ಅತ್ಯಾಚಾರ ಆರೋಪದಲ್ಲಿ ಬಂಧಿಸಿದ್ದರು.

ಶಾಸಕ ಮುನಿರತ್ನ ಜಾತಿ ನಿಂದನೆ ಕೇಸ್​ನಲ್ಲಿ ನಿಟ್ಟುಸಿರು ಬಿಟ್ಟಿದ್ದರು. ವಂಚನೆ ಪ್ರಕರಣದಲ್ಲೂ ಬಚಾವ್ ಆಗಿದ್ದರು. ಎರಡೆರಡು ಕೇಸ್​ಗಳಲ್ಲಿ ಜಾಮೀನು ಕೂಡ ಸಿಕ್ಕಿತ್ತು. ಇನ್ನೇನು ಹೊರಗೆ ಬರಬೇಕು ಎನ್ನುವಷ್ಟರಲ್ಲಿ ನಿನ್ನೆ ಅತ್ಯಾಚಾರ ಪ್ರಕರಣದ ಸುರುಳಿ ಸುತ್ತಿಕೊಂಡಿತ್ತು. ಇದೀಗ ಸಂತ್ರಸ್ತ್ರೆ ಕೊಟ್ಟ ದೂರು ಮುನಿರತ್ನರನ್ನ ಜೈಲಿಗಟ್ಟಿದೆ.

ಅತ್ಯಾಚಾರ ಕೇಸ್​ನಲ್ಲಿ ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ

ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮುನಿರತ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಹಾಜರಾಗುತ್ತಿದ್ದಂತೆ ಜಡ್ಜ್ ಅನೇಕ ಪ್ರಶ್ನೆ ಕೇಳಿದ್ದರು. ನಿಮ್ಮ ಹೆಸರು ಏನು, ಎಲ್ಲಿ ಬಂಧಿಸಿದರು ಅಂತಾ ಕೇಳಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ಮುನಿರತ್ನ ತಮ್ಮ ವಿವರವನ್ನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜೈಲು ಬಾಗಿಲಲ್ಲೇ ಬಂಧನ: ಠಾಣೆಯಲ್ಲೇ ಶಾಸಕ ಮುನಿರತ್ನಗೆ ಚಾಪೆ, ದಿಂಬು ವ್ಯವಸ್ಥೆ

ವಿಚಾರಣೆ ಬಳಿಕ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇನ್ನು ಪೊಲೀಸರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಆ ಮೂಲಕ ಎಲ್ಲಿಂದ ಹೊರಬಂದ್ರೋ ಮತ್ತೆ ಅಲ್ಲಿಗೆ ಮರಳಿದ್ದಾರೆ.

ರಾಜೀನಾಮೆ ಕೊಡೋದಾಗಿ ಅಳಲು ತೋಡಿಕೊಂಡ ಮುನಿರತ್ನ

ಇನ್ನು ಮುನಿರತ್ನ ಜಡ್ಜ್ ಮುಂದೆ ಅಳಲು ತೋಡಿಕೊಂಡಿದ್ದಾರೆ. 5 ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಿಸಿದ್ದಾರೆ. ನನ್ನನ್ನ 5 ವರ್ಷಗಳ ಕಾಲ ಜೈಲಿನಲ್ಲಿ ಇಡಲು ಪ್ಲ್ಯಾನ್​ ಮಾಡಿದ್ದಾರೆ. ನಾನು ಜನಪ್ರತಿನಿಧಿ. ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿದೆ ಅಂತಾ ಅಳಲು ತೋಡಿಕೊಂಡಿದ್ದಾರೆ. ಇಷ್ಟೆ ಅಲ್ಲದೇ, ನನಗೆ ಹಿಂಸೆ ತಡೆಯೋಕೆ ಆಗುತ್ತಿಲ್ಲ. ಬೇಕಾದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ನೀವು ಎಲ್ಲಿ ಕೊಡಬೇಕೋ ಅಲ್ಲಿ ರಾಜೀನಾಮೆ ಕೊಡಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:47 pm, Sat, 21 September 24