ಲಾಕ್​ಡೌನ್​ ಸಡಿಲಿಕೆ: ಸರ್ಕಾರದಿಂದ ಎಡವಟ್ಟುಗಳ ಮಾಲಿಕೆ

ಬೆಂಗಳೂರು: ಮಾರಕ ಕೊರೊನಾ ವೈರಸ್​ನಿಂದ ಭಾರತ ತತ್ತರಿಸಿ ಹೋಗಿದೆ. ದೇಶಕ್ಕೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮೂರನೇ ಹಂತದ ಲಾಕ್​ಡೌನ್​ ಸಡಿಲಿಕೆ ಮಾಡುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಆಹ್ವಾನ ನೀಡಿದಂತಾಗಿದೆ. ಸರ್ಕಾರದ ಎಡವಟ್ಟಿನಿಂದ ಕೊರೊನಾ ಆತಂಕ ಹೆಚ್ಚಾಗಿದೆ. ಎಡವಟ್ಟು 1: ಐಟಿ-ಬಿಟಿ ಕಂಪನಿಗಳಿಗೆ ಸಡಿಲಿಕೆ ನೀಡಿದ್ದು ಮೊದಲ ಎಡವಟ್ಟು. ಅದರಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಕೆಲಸ ಮಾಡಲು ಸೂಚನೆ ನೀಡಲಾಗಿತ್ತು ಆದರೆ ಕಂಪನಿಗಳಲ್ಲಿ ಶೇ.30 ರಷ್ಟೇ ಜನ ಕೆಲ್ಸ ಮಾಡ್ತಿದ್ದಾರೆ ಅನ್ನೋದನ್ನ ಧೃಡಪಡಿಸೋದ್ಯಾರು? ಶೇ.30 ಕ್ಕಿಂತ ಹೆಚ್ಚು ಸಿಬ್ಬಂದಿ […]

ಲಾಕ್​ಡೌನ್​ ಸಡಿಲಿಕೆ: ಸರ್ಕಾರದಿಂದ ಎಡವಟ್ಟುಗಳ ಮಾಲಿಕೆ
ಸಾಧು ಶ್ರೀನಾಥ್​

Updated on: May 06, 2020 | 11:30 AM

ಬೆಂಗಳೂರು: ಮಾರಕ ಕೊರೊನಾ ವೈರಸ್​ನಿಂದ ಭಾರತ ತತ್ತರಿಸಿ ಹೋಗಿದೆ. ದೇಶಕ್ಕೆ ದೊಡ್ಡ ಸಂಕಷ್ಟವೇ ಎದುರಾಗಿದೆ. ಮೂರನೇ ಹಂತದ ಲಾಕ್​ಡೌನ್​ ಸಡಿಲಿಕೆ ಮಾಡುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಆಹ್ವಾನ ನೀಡಿದಂತಾಗಿದೆ. ಸರ್ಕಾರದ ಎಡವಟ್ಟಿನಿಂದ ಕೊರೊನಾ ಆತಂಕ ಹೆಚ್ಚಾಗಿದೆ.

ಎಡವಟ್ಟು 1:
ಐಟಿ-ಬಿಟಿ ಕಂಪನಿಗಳಿಗೆ ಸಡಿಲಿಕೆ ನೀಡಿದ್ದು ಮೊದಲ ಎಡವಟ್ಟು. ಅದರಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಕೆಲಸ ಮಾಡಲು ಸೂಚನೆ ನೀಡಲಾಗಿತ್ತು ಆದರೆ ಕಂಪನಿಗಳಲ್ಲಿ ಶೇ.30 ರಷ್ಟೇ ಜನ ಕೆಲ್ಸ ಮಾಡ್ತಿದ್ದಾರೆ ಅನ್ನೋದನ್ನ ಧೃಡಪಡಿಸೋದ್ಯಾರು? ಶೇ.30 ಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸಕ್ಕೆ ಹಾಜರಾದರೆ ಸಾಮಾಜಿಕ ಅಂತರ ಕಾಪಾಡುವುದು ಕಠಿಣವಾಗುತ್ತೆ. ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕೊರೊನಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಐಟಿ, ಬಿಟಿ ಉದ್ಯೋಗಿಯಿಂದಲೇ ಮೊದಲ ಕೇಸ್​ ಪತ್ತೆಯಾಗಿತ್ತು. ಹಾಗಾಗಿ ಐಟಿ-ಬಿಟಿ ಕಂಪನಿಗಳ ಮೇಲೆ ಹೆಚ್ಚಿನ ನಿಗವಹಿಸಬೇಕಾಗಿದೆ.

ಎಡವಟ್ಟು 2:
ಬಟ್ಟೆ, ಚಿನ್ನದಂಗಡಿಗಳಿಗೆ ಗ್ರೀನ್ ಸಿಗ್ನಲ್ ನೀಡಿ ಸರ್ಕಾರ ಮತ್ತೊಮ್ಮೆ ಎಡವಟ್ಟು ಮಾಡಿದೆ. ಬಟ್ಟೆ, ಚಿನ್ನದ ಅಂಗಡಿಗಳಲ್ಲಿ ಅತಿ ಹೆಚ್ಚು ಜನ ಸೇರುತ್ತಾರೆ. ಒಬ್ಬರು ಮುಟ್ಟಿದ ವಸ್ತು ಮತ್ತೊಬ್ಬರು ಮುಟ್ಟುವ ಸಾಧ್ಯತೆ ಇರುತ್ತದೆ. ಇವುಗಳ ಮೇಲೆ ನಿಗಾ ಇಡಲು ಸಿಬ್ಬಂದಿಯೇ ಇಲ್ಲ.

ಎಡವಟ್ಟು 3:
ಕಾರ್ಮಿಕರನ್ನ ತಮ್ಮೂರಿಗೆ ಕಳುಹಿಸಿದ್ದು 3ನೇ ಎಡವಟ್ಟು. ಬೆಂಗಳೂರಿನಿಂದ ಹಳ್ಳಿ ಪ್ರದೇಶಕ್ಕೆ ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡ್ತಿದ್ದ ವ್ಯಕ್ತಿ, ಮನೆಯಲ್ಲೇ ಇದ್ದವರಿಗೂ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆ ಭೀತಿ ಹೆಚ್ಚಾಗಿದೆ. ಕೊರೊನಾ ಲಕ್ಷಣ ಕಂಡುಬರದೇ ಇದ್ದರು ವೈದ್ಯಕೀಯ ವರದಿ ಪಾಸಿಟಿವ್ ಬಂದಿರುವ ಪ್ರಕರಣಗಳನ್ನು ನೋಡುತ್ತಿದ್ದೇವೆ. ಇಂತಹ ಸಂದ್ರಭದಲ್ಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಿದರೆ ಅಲ್ಲಿಯೂ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ.

ಎಡವಟ್ಟು 4:
ಪಾಸ್ ಇಲ್ಲದವರಿಗೆ ಓಡಾಡಲು ಅವಕಾಶ ನೀಡಿ ಸರ್ಕಾರ ಎಡವಿದೆ. ಅಗತ್ಯ ಸೇವೆಯಲ್ಲಿದ್ದವರಿಗೆ ಮಾತ್ರ ಓಡಾಡಲು ಪಾಸ್ ನೀಡಲಾಗುತ್ತಿತ್ತು. ಆದರೆ ಈಗ ಎಲ್ಲರೂ ಓಡಾಡುವಂತಾಗಿ ಎಡವಟ್ಟಿಗೆ ನಾಂದಿ ಹಾಡಿದೆ. ಕಂಟೇನ್​ಮೆಂಟ್ ಜೋನ್​ನಲ್ಲಿ ಕದ್ದು ಮುಚ್ಚಿ ಜನ ಓಡಾಡ್ತಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಅತಿ ಹೆಚ್ಚಿದೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us