ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವ ಬದಲಾವಣೆ: ಸರ್ಕಾರದ ಹೊಸ ಪ್ಲ್ಯಾನ್ ಏನು?

| Updated By: ಗಂಗಾಧರ​ ಬ. ಸಾಬೋಜಿ

Updated on: Oct 21, 2024 | 5:43 PM

ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಇದೀಗ ಕೇಂದ್ರದಿಂದ ರಾಜ್ಯಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ವಿತರಿಸಿದರೆ, ರಾಜ್ಯ ಸರ್ಕಾರ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆಗೆ ಚಿಂತನೆ ನಡೆಸಿದೆ. ಆ ಮೂಲಕ ಆಹಾರ ಕಿಟ್​ ವಿತರಣೆಗೆ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಒಲವು ತೋರಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವ ಬದಲಾವಣೆ: ಸರ್ಕಾರದ ಹೊಸ ಪ್ಲ್ಯಾನ್ ಏನು?
ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವ ಬದಲಾವಣೆ: ಸರ್ಕಾರ ಹೊಸ ಪ್ಲ್ಯಾನ್ ಏನು?
Follow us on

ಬೆಂಗಳೂರು, ಅಕ್ಟೋಬರ್​ 21: ಅನ್ನಭಾಗ್ಯ ಯೋಜನೆಯ (Anna Bhagya Scheme) ಫಲಾನುಭವಿಗಳಿಗೆ ಡಿಬಿಟಿ ಬದಲಿಗೆ ಎಣ್ಣೆ, ಬೆಳೆಯನ್ನೊಳಗೊಂಡ ಆಹಾರ ಕಿಟ್ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಆಹಾರ ಕಿಟ್ ವಿತರಣೆ ಬಗ್ಗೆ ಅ.28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಮೂಲಕ ಡಿಬಿಟಿ ಬದಲಿಗೆ ಆಹಾರ ಕಿಟ್ ವಿತರಣೆ ಬಗ್ಗೆ ಸಚಿವ ಕೆ.ಹೆಚ್.ಮುನಿಯಪ್ಪ ಒಲವು ತೋರಿಸಿದ್ದಾರೆ.

ಆಹಾರ ಕಿಟ್ ವಿತರಣೆ ಬಗ್ಗೆ ಕೆ.ಹೆಚ್.ಮುನಿಯಪ್ಪ ಒಲವು 

ಕೇಂದ್ರ ಅಕ್ಕಿ ವಿತರಣೆಗೆ ಮುಂದಾದರೂ ಖರೀದಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಸದ್ಯ ಕೇಂದ್ರದಿಂದ ರಾಜ್ಯಕ್ಕೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಮತ್ತೆ 5 ಕೆಜಿ‌ ಸೇರಿಸಿ ಒಟ್ಟು 10 ಕೆ.ಜಿ ವಿತರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ವಿತರಿಸಿದರೆ, ರಾಜ್ಯ ಸರ್ಕಾರ ಆಹಾರ ಕಿಟ್ ವಿತರಣೆಗೆ ಚಿಂತನೆ ನಡೆಸಿದೆ. ಇನ್ನು ಆಹಾರ ಕಿಟ್ ವಿತರಣೆ ಕುರಿತು ಸಚಿವ ಕೆ.ಹೆಚ್.ಮುನಿಯಪ್ಪ ಹೆಚ್ಚು ಒಲವು ಹೊಂದಿದ್ದು, ರೇಷನ್​ ಕಾರ್ಡ್​ಗಳ ಪರಿಷ್ಕರಣೆ ಮುಗಿದ ಬಳಿಕವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಡಿಬಿಟಿ ಹಣ ಬಿಡುಗಡೆ ಬಗ್ಗೆ ಗುಡ್​ನ್ಯೂಸ್ ಕೊಟ್ಟ ಸಚಿವ ಮುನಿಯಪ್ಪ

ಅಕ್ಕಿ ಹಣ ನೀಡುವುದನ್ನು ನಿಲ್ಲಿಸಿ ಫುಡ್‌ ಕಿಟ್‌ ಕೊಡುವ ಬಗ್ಗೆ ಸರ್ಕಾರ ಈ ಹಿಂದೆ ಕೂಡ ಚಿಂತನೆ ಮಾಡಿತ್ತು. ಆದರೆ ಅನ್ನ ಭಾಗ್ಯ ಯೋಜನೆ ಸುಸೂತ್ರವಾಗಿ ಮುಂದುವರೆ ಹಿನ್ನೆಲೆ ಫುಡ್‌ ಕಿಟ್‌ ಕೊಡುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿತ್ತು.

50 ಲಕ್ಷ ರೂ. ವೆಚ್ಚದಲ್ಲಿ ಆಹಾರಸೌಧದ ಕಟ್ಟಡ ನಿರ್ಮಾಣ: ಸಚಿವ ಕೆ.ಹೆಚ್​.ಮುನಿಯಪ್ಪ

ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ, ಕೇಂದ್ರ ಆಹಾರ ಸಚಿವ ಪ್ರಲ್ಹಾದ್​ ಜೋಶಿ ಭೇಟಿಯಾಗಿದ್ದೇನೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡಲು ಈಗ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಆದಷ್ಟು ಬೇಗ ಸಿಗಲಿದೆ ಅನ್ನಭಾಗ್ಯ ಯೋಜನೆಯ ಅಕ್ಕಿ: ಸಚಿವ ಮುನಿಯಪ್ಪ ಹೇಳಿದ್ದಿಷ್ಟು

ಡಿಬಿಟಿ ಮೂಲಕ ಪ್ರತಿಯೊಬ್ಬರಿಗೆ 170 ರೂ. ಕೊಡುತ್ತಿದ್ದೇವೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಬಾಕಿ‌ ಇದೆ. ಶೀಘ್ರವೇ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ. ಸರ್ವರ್‌ ಸಮಸ್ಯೆ ಇತ್ತು, ಇಂದಿನಿಂದ ಸರ್ವರ್ ಸಮಸ್ಯೆ ಇರಲ್ಲ. ಅಕ್ಟೋಬರ್​ ತಿಂಗಳ ಕೊನೆಯಲ್ಲಿ ಆಹಾರ ಮೇಳ ಮಾಡುತ್ತೇವೆ. 50 ಲಕ್ಷ ರೂ. ವೆಚ್ಚದಲ್ಲಿ ಆಹಾರಸೌಧದ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:42 pm, Mon, 21 October 24