ಗದಗ: ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಜಾರಿಯಾದ ಕಾರಣ ಬಸ್ಗಳ ಓಡಾಡ ಸಂಪೂರ್ಣವಾಗಿ ನಿಂತಿದೆ. ಹೀಗಾಗಿ ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಅಜ್ಜಿಯೊಬ್ಬರು ಪರದಾಟ ಪಟ್ಟಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಬರುವಂತೆ ವೃದ್ಧೆಗೆ ತಿಳಿಸಿದ್ದರು. ಹೀಗಾಗಿ ಅಜ್ಜಿ ಅಂಚೆ ಕಚೇರಿಗೆ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಪೊಲೀಸರು ಅಜ್ಜಿಯನ್ನು ತಡೆದು ಪ್ರಶ್ನೆ ಮಾಡಿದ್ದಾರೆ.
ವೃದ್ಧಾಪ್ಯ ವೇತನ ಪಡೆಯಲು ಎರಡು ಕಿಲೋಮೀಟರ್ ನಡೆದುಕೊಂಡ ಬಂದ ಭಜಂತ್ರಿ ನಗರದ ನಿವಾಸಿ ಯಲ್ಲವ್ವ ಭಜಂತ್ರಿ ಎಂಬ ಅಜ್ಜಿಯನ್ನು ಗದಗದ ಹಳೆಯ ಡಿಸಿ ಕಚೇರಿ ಬಳಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸರಿಯಾಗಿ ಕಿವಿ ಕೆಳದ ಹಿನ್ನಲೆಯಲ್ಲಿ ಅಜ್ಜಿ ಪರದಾಟ ಪಟ್ಟಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಬಂದಿದ್ದೇನೆ ಎಂದು ತಿಳಿಸಿದ ಅಜ್ಜಿಗೆ ಲಾಕ್ಡೌನ್ ಹಿನ್ನೆಲೆ ಅಂಚೆ ಕಚೇರಿ ಕ್ಲೋಸ್ ಆಗಿದೆ ಎಂದು ಪೊಲೀಸರು ವಾಪಸ್ ಊರಿಗೆ ಹೋಗುವಂತೆ ತಿಳಿಸಿದ್ದಾರೆ. ವೇತನ ಪಡೆಯದೆ ಅಜ್ಜಿ ಊರಿಗೆ ವಾಪಾಸಾಗಿದ್ದಾರೆ.
ಕಠಿಣ ಲಾಕ್ಡೌನ್ ನಡುವೆಯೂ ತಂದೆ ಬರ್ತಡೇಗೆ ತಯಾರಿ
ಲಾಕ್ಡೌನ್ ನಡುವೆ ತಂದೆಯ ಹುಟ್ಟು ಹಬ್ಬವನ್ನು ಆಚರಿಸಲು ಕೇಕ್ ತರಲು ಹೋಗಿದ್ದ ಮಗ ಪೋಲಿಸರ ಕೈಗೆ ತಗ್ಲಾಕಿಕೊಂಡಿದ್ದಾನೆ. ಗದಗ ಹಳೆ ಡಿಸಿ ಆಫೀಸ್ ಸರ್ಕಲ್ನಲ್ಲಿ ಈ ಘಟನೆ ನಡೆದಿದೆ. ಕೇಕ್ ತರಲು ಬಂದಾಗ ಪೊಲೀಸರು ಆತನ ಬೈಕ್ನ ಸೀಜ್ ಮಾಡಿದರು. ತಪ್ಪಾಗಿದೆ ಸರ್, ಕೈ ಮುಗಿತಿನಿ ದಯವಿಟ್ಟು ಬಿಡಿ ಅಂತ ಯುವಕ ಬೇಡಿಕೊಂಡ. ಆದರೆ ಪೊಲೀಸರು ಬೈಕ್ನ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ
ಕೊರೊನಾ ಲಸಿಕೆ ಪಡೆದವರಿಗಷ್ಟೇ ಮದ್ಯ; ಸರ್ಟಿಫಿಕೇಟ್ ತೋರಿಸುವುದು ಕಡ್ಡಾಯ ಎಂದ ಬಾರ್ ಮಾಲೀಕರು!
(Grandma was walking two kilometers to the post office to get an Older wages in gadag)