ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಕುಸಿದ ದ್ರಾಕ್ಷಿ ಬೆಲೆ: ಕಂಗಲಾದ ಚಿಕ್ಕಬಳ್ಳಾಪುರ ಬೆಳೆಗಾರರು
ಚಿಕ್ಕಬಳ್ಳಾಫುರ ಜಿಲ್ಲೆಯ ರೈತರು ವಿನೂತನ ಮಾದರಿಯಲ್ಲಿ ಹನಿ ನೀರಾವರಿಯನ್ನೆ ನಂಬಿಕೊಂಡು ಜಿಲ್ಲೆಯಾದ್ಯಂತ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆದರೆ ಈ ಭಾರಿ ಉತ್ತಮ ದ್ರಾಕ್ಷಿ ಫಸಲು ಬಂದಿದೆ. ಇನ್ನೇನು ದ್ರಾಕ್ಷಿ ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು. ಆದರೆ ಪಸ್ತುತ ದ್ರಾಕ್ಷಿ ಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ. ಹೀಗಾಗಿ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರ, ಮೇ 15: ಆ ಜಿಲ್ಲೆಯ ರೈತರು (Farmers) ಸಿಲ್ಕ್, ಮಿಲ್ಕ್, ತರಕಾರಿ, ಹಣ್ಣು ಹಂಪಲ ಸೇರಿದಂತೆ ದ್ರಾಕ್ಷಿ (Grapes) ಬೆಳೆಯನ್ನೆ ನಂಬಿಕೊಂಡು ಜೀವನ ಸಾಗಿಸ್ತಾರೆ. ಇನ್ನೂ ಆ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ ಈ ಭಾರಿ ಉತ್ತಮ ಫಸಲು ಬಂದಿದೆ. ಇನ್ನೇನು ಕಟಾವು ಮಾಡಿ ಮಾರ್ಕೆಟ್ಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ದ್ರಾಕ್ಷಿ ಬೆಲೆ ಕುಸಿದಿದೆ. ಇದ್ರಿಂದ ಕಂಗಲಾಗಿರುವ ರೈತರು ಮಾಡಿದ ಬೆಳೆ ಸಾಲ ತೀರಿಸೋದು ಹೇಗೆ ಅನ್ನೊ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೈ ಕೆಸರಾದ್ರೆ ಬಾಯಿ ಮೊಸರು ಅನ್ನೊ ಹಾಗೆ.. ಪಾತಾಳದಿಂದ ಹನಿ ಹನಿ ನೀರು ಬಸಿದು ಚಿಕ್ಕಬಳ್ಳಾಫುರ ಜಿಲ್ಲೆಯ ರೈತರು ವಿನೂತನ ಮಾದರಿಯಲ್ಲಿ ಹನಿ ನೀರಾವರಿಯನ್ನೆ ನಂಬಿಕೊಂಡು ಜಿಲ್ಲೆಯಾದ್ಯಂತ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆದರೆ ಈ ಭಾರಿ ಉತ್ತಮ ದ್ರಾಕ್ಷಿ ಫಸಲು ಬಂದಿದೆ. ಇನ್ನೇನು ದ್ರಾಕ್ಷಿ ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು. ಆದರೆ ಪಸ್ತುತ ದ್ರಾಕ್ಷಿ ಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ.
ಇದನ್ನೂ ಓದಿ: ರಣ ಬಿಸಿಲಿನಿಂದ ಬಳ್ಳಿಯಲ್ಲೇ ಬಾಡ್ತಿದೆ ದ್ರಾಕ್ಷಿ; ವಾಟರ್ ಸ್ಪ್ರೇ ಮಾಡುವ ಮೂಲಕ ರಕ್ಷಣೆಗೆ ಮುಂದಾದ ರೈತ
ಕೆ.ಜಿ ದಿಲ್ ಖುಷ್ ದ್ರಾಕ್ಷಿಯ ಬೆಲೆ ಕೇವಲ 25 ರೂ. ಮಾತ್ರ ಮಾರಾಟವಾಗ್ತಿದೆ. ಹೋದರೆ ಹೊಗಲಿ ಕಟಾವು ಮಾಡಿ ಅಂದ್ರು ವರ್ತಕರು ದೈರ್ಯ ಮಾಡ್ತಿಲ್ಲ, ಕಾರಣ ಮಹಾರಾಷ್ಟ್ರ ದ್ರಾಕ್ಷಿ ಭೀತಿ, ಅಷ್ಟಕ್ಕೂ ಮಹಾರಾಷ್ಟ್ರಕ್ಕೂ ಚಿಕ್ಕಬಳ್ಳಾಪುರದ ದ್ರಾಕ್ಷಿಗೂ ಅದೇನು ಎಣ್ಣೆ ಸೀಗೆಕಾಯಿ ಅಂತೀರಾ ಕೇಳಿ.
ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದ ರೈತ ಗಿರೀಶ ಎನ್ನುವವರು ಲಕ್ಷಾಂತರ ರೂ. ಸಾಲ-ಸೂಲ ಮಾಡಿ ಒಂದುವರೆ ಎಕರೆ ದಿಲ್ ಖುಷ್ ದ್ರಾಕ್ಷಿ ಬೆಳೆದಿದ್ದಾರೆ. ಇನ್ನೇನು ಫಸಲು ಕಟಾವು ಮಾಡಬೇಕು ಆದರೆ ಯಾವುದೇ ವರ್ತಕರು ಮುಂದೆ ಬರ್ತಿಲ್ಲ. ಹೀಗಾಗಿ ದ್ರಾಕ್ಷಿ ತೋಟದಲ್ಲಿ ಕೊಳೆಯುತ್ತಿದೆ.
ಇದನ್ನೂ ಓದಿ: ಸಂತಾನಕ್ಕಾಗಿ ವಿದೇಶದಿಂದ ಬರುವ ವಿಶೇಷ ಅತಿಥಿಗಳು! ಬರುವಾಗ ಸಿಂಗಲ್ ಸಿಂಗಲ್ ಹೋಗುವಾಗ ಡಬಲ್ ಡಬಲ್!!
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಾಗಿ ದ್ರಾಕ್ಷಿ ಬೆಳೆದಿದ್ದು, ಅಲ್ಲಿನ ಕೋಲ್ಡ್ ಸ್ಟೋರೇಜ್ನಲ್ಲಿದ್ದ ದ್ರಾಕ್ಷಿ ಮಾರುಕಟ್ಟೆಗೆ ಬಂದಿದೆ. ಇದ್ರಿಂದ ಚಿಕ್ಕಬಳ್ಳಾಪುರದ ದ್ರಾಕ್ಷಿಗೆ ಬೆಲೆಯಿಲ್ಲದಂತಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಹಣ ಸಾಗಾಟ ಕಷ್ಟ ಅಂತ ವರ್ತಕರು ದ್ರಾಕ್ಷಿ ವ್ಯಾಪಾರದಿಂದ ವಿಮುಖರಾಗಿದ್ದಾರೆ. ಇದ್ರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೊಡ್ಡ ದೊಡ್ಡ ದ್ರಾಕ್ಷಿ ವ್ಯಾಪಾರಿಗಳ ಉದ್ದಟತನವೊ, ಇಲ್ಲಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯೋ, ಇಲ್ಲಾ ಮಹಾರಾಷ್ಟ್ರದ ದ್ರಾಕ್ಷಿ ಪರಿಣಾಮವೊ ಚಿಕ್ಕಬಳ್ಳಾಪುರದ ಚಿನ್ನದಂಥ ದ್ರಾಕ್ಷಿಗೆ ಬೆಲೆ ಇಳಿಕೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.