ದುಬೈನಲ್ಲಿ ಮಿಂಚಿದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ

| Updated By: ganapathi bhat

Updated on: Oct 23, 2021 | 2:57 PM

ಪ್ರದರ್ಶಿಸಲಾದ ಶ್ರೀಗಂದದ ಕೆತ್ತನೆ, ಚನ್ನಪಟ್ಟಣದ ಆಟಿಕೆಗಳು ಸೇರಿದಂತೆ ಅನೇಕ ವಸ್ತುಗಳ ಪ್ರದಶರ್ನಕ್ಕೆ ದೇಶ ವಿದೇಶಗಳ ಅನೇಕ ಪ್ರವಾಸಿಗರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಅನೇಕರು ಕಾವೇರಿ ಬ್ರಾಂಡ್ ಅನ್ನು ಬೇರೆಡೆ ತೆರೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲಿ ಮಿಂಚಿದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ
Follow us on

ಬೆಂಗಳೂರು: ದುಬೈನಲ್ಲಿ ನಡೆದ ದುಬೈ ಎಕ್ಸ್ ಪೋನಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, Dubai Expoದಲ್ಲಿ ನಿಗಮದಿಂದ ಮಳಿಗೆಯನ್ನು ತೆರೆಯಲಾಗಿತ್ತು. ಅಲ್ಲಿ ಪ್ರದರ್ಶಿಸಲಾದ ಶ್ರೀಗಂದದ ಕೆತ್ತನೆ, ಚನ್ನಪಟ್ಟಣದ ಆಟಿಕೆಗಳು ಸೇರಿದಂತೆ ಅನೇಕ ವಸ್ತುಗಳ ಪ್ರದಶರ್ನಕ್ಕೆ ದೇಶ ವಿದೇಶಗಳ ಅನೇಕ ಪ್ರವಾಸಿಗರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಅನೇಕರು ಕಾವೇರಿ ಬ್ರಾಂಡ್ ಅನ್ನು ಬೇರೆಡೆ ತೆರೆಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಹಲವಾರು ಮಂದಿ ಪ್ರಾಂಚೈಸಿಗಳನ್ನು ತೆಗೆದು ಕೊಳ್ಳಲು ಉತ್ಸುಕರಾಗಿರುವುದು ನಿಜಕ್ಕೂ ಹರ್ಷದ ವಿಚಾರ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಹೊರ ರಾಜ್ಯಗಳಲ್ಲಿ ನಿಗಮದ ವಹಿವಾಟುಗಳನ್ನು ನಡೆಸಲು ಅವಕಾಶ ದೊರಕಿದಂತಾಗಿದೆ. ಇಂತಹ ಅವಕಾಶಕ್ಕೆ ದುಬೈ ಎಕ್ಸ್ ಪೋ ಕಾರಣವಾಗಿದ್ದು ಇದರಲ್ಲಿ ಭಾಗವಹಿಸಲು ನಮಗೆ ಅವಕಾಶ ನೀಡಿದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ

ಹೂಡಿಕೆದಾರರ ಆಕರ್ಷಣೆಗೆ ಸಜ್ಜು
ದುಬೈ ಎಕ್ಸ್ ಪೋ ನಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ ಒಂದು ವಾರದ ಕಾಲ ತನ್ನ ಪ್ರದರ್ಶನ-ಮಾರಾಟ ವ್ಯವಸ್ಥೆಗೊಳಿಸಿತ್ತು. ಈ ಸಂದರ್ಭದಲ್ಲಿ ದುಬೈ, ಯುಎಇಯ Expo 2020 ನಲ್ಲಿ ಭಾಗವಹಿಸುವ 192 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳಿಗೆ ತನ್ನ ಶ್ರೀಮಂತ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ ವ್ಯಾಪಾರ ಮತ್ತು ಹೂಡಿಕೆ ಸಾಮರ್ಥ್ಯವನ್ನು ಪ್ರದರ್ಶಿಸಿತು. 2020 ರ ನವೆಂಬರ್ ನಲ್ಲಿ ಜಾಗತಿಕ ಹೂಡಿಕೆದಾರರ ಸಭೆ (ಜಿಐಎಂ) ಘೋಷಿಸಲಾಗಿದ್ದು ಅದರಲ್ಲಿ ಕರ್ನಾಟಕದ ಪ್ರಾತಿನಿಧ್ಯ ರಾಜ್ಯದಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟಿಗೆ ಕಾರಣವಾಗಬಹುದು. ಅದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆದಾರರನ್ನು ಆಕರ್ಷಿಸಬಹುದು ಎಂದು ಡಿ ರೂಪ ಮೌದ್ಗಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Yash: ದುಬೈನಲ್ಲಿ ಮಿಂಚುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ ದಂಪತಿ; ಏನು ವಿಶೇಷ?

ಇದನ್ನೂ ಓದಿ: Dubai Expo 2020: ವೈವಿಧ್ಯಮಯ ಭಾರತದಲ್ಲಿದೆ ಅಗಣಿತ ಅವಕಾಶ: ದುಬೈ ಎಕ್ಸ್​ಪೊಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Published On - 2:56 pm, Sat, 23 October 21