ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಕನ್ನಡಿಗರು ಟಿವಿ9 ಕನ್ನಡ ವಾಹಿನಿಗೆ ಬದುಕು ಪಾವನವಾಯಿತು ಎಂದರು!
ಕನ್ನಡಿಗರ ಗುಂಪಿನಲ್ಲಿ ಶಿವಮೊಗ್ಗದಿಂದ ಬಂದಿರುವ ಚಂದ್ರಶೇಖರ್ ಮತ್ತು ದೇವರಾಜ್ ಹೆಸರಿನ ಇಬ್ಬರು ಭಕ್ತರಿದ್ದಾರೆ, ಇವರ ವಿಶೇಷತೆ ಎಂದರೆ ಮಲ್ನಾಡು ಶಿವಮೊಗ್ಗದಿಂದ ಪ್ರಯಾಗ್ರಾಜ್ ವರೆಗೆ ಬೈಕ್ನಲ್ಲಿ ಹೋಗಿದ್ದು! ಕುಂಭಮೇಳಕ್ಕೆ ಬಂದು ತಮ್ಮ ಬದುಕು ಪಾವನವಾಯಿತು, ಸಾರ್ಥಕವಾಯಿತು ಎಂದು ಟಿವಿ9ನೊಂದಿಗೆ ಮಾತಾಡಿರುವ ಎಲ್ಲ ಕನ್ನಡಿಗರು ಹೇಳುತ್ತಾರೆ. ಜೈ ಶ್ರೀರಾಮ್ ಮತ್ತು ಹರ್ ಹರ್ ಮಹಾದೇವ ಘೋಷಣೆಗಳನ್ನೂ ಅವರಿಂದ ಕೇಳಬಹುದು.
ಪ್ರಯಾಗ್ರಾಜ್ (ಉತ್ತರ ಪ್ರದೇಶ), ಫೆ. 26: ನಾವು ಬೆಳಗ್ಗೆಯಿಂದ ವರದಿ ಮಾಡುತ್ತಿರುವ ಹಾಗೆ ಮಹಾಕುಂಭಮೇಳದಲ್ಲಿ ಕೊನೆಯ ದಿನವಾಗಿದ್ದ ಇಂದು ಬಹಳಷ್ಟು ಕನ್ನಡಿಗರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ (holy dip) ಮಾಡಿದರು. ಅವರಿಗೆ ನಮ್ಮ ಪ್ರತಿನಿಧಿ ಮತ್ತು ಕೆಮೆರಾಮನ್ ಸಿಕ್ಕಿದ್ದು ಕಾಕತಾಳೀಯವೇ ಆಗಿರಬಹುದು. ಇವರೆಲ್ಲ ಬೇರೆ ಬೇರೆ ಊರುಗಳಿಂದ ಬಂದವರು. ಎಲ್ಲರಿಗೂ ಮಹಾಶಿವರಾತ್ರಿಯಂದು ತ್ರಿವೇಣಿ ಸಂಗಮದಲ್ಲಿ ಮಾಘಸ್ನಾನ ಮಾಡಿದ್ದು ಮತ್ತು ಟಿವಿ9 ತಂಡ ಸಿಕ್ಕಿದ್ದು ಬಹಳ ಸಂತಸ ನೀಡಿದೆ. ಶಿವಮೊಗ್ಗದ ಭಕ್ತರೊಬ್ಬರು, ಮಹಾಕುಂಭಮೇಳವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತ್ರಿವೇಣಿ ಸಂಗಮದ ಮೇಲೆ ಪ್ರತಿ 20 ನಿಮಿಷಕ್ಕೊಮ್ಮೆ ಹೆಲಿಕಾಪ್ಟರ್ ಯಾಕೆ ಹಾರಾಡುತ್ತದೆ ಗೊತ್ತಾ? ವಿಡಿಯೋ ನೋಡಿ