AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST ದರ ಕಡಿತದಿಂದ ರಾಜ್ಯಗಳ ಆದಾಯಕ್ಕೆ ಹೊಡೆತ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

ಕೇಂದ್ರ ಜಿಎಸ್​ಟಿ ದರ ಕಡಿತದಿಂದ ಜನಾಸಾಮಾನ್ಯರಿಗೆ ರಿಲೀಫ್ ನೀಡಿದೆ. ಆದರೆ ಇದು ರಾಜ್ಯಗಳಿಗೆ ಬಿಗ್ ಶಾಕ್ ಉಂಟು ಮಾಡಿದೆ. ಕರ್ನಾಟಕ ರಾಜ್ಯದ ಜಿಎಸ್​ಟಿ ಸಂಗ್ರಹಣೆಯೂ ಕುಸಿದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಸೆಸ್‌ನಿಂದ ಸಂಗ್ರಹವಾಗುವ ಆದಾಯದ ಅರ್ಧದಷ್ಟು ಭಾಗವನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

GST ದರ ಕಡಿತದಿಂದ ರಾಜ್ಯಗಳ ಆದಾಯಕ್ಕೆ ಹೊಡೆತ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ
ಹರೀಶ್ ಜಿ.ಆರ್​.
| Edited By: |

Updated on:Dec 05, 2025 | 10:36 PM

Share

ಬೆಂಗಳೂರು, ಡಿಸೆಂಬರ್​ 05: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಪರಿಷ್ಕರಣೆ ಮಾಡಿರುವುದರಿಂದ ರಾಜ್ಯಗಳಿಗೆ ನಷ್ಟವಾಗಲಿದೆ ಎಂದು ಕರ್ನಾಟಕ ಸೇರಿದಂತೆ 8 ರಾಜ್ಯ ಸರ್ಕಾರಗಳು ಕಳವಳ ವ್ಯಕ್ತಪಡಿಸಿದ್ದವು. ಈ ಹಿಂದೆಯೇ ಸಿಎಂ ಸಿದ್ದರಾಮಯ್ಯ (Siddaramaiah), ಜಿಎಸ್​​ಟಿ ಪರಿಷ್ಕರಣೆಯಿಂದಾಗಿ ರಾಜ್ಯಕ್ಕೆ 18,500 ಕೋಟಿ ರೂ, ನಷ್ಟವಾಗಲಿದೆ ಎಂದು ಹೇಳಿದ್ದರು. ಈ ಮೂಲಕ ಜಿಎಸ್​​ಟಿ ಇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ, ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆದಿದ್ದು, ಸೆಸ್‌ನಿಂದ ಸಂಗ್ರಹವಾಗುವ ಆದಾಯದ ಅರ್ಧದಷ್ಟು ಭಾಗವನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಜಿಎಸ್​​ಟಿ ದರ ಸರಳೀಕರಣದಿಂದ ರಾಜ್ಯಗಳ ಆದಾಯಕ್ಕೆ ನಷ್ಟ ಉಂಟಾಗಿದೆ. GST ಕೌನ್ಸಿಲ್ ಸಭೆಯಲ್ಲಿ ನಾಗರಿಕರ ಹೊರೆ ಕಡಿಮೆ ಮಾಡಲು ರಾಜ್ಯಗಳು ಬೆಂಬಲ ಸೂಚಿಸಿವೆ. ಆದರೆ, ದೇಶದ GST ಸಂಗ್ರಹದಲ್ಲಿ ಭಾರಿ ಕುಸಿತ ಕಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​

ನ.2025-26ರಲ್ಲಿ GST ಸಂಗ್ರಹದಲ್ಲಿ 2% ಕುಸಿತ ದಾಖಲಾಗಿದೆ. ಕಳೆದ ವರ್ಷ ನವೆಂಬರ್ 2024ರಲ್ಲಿ GST 9.3% ಬೆಳವಣಿಗೆ ಆಗಿತ್ತು. ನಿವ್ವಳ ದೇಶೀಯ GST ಬೆಳವಣಿಗೆ ದರ ಇಳಿಕೆಯಾಗಿದೆ. ದರ ಸರಳೀಕರಣ ಬಳಿಕ 3 ತಿಂಗಳಲ್ಲಿ 1.7% ಮಾತ್ರ ಬೆಳವಣಿಗೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.9% ಬೆಳವಣಿಗೆ ಇತ್ತು. ಇದರಿಂದ ಕರ್ನಾಟಕದ ಬೊಕ್ಕಸಕ್ಕೆ 18,500 ಕೋಟಿ ರೂ ನಷ್ಟವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆಯ ಲಾಭ ನಷ್ಟದ ಲೆಕ್ಕಾಚಾರ: ರಾಜ್ಯಗಳಿಗೆ ನಿಜಕ್ಕೂ ಭಾರಿ ನಷ್ಟವೇ? ಕೇಂದ್ರ ಸರ್ಕಾರ, ತಜ್ಞರು ಹೇಳಿದ್ದಿಷ್ಟು

ಕರ್ನಾಟಕ ರಾಜ್ಯದ ಜಿಎಸ್​ಟಿ ಸಂಗ್ರಹಣೆಯೂ ಕುಸಿದಿದೆ. ರಾಜ್ಯದ ನಿವ್ವಳ GST ಸಂಗ್ರಹಣೆಯಲ್ಲಿ 3.1% ಬೆಳವಣಿಗೆ ಹೊಂದಿದ್ದು, ರಾಜ್ಯದ ಬೊಕ್ಕಸಕ್ಕೆ 18,500 ಕೋಟಿ ರೂ. ನಷ್ಟದ ಭೀತಿ ಎದುರಾಗಿದೆ. ಈ ವರ್ಷ 9,000 ಕೋಟಿಗಳ ಆದಾಯ ಕೊರತೆ ಸಾಧ್ಯತೆ ಇದೆ. ವಿಲೀನಗೊಳಿಸದಿರುವಿಕೆಯಿಂದ 9,500 ಕೋಟಿ ರೂ. ನಷ್ಟವಾಗಲಿದೆ. ಈ ನಷ್ಟವನ್ನು ಕೇಂದ್ರವು ರಾಜ್ಯಗಳಿಗೆ ಸರಿದೂಗಿಸಬೇಕು. ಪಾನ್ ಮಸಾಲಾ ಸೆಸ್ ಆದಾಯವನ್ನು 50:50 ಆಧಾರದ ಮೇಲೆ ರಾಜ್ಯಗಳೊಂದಿಗೆ ಹಂಚಿಕೆಗೆ ಪರಿಗಣಿಸಬೇಕೆಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 pm, Fri, 5 December 25