Hasanamba: ಹಾಸನಾಂಬೆ ದರ್ಶನದ ಕೊನೆಯ ದಿನ; ಹರಿದು ಬರುತ್ತಿರುವ ಭಕ್ತ ಸಾಗರ

ಹಾಸನಾಂಬೆ ದೇವಿಯ ದರ್ಶನ ಪಡೆಯಲು ಇಂದು ಕೊನೆಯ ದಿನವಾಗಿದ್ದು, ನಾಳೆ ಮಧ್ಯಾಹ್ನ 12ಕ್ಕೆ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಾಗುತ್ತದೆ.

Hasanamba: ಹಾಸನಾಂಬೆ ದರ್ಶನದ ಕೊನೆಯ ದಿನ; ಹರಿದು ಬರುತ್ತಿರುವ ಭಕ್ತ ಸಾಗರ
ಹಾಸನಾಂಬೆ ದರ್ಶನದ ಕೊನೆಯ ದಿನವಾದ ಇಂದು ಹರಿದು ಬರುತ್ತಿರುವ ಭಕ್ತ ಸಾಗರ
Follow us
TV9 Web
| Updated By: Rakesh Nayak Manchi

Updated on:Oct 26, 2022 | 8:01 AM

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಜಿಲ್ಲೆಯ ಹಾಸನಾಂಬೆ ದೇವಾಯಲಯದ ದೇವಿಯ ದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ. ಇಂದು ಸಂಜೆ 4 ಗಂಟೆಯವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಬಳಿಕ ಅವಕಾಶ ಇರುವುದಿಲ್ಲ. ಮತ್ತೆ ಒಂದು ವರ್ಷ ದೇವಿಯ ದರ್ಶನಕ್ಕೆ ಭಕ್ತರು ಕಾಯಬೇಕಾಗುತ್ತದೆ. ಇಂದು ಸಂಜೆವರೆಗೆ ದರ್ಶನ ಭಾಗ್ಯ ಸಿಗಲಿದ್ದು, ರಾತ್ರಿ ಉತ್ಸವ ನಡೆಯಲಿದೆ. ಬಳಿಕ ಮತ್ತೆ ದೇವಿಯ ದರ್ಶನಕ್ಕೆ ಅವಕಾಶ ಇರಲಿದ್ದು, ನಾಳೆ ಬೆಳಗ್ಗೆವರೆಗೆ ಅವಕಾಶ ಕಲ್ಪಿಸಲಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಜಿಲ್ಲಾಡಳಿತವು ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಿದೆ.

ಹಾಸನಾಂಬೆ ಸಾರ್ವಜನಿಕರ ದರ್ಶನಕ್ಕೆ ಇಂದು 12ನೇ ದಿನದ ಸಾರ್ವಜನಿಕ ದರ್ಶನ ಹಾಗೂ ದೇವಿಯ ದರ್ಶನದ ಕಡೆಯ ದಿನವಾಗಿರುವುದರಿಂದ ಭಕ್ತರ ಸಾಗರ ಹರಿದು ಬರುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಬೇಗನೇ ಬಂದು ಸರಥಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಶ್ರೀದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ನಿನ್ನೆ ಸೂರ್ಯ ಗ್ರಹಣ ಹಿನ್ನೆಲೆ ದೇವಲಾಯದ ಬಾಗಿಲು ಮುಚ್ಚಿತ್ತು. ಇಂದು ಮತ್ತೆ ದರ್ಶನ ಆರಂಭವಾದ ಹಿನ್ನೆಲೆ ದೀಪಾವಳಿ ಸಂಭ್ರಮದ ನಡುವೆ ಶಕ್ತಿ ದೇವತೆ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಂದು ಸಂಜೆ 4 ಗಂಟೆಯವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಬಳಿಕ ರಾತ್ರಿ 10 ಗಂಟೆಯವರೆಗೆ ನೈವೇದ್ಯ ಹಾಗೂ ಉತ್ಸವ ನೆರವೇರಲಿದೆ. 10 ಗಂಟೆಯಿಂದ ನಾಳೆ ಬೆಳಗ್ಗೆ 7 ಗಂಟೆಯವರೆಗೂ ಮತ್ತೆ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ನಾಳೆ ಮದ್ಯಾಹ್ನ 12 ಗಂಟೆಗೆ ಜಿಲ್ಲಾಡಳಿತವು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:01 am, Wed, 26 October 22