ಹಾಸನ: ನರ ಹಂತಕ ಕಾಡಾನೆ ಕರಡಿ ಕೊನೆಗೂ ಸೆರೆ, ಅಭಿಮನ್ಯು ನೇತೃತ್ವದಲ್ಲಿ ಕಾರ್ಯಚರಣೆ ಯಶಸ್ವಿ
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ನಿತ್ಯವೂ ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ಊರಲ್ಲಿ ದಾಳಿ ಮಾಡುವ ಮೂಲಕ ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿದ್ದ ಕಾಡಾನೆ ಕರಡಿ ಇದೀಗ ಸೆರೆಸಿಕ್ಕಿದೆ. ಅಭಿಮನ್ಯು ನೇತೃತ್ವದಲ್ಲಿ ಹಂತಕ ಕಾಡಾನೆಯನ್ನು ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ತಂಡ ಸೆರೆ ಹಿಡಿಯಲಾಗಿದೆ.

ಹಾಸನ, ಏಪ್ರಿಲ್ 18: ಈ ಹಿಂದೆ ಕೂಲಿ ವಸಂತ ಎಂಬ ಕೂಲಿ ಕಾರ್ಮಿಕರನ್ನು ಬಲಿ ಪಡೆಯುವುದರೊಂದಿಗೆ ಸಾಕಷ್ಟು ಜನರ ಮೇಲೆ ದಾಳಿ ಮಾಡಿದ್ದ ನರ ಹಂತಕ ಕಾಡಾನೆ (Wild Elephant) ಕರಡಿ ಕಡೆಗೂ ಸೆರೆ ಆಗಿದೆ. ಅಭಿಮನ್ಯು ನೇತೃತ್ವದಲ್ಲಿ ಹಂತಕ ಕಾಡಾನೆಯನ್ನು ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ತಂಡ ಸೆರೆ (captured) ಹಿಡಿಯಲಾಗಿದೆ. ಅಭಿಮನ್ಯು, ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮ, ಅಶ್ವತ್ಥಾಮ, ಮಹೇಂದ್ರ ಸೇರಿ ಎಂಟು ಆನೆಗಳಿಂದ ಭರ್ಜರಿ ಕಾರ್ಯಾಚರಣೆ ಮೂಲಕ ಕಾಡಾನೆ ಕರಡಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಜನವರಿ 4 ರಂದು ಬೇಲೂರು ತಾಲ್ಲೂಕಿನ ಮತ್ತಾವರ ಬಳಿ ಕಾರ್ಮಿಕ ವಸಂತ್ನನ್ನು ಕರಡಿ ಕಾಡಾನೆ ಕೊಂದಿತ್ತು. ಬಳಿಕ ಬೇಲೂರು ಸಕಲೇಶಪುರ ಭಾಗದಲ್ಲಿ ಹಲವರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿತ್ತು ಒಂಟಿಸಲಗ.
ಇದನ್ನೂ ಓದಿ: ಮಹಿಳೆ ಸೇರಿ ಇಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿಸಲಗ: ಹಾಸನದಲ್ಲಿ ಮುಂದುವರೆದ ಕಾಡಾನೆಗಳ ಪುಂಡಾಟ
ಕಾಡಾನೆ ಕರಡಿ ನಿರಂತರವಾಗಿ ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿದ್ದ. ಸದ್ಯ ಹಾಸನದಲ್ಲಿ ಸೆರೆ ಹಿಡಿದ ಕಾಡಾನೆ ಕರಡಿಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಕಲ್ಕುಂದ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದ ಕಾಡಾನೆ ಕರಡಿ ಜ.4 ರಂದು ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ವಂಸತ್ ಎಂಬುವವರನ್ನು ಬಲಿ ಪಡೆದಿತ್ತು. ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತಗೊಂಡಿದ್ದರು. ಕಾಡಾನೆ ಜನರನ್ನು ಅಟ್ಟಾಡಿಸುವ ವಿಡಿಯೋ ಮೊಬೈಲ್ನಲ್ಲಿ ಸೆರೆ ಆಗಿದ್ದು, ಎಲ್ಲೆಡೆ ವೈರಲ್ ಕೂಡ ಆಗಿತ್ತು.
ಇದನ್ನೂ ಓದಿ: Elephant Attack: ಕಾರ್ಮಿಕನ ಮೇಲೆ ಕಾಡಾನೆ ದಾಳಿ, ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಫೆ. 15ರಂದು ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಸಮೀಪ ಇದೇ ಕರಡಿ ಕಾಡಾನೆ ಜನರ ಮೇಲೆ ಅಟ್ಯಾಕ್ ಮಾಡಿತ್ತು. ಅದೃಷ್ಟವಶಾತ್ ಇಬ್ಬರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಮಾರ್ಚ್ 4ರಂದು ಇದೇ ಆನೆ ಕೆಸಗುಲಿ ಗ್ರಾಮದಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೃದ್ದನ ಮೇಲೆ ಎರಗಿತ್ತು.
ಆನೆ ಬರುತ್ತಿರುವುದನ್ನು ಕಂಡು ಹೇಗೋ ಓಡಿ ಕಾರಿನಡಿ ಅಡಗಿ ಬಡ ಕೂಲಿ ಕಾರ್ಮಿಕ ಜೀವ ಉಳಿಸಿಕೊಂಡಿದ್ದ. ನಿತ್ಯವೂ ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ಊರಲ್ಲಿ ಇದೇ ರೀತಿಯಾಗಿ ದಾಳಿ ಮಾಡುವ ಮೂಲಕ ಜನರಲ್ಲಿ ಜೀವ ಭಯ ಸೃಷ್ಟಿ ಮಾಡಿದ್ದ ಕರಡಿ ಕಾಡಾನೆ ಇದೀಗ ಸೆರೆಸಿಕ್ಕಿದೆ. ಆ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



