AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗಿಂತ 2 ವರ್ಷ ಚಿಕ್ಕವನ ಪ್ರೇಮದ ಬಲೆಗೆ ಬಿದ್ದಿದ್ದ ಯುವತಿ ದುರಂತ ಸಾವು, ಆಗಿದ್ದೇನು?

ಆಕೆ ಅದಾಗತಾನೆ ಡಿಪ್ಲೋಮಾ ಮುಗಿಸಿ ಕೆಲಸಕ್ಕೆ ಸೇರಿದ್ದಳು, ಕೂಲಿ ಮಾಡಿ ಶಿಕ್ಷಣ ಕೊಡಿಸಿದ ಅಮ್ಮನಿಗೆ ಆಸರೆಯಾಗೋ ಕನಸು ಕಂಡವಳು ಸಂಬಂದಿಯೊಬ್ಬನ ಪ್ರೀತಿಯ ಬಲೆಗೆ ಸಿಲುಕಿಬಿಟ್ಟಿದ್ದಳು. ಪ್ರೀತಿ ಪ್ರೇಮಾ ಅಂತ ಕೇವಲ ಮೂರು ತಿಂಗಳಾಗಿತ್ತು ಅಷ್ಟೇ ಇನ್ನೂ 19 ವರ್ಷದ ಆ ಚೈಲ್ಡ್ ಪ್ರೇಮಿ ಪ್ರೀತಿಸಿದಾಕೆಗೆ ಕೊಡಬಾರದ ಕಾಟ ಕೊಟ್ಟಿದ್ದಾನೆ. ಇದರಿಂದ ಪ್ರೇಯಸಿ ದುರಂತ ಅಂತ್ಯಕಂಡಿದ್ದಾಳೆ.

ತನಗಿಂತ 2 ವರ್ಷ ಚಿಕ್ಕವನ ಪ್ರೇಮದ ಬಲೆಗೆ ಬಿದ್ದಿದ್ದ ಯುವತಿ ದುರಂತ ಸಾವು, ಆಗಿದ್ದೇನು?
Priyanka
ಮಂಜುನಾಥ ಕೆಬಿ
| Edited By: |

Updated on: Nov 07, 2025 | 10:01 PM

Share

ಹಾಸನ (ನವೆಂಬರ್ 07): ಪ್ರಿಯಕರನ (Lover) ಕಿರುಕುಳಕ್ಕೆ ಬೇಸತ್ತು ಪ್ರೇಯಸಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಾಂಕಾ(21) ಮೃತ ಯುವತಿ. ಆಲೂರು ತಾಲ್ಲೂಕು ಮೂಲದ ಸುಮಂತ್ (19) ಎನ್ನುವಾತನೇ ಪ್ರಿಯಾಂಕಾಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟ ಪ್ರಿಯಕರ.   ತನಗಿಂತ ಚಿಕ್ಕವನ ಪ್ರೇಮದ ಬಲೆಯಲ್ಲಿ ಬಿದ್ದು ಪ್ರಿಯಾಂಕಾ ದುರಂತ ಅಂತ್ಯಕಂಡಿದ್ದಾಳೆ.   ಆದ್ರೆ, ಘಟನೆ ನಡೆದು ವಾರ ಕಳೆದರೂ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಪ್ರಿಯಕರನ ಬಂಧನವಾಗಿಲ್ಲ.  ಯುವತಿ ಪ್ರಿಯಂಕಾ ಹೆತ್ತವರು ಕಣ್ಣೀರುಡುತ್ತಿದ್ದಾರೆ.

ಹಾಸನ ತಾಲ್ಲೂಕಿನ ಜಾಗರವಳ್ಳಿಯ ಪ್ರಿಯಾಂಕಾ, ತಾಯಿ ಶೋಭಾ ಹಾಗ ತಂದೆ ಜಯರಾಂ ನಾಯಕ್ ಜೊತೆಗೆ ಬೆಂಗಳೂರಿನ ನೆಲಗದ್ದರಹಳ್ಳಿಯಲ್ಲಿ ನೆಲೆಸಿದ್ದಳು. ಮೂರು ತಿಂಗಳ ಹಿಂದಷ್ಟೇ ಡಿಪ್ಲೋಮಾ ಮುಗಿಸಿ ತಾಯಿ ಕೆಲಸಮಾಡೋ ಖಾಸಗಿ ಕಂಪನಿಯಲ್ಲೇ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆದ್ರೆ, ಪ್ರಿಯಾಂಕಾ, ಹಾಸನ ಜಿಲ್ಲೆ ಆಲೂರು ತಾಲ್ಲೂಕು ಮೂಲದ ಪಾಪಿ ಸುಮಂತ್ ನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಮಗಳ ಲವ್ ವಿಚಾರ ಗೊತ್ತಾಗಿ ನಿನಗೆ (ಪ್ರಿಯಾಂಕಾ) 21 ವರ್ಷ. ಆ ಹುಡುಗನಿಗೆ ಇನ್ನೂ 19 ವರ್ಷ. ಹೀಗಾಗಿ ಎರಡು ವರ್ಷ ಬಳಿ ಆನಂತರ ಮದುವೆ ಮಾಡುವುದಾಗಿ ತಾಯಿ ಹೇಳಿದ್ದಳು. ಆದರೂ ಪ್ರಿಯಾಂಕಳನ್ನ ಬೆನ್ನು ಬಿದ್ದಿದ್ದ ಸುಮಂತ್ ಕೊಡಬಾರದ ಕಾಟ ಕೊಟ್ಟಿದ್ದಾನೆ.

ಇದನ್ನೂ ಓದಿ: ಶೀಲ ಶಂಕಿಸಿ ಪತ್ನಿ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ: ಕಿಂಚಿತ್ತು ಪಶ್ಚಾತ್ತಾಪವಿಲ್ಲದೇ ಪತಿ ಬಿಚ್ಚಿಟ್ಟ ಮರ್ಡರ್ ಕಹಾನಿ

ಪ್ರಿಯಾಂಕಾಳ ಫೋನ್ ಬ್ಯುಸಿ ಬಂದಾಗೆಲ್ಲ ಸುಮಂತ್​​ಗೆ ಅನುಮಾನ. ಸಾಲದಕ್ಕೆ ಸಿಕ್ಕ ಸಿಕ್ಕವರ ಜೊತೆ ಸಂಬಂಧಕಟ್ಟಿ ಬಾಯಿಗೆ ಬಂದಂಗೆ ಬೈಯುತ್ತಿದ್ದ. ಅಲ್ಲದೇ ಅಕ್ಟೋಬರ್ 30ರ ಗುರುವಾರ ಬೆಳಿಗ್ಗೆ ಕೂಡ ಕರೆ ಮಾಡಿ ಗಲಾಟೆ ಮಾಡಿದ್ದು, ಆತ್ಮಹತ್ಯೆ ಮಾಡಿಕೋ ಎಂದು ಪ್ರಚೋದನೆ ನೀಡಿದ್ದಾನೆ. ಇದರಿಂದ ಪೂರ್ತಿ ಮನನೊಂದಿದ ಪ್ರಿಯಾಂಕಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಆತನೊಟ್ಟಿಗಿನ ಎಲ್ಲಾ ಮಾತುಕತೆಯನ್ನ ರೆಕಾರ್ಡ್ ಮಾಡಿಟ್ಟಿದ್ದಾಳೆ. ಆತನ ಕಿರುಕುಳ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಕಣ್ಣೀರಿಟ್ಟಿದ್ದು, ನನ್ನ ಮಗಳಿಗಾದ ಸ್ಥಿತಿ ಬೇರೆಯಾರಿಗೂ ಆಗಬಾರದು ಎಂದು ಪೀಣ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ, ದೂರು ದಾಖಲಿಸಿ ಮೂರು ತಿಂಗಳಾದರೂ ಸಹ ಪೊಲೀಸರು ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ರೋಧಿಸುತ್ತಿದ್ದಾಳೆ.

ವಾಸಕ್ಕೆ ಮನೆಯಿಲ್ಲ ದುಡಿದು ತಿನ್ನೋಕೆ ಆಸ್ತಿಯಿಲ್ಲ ಸಿಕ್ಕ ಸಿಕ್ಕಲ್ಲಿ ಕೂಲಿ, ಕಂಡವರ ಮನೆ ಪಾತ್ರ ತೊಳೆದು, ಕೂಲಿನಾಲಿ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದ ಈ ಬಡ ದಂಪತಿ , ಮಕ್ಕಳಿಬ್ಬರ ಶಿಕ್ಷಣ ಮುಗಿದು ಕೆಲಸ ಸಿಕ್ಕಿತು ಎಂದು ಕೊಂಚ ನಿರಾಳವಾಗಿದ್ದರು. ಮಗಳು ನಮ್ಮ ಕೈ ಹಿಡಿತಾಳೆ ಎಂದು ಕನಸು ಕಂಡಿದ್ದರು. ಆದ್ರೆ ಪ್ರೀತಿಯ ಬಲೆಗೆ ಬಿದ್ದು ಮೋಸ ಮೋದ ಪ್ರಿಯಾಂಕಾ ದುರಂತ ಸಾವು ಕಂಡಿದ್ದಾಳೆ.

ಕೆಲಸಕ್ಕೆ ಹೋಗಿದ್ದ ತಾಯಿ, ಮಗಳು 11 ಗಂಟೆಯಾದ್ರು ಕೆಲಸಕ್ಕೆ ಬಾರದಿದ್ದಾಗ ಫೋನ್ ಮಾಡಿದ್ದಾರೆ. ಎಷ್ಟೇ ಕರೆಮಾಡಿದ್ರು ರಿಸೀವ್ ಆಗದಿದ್ದಾಗ ಪಕ್ಕದ ಮನೆಯವರಿಗೆ ಫೋನ್ ಮಾಡಿ ಮಾಡಿದ್ದಾರೆ. ಆಗ ಪಕ್ಕದ ಮನೆಯವರು ಬಂದು ನೋಡಿದಾಗ ಮನೆಯೊಳಗಿನಿಂದ ಲಾಕ್ ಆಗಿದೆ. ಮೊಬೈಲ್ ರಿಂಗ್ ಆಗುತ್ತಿರುವುದು ಹೊರಗಡೆಗೆ ಶಬ್ಧ ಕೇಳಿದೆ. ಆದ್ರೆ, ಸ್ಪಂದನೆ ಇಲ್ಲ. ಇದರಿಂದ ಆತಂಕಗೊಂಡು ಬಾಗಿಲು ಮುರಿದು ನೋಡಿದಾಗ ಪ್ರಿಯಾಂಕಾ ನೇಣಿಗೆ ಶರಣಾಗಿದ್ದಳು.

ಕಷ್ಚಪಟ್ಟು ಓದಿ ಇನ್ನೇನು ಕೆಲಸ ಕೈಹಿಡಿದು ಜೀವನ ಬದಲಾಯ್ತು ಎನ್ನೋ ಹೊತ್ತಲ್ಲಿ ಬರ ಸಿಡಿಲು ಬಡಿದಂತೆ ಬಂದ ಮಗಳ ಸಾವು ಇಡೀ ಕುಟುಂಭವನ್ನೇ ಕಂಗೆಡಿಸಿದೆ. ಬಡತನದ ನಡುವೆಯೂ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದ ಈ ದಂಪತಿ, ಮಗಳ ನೆನೆದು ಕಣ್ನೀರಿಡುತ್ತಿದ್ದು ಮಗಳಿಗೆ ಈ ಗತಿ ತಂದ ಪಾಪಿ ವಿರುದ್ದ ಕಠಿಣ ಕ್ರಮ ಆಗಲಿ ಎಂದು ಆಗ್ರಹಿಸಿದ್ದಾರೆ.