ಫೇಸ್​​ಬುಕ್​​ನಲ್ಲಿ ಯುವಕನ ಪರಿಚಯ: ಬೆಂಗಳೂರಿನಿಂದ ಹಾಸನಕ್ಕೆ ಬಂದವಳು ಬೀಗ ಹಾಕಿದ ಮನೆಯೊಳಗೆ ಶವವಾಗಿ ಪತ್ತೆ

| Updated By: ರಮೇಶ್ ಬಿ. ಜವಳಗೇರಾ

Updated on: Jan 27, 2023 | 7:52 PM

ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಯುವಕನ ಬಳಿ ಹೋಗಿದ್ದ ಬೆಂಗಳೂರಿನ ಯುವತಿ ಇದೀಗ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಫೇಸ್​​ಬುಕ್​​ನಲ್ಲಿ ಯುವಕನ ಪರಿಚಯ: ಬೆಂಗಳೂರಿನಿಂದ ಹಾಸನಕ್ಕೆ ಬಂದವಳು ಬೀಗ ಹಾಕಿದ ಮನೆಯೊಳಗೆ ಶವವಾಗಿ ಪತ್ತೆ
Follow us on

ಹಾಸನ: ಫೇಸ್​​ಬುಕ್​​ನಲ್ಲಿ(Facebook)ಪರಿಚಯವಾಗಿ ಎಂಟು ತಿಂಗಳ ಹಿಂದೆ ಬೆಂಗಳೂರು(Bengaluru) ಬಿಟ್ಟು ಹಾಸನಕ್ಕೆ (Hassan) ಬಂದವಳು ಇದೀಗ  ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆ ಹಾಸನ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ವಿಜಯನಗರದ ಸಿರಿಸ್​(22) ಮೃತ ಮಹಿಳೆ. ಆದರ್ಶ್​ ಹಾಗೂ ಸಿರಿಸ್ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದರು. ಬಳಿಕ ಇವರಿಬ್ಬರು ಒಂದೇ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಮದುವೆ ಆಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಡ್ಡೇನಹಳ್ಳಿಯಲ್ಲಿ ಮಾಲೀಕರಿಗೆ ಮದುವೆಯಾಗಿದೆ ಎಂದು ಹೇಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಇದೀಗ ಅದೇ ಬಾಡಿಗೆ ಮನೆಯಲ್ಲಿ ಸಿರಿಸ್​ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: ದುರ್ಜನರ ಸಂಗ ಮಾಡಿ ಮಾಡದ ತಪ್ಪಿಗೆ ಜೀವ ತೆತ್ತ ಮೈಸೂರಿನ ಯುವಕ, ಸಜ್ಜನರ ಸಂಗ ಹೆಜ್ಜೇನ ಸವಿದಂತೆ ಎಂದು ಹೇಳಿದ್ದು ಇದಕ್ಕೆ

ಒಂದು ತಿಂಗಳ ಹಿಂದಷ್ಟೇ ಗುಡ್ಡೇನಹಳ್ಳಿ ಗ್ರಾಮಕ್ಕೆ ಬಂದು ಮದುವೆಯಾಗಿದೆ ಎಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ, ಇದೀಗ ಸಿರಿ ಏಕಾಏಕಿ ಮೃತಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಘಟನಾ ಸ್ಥಳಕ್ಕೆ ASP ತಮ್ಮಯ್ಯ, DySP ಉದಯ್​ಭಾಸ್ಕರ್ ಭೇಟಿ ಪರಿಶೀಲನೆ ನಡೆಸಿದ್ದು, ನಿನ್ನೆ ರಾತ್ರಿ (ಜನವರಿ 26) ಸಿರಿಸ್​ ಪತ್ನಿಯನ್ನು ಕೊಂದು ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿರುವ ಅನುಮಾನಗಳು ವ್ಯಕ್ತವಾಗಿವೆ. ಇನ್ನು ಈ ಬಗ್ಗೆ ಪೆನ್‌ಷನ್‌ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಮೊದಲು ಬೆಂಗಳೂರಿನಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿರಿಸ್ ಅಲಿಯಾಸ್ ಸಿರಿ ಫೇಸ್​ಬುಕ್​ನಲ್ಲಿ ಆದರ್ಶ್​ ಪರಿಚಯವಾಗಿದೆ. ಬಳಿಕ ಬೆಂಗಳೂರು ಬಿಟ್ಟು ಹಾಸನಕ್ಕೆ ಆದರ್ಶ್​ ಹತ್ತಿರ ಹೋಗಿದ್ದು, ನಂತರ ಇಬ್ಬರೂ ಒಂದೇ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಇಬ್ಬರು ಮದುವೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರು ಲಿವಿಂಗ್‌ ಟುಗೆದರ್​ನಲ್ಲಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಹಾಸನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:46 pm, Fri, 27 January 23