AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇವಣ್ಣ ವಿರುದ್ದ ಬಿಜೆಪಿ ನಾಯಕನ ಹೊಸ ಬಾಂಬ್; 30 ವರ್ಷದ ಹಳೆಯ ಘಟನೆ ರಿವೀಲ್​

ಹಾಸನದ ಸಂಸದ ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ವಿಚಾರ, ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಸಂಸದ ಪ್ರಜ್ವಲ್​ ಹಾಗೂ ಮಾಜಿ ಸಚಿವ ರೇವಣ್ಣರಿಗೆ ಸಂಕಷ್ಟ ಕೂಡ ಎದುರಾಗಿದೆ. ಇನ್ನು ಈ ಪ್ರಕರಣ ಸಂಬಂಧ ದೇವೇಗೌಡರ ಕುಟುಂಬದ ವಿರುದ್ದ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಹೊಸ ಬಾಂಬ್ ಸಿಡಿಸಿರೋ ಮಾಜಿ ಸಂಸದ, ಹಳೆ ಪ್ರಕರಣವೊಂದರನ್ನ ರಿವೀಲ್ ಕೂಡ ಮಾಡಿದ್ದಾರೆ.

ರೇವಣ್ಣ ವಿರುದ್ದ ಬಿಜೆಪಿ ನಾಯಕನ ಹೊಸ ಬಾಂಬ್; 30 ವರ್ಷದ ಹಳೆಯ ಘಟನೆ ರಿವೀಲ್​
ಎಲ್ ಆರ್ ಶಿವರಾಮೇಗೌಡ , ರೇವಣ್ಣ
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 04, 2024 | 3:24 PM

Share

ಹಾಸನ, ಮೇ.04: ರಾಜ್ಯ ರಾಜಕಾರಣದಲ್ಲಿ ಬಾರಿ ಸದ್ದು ಮಾಡುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣರ (Prajwal Revanna) ಪೆನ್ ಡ್ರೈವ್ ವಿಚಾರ ರಾಜ್ಯ ಸೇರಿದಂತೆ ದೇಶದಲ್ಲಿ ಬಾರಿ ಚರ್ಚೆ ಆಗುತ್ತಿದೆ. ಪೆನ್ ಡ್ರೈವ್, ಕಿಡ್ಯಾಪ್ ಪ್ರಕರಣ ಪ್ರಜ್ವಲ್ ಹಾಗೂ ರೇವಣ್ಣರಿಗೆ ಸಂಕಷ್ಟ ತಂದೊಡ್ಡಿದೆ. ವಿರೋಧ ಪಕ್ಷಗಳ ಬಾರಿ ಟೀಕೆಗೂ ಕೂಡ ವೇದಿಕೆಯಾಗಿದೆ. ಇದೇ ಪ್ರಕರಣ ಸಂಬಂಧ ಇದೀಗ ದೇವೇಗೌಡರ ಕುಟುಂಬದ ವಿರುದ್ದ, ಒಂದು ಕಾಲದಲ್ಲಿ ದೇವೇಗೌಡ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಂಡ್ಯದ ಬಿಜೆಪಿ ಮುಖಂಡ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ(LR Shivarame Gowda) ವಾಗ್ದಾಳಿ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿ ಕೂಡ ಕಡಿಮೆ. ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟೊಂದು ವಿಡಿಯೋಗಳು ಇರುವುದಿಲ್ಲ. ಎಂಪಿಯಾಗಿ ಐದು ವರ್ಷ ಏನನ್ನು ಮಾಡಿಲ್ಲ. ದಿನಕ್ಕೆ ಮೂವರಂತೆ ಐದು ವರ್ಷ ಇದನ್ನೇ ಮಾಡಿದ್ದಾನೆ. ನಮ್ಮಂತವರನ್ನು ತುಳಿದ ಪಾಪದಿಂದ ದೇವೇಗೌಡರಿಗೆ ಇಂತಹ ಪರಿಸ್ಥಿತಿ ಬಂದಿದೆ. ಕುಮಾರಸ್ವಾಮಿ ಅವರು ಸಂತ್ರಸ್ಥೆಯರ ಪರವಾಗಿ ಹೋರಾಟ ಮಾಡಬೇಕು. ಅಲ್ಲದೇ ಕೂಡಲೇ ಎನ್​ಡಿಎ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷವನ್ನ ಹೊರಹಾಕಬೇಕು ಎಂದು ಕಿಡಿಕಾರಿದರು.

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್​: ವಿಡಿಯೋ ನೋಡೋ ಧೈರ್ಯ ಬರಲಿಲ್ಲ, ನಿಖಿಲ್ ಕುಮಾರಸ್ವಾಮಿ

ಇದೇ ರೀತಿ ಘಟನೆಯಲ್ಲಿ ರೇವಣ್ಣ ಇಂಗ್ಲೆಂಡ್​ನಲ್ಲೂ ತಗ್ಲಾಕೊಂಡಿದ್ದರು ಎಂದು ಹೊಸ ಬಾಂಬ್​

ಅಂದಹಾಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಒಂದು ಕಡೆ ಜೆಡಿಎಸ್ ಪಕ್ಷಕ್ಕೆ ತಲೆ ನೋವು ತಂದು ಇಟ್ಟಿದ್ದರೆ, ಮತ್ತೊಂದು ಕಡೆ ಇಡೀ ದೇವೇಗೌಡರ ಕುಟುಂಬದ ಮಾರ್ಯಾದೆಯನ್ನೇ ಹಾಳು ಮಾಡಿದೆ. ಈ ನಡುವೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿಚಾರ ಕೂಡ ಒಂದೊಂದಾಗಿ ಹೊರಕ್ಕೆ ಬರುತ್ತಿದೆ. ರೇವಣ್ಣ ವಿರುದ್ದ ಕೂಡ ಪೊಲೀಸ್ ಠಾಣೆಯಲ್ಲಿ ದೂರು ಸಹಾ ದಾಖಲಾಗಿದೆ. ಈ ಮಧ್ಯೆ ರೇವಣ್ವ ಅವರ ಮೂವತ್ತು ವರ್ಷದ ಹಳೆಯದಾದ ಘಟನೆಯನ್ನ ಮಾಜಿ ಸಚಿವ ರಿವೀಲ್ ಮಾಡಿದ್ದಾರೆ. ಹಾಸನದಲ್ಲಿ ನಡೆದಿದ್ದ ಘಟನೆ ಇಂಗ್ಲೆಂಡ್​ನಲ್ಲೂ ನಡೆದಿತ್ತು. ರೇವಣ್ಣ ಇದೇ ರೀತಿ ಇಂಗ್ಲೆಂಡ್​ನಲ್ಲೂ ತಗ್ಲಾಕೊಂಡಿದ್ದರು. ರೇವಣ್ಣರದ್ದು ಇದೇನೂ ಹೊಸದಲ್ಲ. ಹಾಸನದಂತ ಘಟನೆಯ ನಡೆದಿತ್ತು.ಎಸ್​ಐಟಿ ತಂಡ ಇಂಗ್ಲೆಂಡ್​ಗೆ ಹೋಗಿ ತನಿಖೆ ಮಾಡಲಿ ಎಂದು ಆಗ್ರಹ ಮಾಡಿದ್ದಾರೆ.

ಒಟ್ಟಾರೆ ದೇವೇಗೌಡರ ಕುಟುಂಬದ ವಿರುದ್ದ ಮಾಜಿ ಸಂಸದ ವಾಗ್ದಾಳಿ ನಡೆಸುವುದರ ಜೊತೆಗೆ ಹಳೆ ಘಟನೆಯೊಂದನ್ನ ರಿವೀಲ್ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ