ಹಾಸನ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ತಪ್ಪಿಸಲು ಸದಸ್ಯೆ ಕಿಡ್ನ್ಯಾಪ್.. ಮೂವರ ವಿರುದ್ಧ ದೂರು ದಾಖಲು

ಹಾಸನ ತಾಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ಸದಸ್ಯೆ, ಕಾರೆಕೆರೆ ಕ್ಷೇತ್ರದಿಂದ ಆಯ್ಕೆ ಆಗಿರುವ ಭಾಗ್ಯಮ್ಮ ಬೆಂಗಳೂರಿನ ಸಂಬಂಧಿಕರ ಮನೆಯಿಂದ ವಾಪಸ್ ಬರೋ ವೇಳೆ ಶಾಂತಿಗ್ರಾಮ ಬಸ್ ನಿಲ್ದಾಣದಿಂದ ಅಪಹರಿಸಲ್ಪಟ್ಟಿದ್ದಾರಂತೆ...

  • Publish Date - 12:22 pm, Wed, 3 February 21 Edited By: sadhu srinath
ಹಾಸನ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ತಪ್ಪಿಸಲು ಸದಸ್ಯೆ ಕಿಡ್ನ್ಯಾಪ್.. ಮೂವರ ವಿರುದ್ಧ ದೂರು ದಾಖಲು
ಗ್ರಾ.ಪಂ. ಸದಸ್ಯೆ ಭಾಗ್ಯಮ್ಮ

ಹಾಸನ: ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ತಪ್ಪಿಸಲು ಮಡೆನೂರು ಗ್ರಾ.ಪಂ. ಸದಸ್ಯೆ ಭಾಗ್ಯಮ್ಮ ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಮಹಿಳೆಗೆ ಅವಕಾಶ ತಪ್ಪಿಸಲು ಗ್ರಾಮದ ಕೆಲವರು ಆಕೆಯನ್ನು ಕಿಡ್ನ್ಯಾಪ್ ಮಾಡಿದ್ರು ಎಂದು ಹೇಳಲಾಗುತ್ತಿದೆ.

ಹಾಸನ ತಾಲೂಕಿನ ಮಡೆನೂರು ಗ್ರಾಮ ಪಂಚಾಯತಿ ಸದಸ್ಯೆ, ಕಾರೆಕೆರೆ ಕ್ಷೇತ್ರದಿಂದ ಆಯ್ಕೆ ಆಗಿರುವ ಭಾಗ್ಯಮ್ಮ ಬೆಂಗಳೂರಿನ ಸಂಬಂಧಿಕರ ಮನೆಯಿಂದ ವಾಪಸ್ ಬರೋ ವೇಳೆ ಶಾಂತಿಗ್ರಾಮ ಬಸ್ ನಿಲ್ದಾಣದಿಂದ ಅಪಹರಿಸಲ್ಪಟ್ಟಿದ್ದಾರಂತೆ. ಈ ಬಗ್ಗೆ ಗ್ರಾ.ಪಂ. ಸದಸ್ಯೆ ಭಾಗ್ಯಮ್ಮ ಪುತ್ರ ಜಯರಾಂ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರೆಕೆರೆ ಗ್ರಾಮದ ವೆಂಕಟೇಶ, ಹಿರಿಯಣ್ಣಗೌಡ ಮತ್ತು ಮಡೆನೂರು ಗ್ರಾಮದ ಸುರೇಂದ್ರ ವಿರುದ್ಧ ಕಿಡ್ನ್ಯಾಪ್ ಆರೋಪ ಮಾಡಲಾಗಿದೆ.

ದೇಶಕ್ಕೇ ಮಾದರಿಯಾದ ಅಂಚಟಗೇರಿ ಗ್ರಾಮ ಪಂಚಾಯಿತಿ; ಕಳೆದ ವರ್ಷ ಪ್ರಶಸ್ತಿಯೂ ಬಂದಿದೆ..