ಹಾಸನಾಂಬೆ ಭಕ್ತರಿಗೆ ವಿದ್ಯುತ್​​​ ಶಾಕ್​: 18 ಜನ ಡಿಸ್ಚಾರ್ಜ್​​, ವಿಐಪಿ ದರ್ಶನಕ್ಕೆ ಮುಗಿಬಿದ್ದ ಜನರು

ಸಹಕಾರ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ನಂತರ ಡಿಸ್ಚಾರ್ಜ್ ಆದ ಭಕ್ತರ ಯೋಗಕ್ಷೇಮ ಕೂಡ ವಿಚಾರಿಸಿ ಎಲ್ಲರಿಗೂ ಊಟ ಮಾಡಿಸಿ, ದೇವಿ ದರ್ಶನ ಮಾಡಿಸಿ ಎಂದು ಉಪವಿಭಾಗಧಿಕಾರಿ ಮಾರುತಿಗೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಹಾಸನಾಂಬೆ ಭಕ್ತರಿಗೆ ವಿದ್ಯುತ್​​​ ಶಾಕ್​: 18 ಜನ ಡಿಸ್ಚಾರ್ಜ್​​, ವಿಐಪಿ ದರ್ಶನಕ್ಕೆ ಮುಗಿಬಿದ್ದ ಜನರು
ಹಾಸನಾಂಬೆ ದೇಗುಲದಲ್ಲಿ ಕರೆಂಟ್​ ಶಾಕ್​
Edited By: ವಿವೇಕ ಬಿರಾದಾರ

Updated on: Nov 11, 2023 | 10:13 AM

ಹಾಸನ ನ.11: ಹಾಸನಾಂಬ (Hasanamba) ದರ್ಶನಕ್ಕೆ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್ ಹೊಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನ ಭಕ್ತರು ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್​ ಆಗಿದ್ದಾರೆ. ಕರೆಂಟ್ ಶಾಕ್​ನಿಂದ ಅಸ್ವಸ್ಥರಾಗಿದ್ದ 20 ಭಕ್ತರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶುಕ್ರವಾರ ಮಧ್ಯಾಹ್ನ ಐವರು ಭಕ್ತರು ಡಿಸ್ಚಾರ್ಜ್ ಆಗಿದ್ದು, ಸಂಜೆ 13 ಜನ ಭಕ್ತರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಮತ್ತಿಬ್ಬರು ಗಾಯಾಳುಗಳಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಸಚಿವ ರಾಜಣ್ಣ

ಸಹಕಾರ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ನಂತರ ಡಿಸ್ಚಾರ್ಜ್ ಆದ ಭಕ್ತರ ಯೋಗಕ್ಷೇಮ ಕೂಡ ವಿಚಾರಿಸಿ ಎಲ್ಲರಿಗೂ ಊಟ ಮಾಡಿಸಿ, ದೇವಿ ದರ್ಶನ ಮಾಡಿಸಿ ಎಂದು ಉಪವಿಭಾಗಧಿಕಾರಿ ಮಾರುತಿಗೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಹಾಸನಾಂಬೆ ದರ್ಶನಕ್ಕೆ 9 ನೇ ದಿನವೂ ಹರಿದು ಬಂದ ಭಕ್ತಸಾಗರ

ಹಾಸನಾಂಬೆ ದರ್ಶನಕ್ಕೆ 9 ನೇ ದಿನವೂ ಭಕ್ತರ ದಂಡೇ ಹರಿದು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂರುತ್ತಿದ್ದಾರೆ. ಇನ್ನೂ ದೇವಿ ದರ್ಶನಕ್ಕೆ ನಾಲ್ಕು ದಿನ ಮಾತ್ರ ಬಾಕಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ಭಕ್ತರಿಗೆ ಕರೆಂಟ್ ಶಾಕ್! ಕಾರಣ ನಿಗೂಢ? ಇಲ್ಲಿದೆ ಸಂಪೂರ್ಣ ವಿವರ

ವಿದ್ಯುತ್ ಅವಘಡದಿಂದ ಎಚ್ಚೆತ್ತ ಜಿಲ್ಲಾಡಳಿತ ನಿನ್ನೆ (ನ.11) ರಾತ್ರಿಯಿಂದ ಶಿಷ್ಟಾಚಾರದ ದರ್ಶನ ಅಂತ್ಯಗೊಳಿಸಿ ಆದೇಶ ಹೊರಡಿಸಿದೆ. ಅರ್ಚಕರ ಹೊರತುಪಡಿಸಿ ಗರ್ಭಗುಡಿಗೆ ಅನ್ಯರ ಪ್ರವೇಶಕ್ಕೆ ನಿಷೇಧ ಹೇರಿದೆ. ಗರ್ಭಗುಡಿ ದರ್ಶನದಿಂದ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಸರತಿ ಸಾಲಿನಲ್ಲಿ ಒಬ್ಬರೆ ತೆರಳುವಂತೆ ಸೂಚನೆ ನೀಡಲಾಗಿದೆ.

ವಿಐಪಿ ದರ್ಶನಕ್ಕೆ ಮುಗಿಬಿದ್ದ ಜನರು

ಧರ್ಮದರ್ಶನ ಸಾಲಿನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದರಿಂದ ಭಕ್ತರು VIP ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಭಕ್ತರು 300 ,1000 ರೂಪಾಯಿ ನೀಡಿ ವಿಐಪಿ ದರ್ಶನ ಸಾಲಿನಲ್ಲಿ ನಿಂತಿದ್ದಾರೆ. ಧರ್ಮದರ್ಶನ ಸಾಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಣ ನೀಡಿ ದರ್ಶನಕ್ಕೆ ತೆರಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:09 am, Sat, 11 November 23

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us