ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ: ನಕಲಿ ಸಂದೇಶ ಹರಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಪಿಎಯಿಂದ ದೂರು

ಹಾಸನ ಡಿಸಿ ಹಾಗೂ ಉಸ್ತುವಾರಿ ಸಚಿವರ ಲಂಚದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಮ್ಮ ಹೆಸರಿನಲ್ಲಿ ನಕಲಿ ವಾಟ್ಸಾಪ್ ಸಂದೇಶ ಹರಡಲಾಗುತ್ತಿದೆ ಎಂದು ಡಿಸಿ ಪಿಎ ಶಶಿಕಿರಣ್ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಸಿಂಹ ಮಲಗಿರುವಾಗ ನಾಯಿಗಳು ಬೊಗಳುವ ಇಮೇಜ್ ಹಾಕಿ ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ ಎಂದು ಹಾಸನ ಡಿಸಿ ಪೋಸ್ಟ್​​ ಮಾಡಿದ್ದು, ಕೇಂದ್ರ ಸಚಿವರಿಗೇ ಕೌಂಟರ್​​ ಕೊಟ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ: ನಕಲಿ ಸಂದೇಶ ಹರಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಪಿಎಯಿಂದ ದೂರು
ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪಕ್ಕೆ ಟ್ವಿಸ್ಟ್​
Edited By:

Updated on: Nov 09, 2026 | 9:52 AM

ಹಾಸನ, ನವೆಂಬರ್​​ 09: ಹಾಸನ ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ ಪ್ರಕರಣ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಪಿಎ ಶಶಿಕಿರಣ್ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶ ಸೃಷ್ಟಿಸಿ ಹರಡಲಾಗುತ್ತಿದೆ. ಇದರಿಂದ ವೈಯಕ್ತಿಕ ವರ್ಚಸ್ಸು, ಆಡಳಿತಾತ್ಮಕವಾಗಿ ಧಕ್ಕೆ ಆಗುತ್ತಿದೆ. ಆ ಸಂದೇಶದಲ್ಲಿ ಡಿಸಿ, ಸಚಿವರು, ಅರಸೀಕೆರೆ ತಹಶೀಲ್ದಾರ್ ಸೇರಿದಂತೆ ಡಿಸಿ, ಎಸಿ , ಎಡಿಸಿ ಕಚೇರಿ ಸಿಬ್ಬಂದಿ ಹೆಸರು ಉಲ್ಲೇಖಿಸಲಾಗಿದೆ ಎಂದು ದೂರಿದ್ದಾರೆ. ಶಶಿಕಿರಣ್ ದೂರು ಆಧರಿಸಿ BNS ಕಾಯ್ದೆ 336,(4), 335 ಅಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಕುಮಾರಸ್ವಾಮಿಗೆ ಹಾಸನ ಡಿಸಿ ಕೌಂಟರ್​?

Hassan DC vs HD Kumaraswamy: DC Latha Kumari Posts Cryptic Lion Image To Counter HDK

Loading...

ಮತ್ತೊಂದೆಡೆ ಭ್ರಷ್ಟಾಚಾರ ಆರೋಪ ಸಂಬಂಧ ಕುಮಾರಸ್ವಾಮಿ ಅವರಿಂದ ಕೆಲ ದಾಖಲೆ ಬಿಡುಗಡೆ ಬೆನ್ನಲ್ಲೇ ಕೇಂದ್ರ ಸಚಿವರಿಗೇ ಹಾಸನ ಡಿಸಿ ಕೆ.ಎಸ್.ಲತಾಕುಮಾರಿ ಕೌಂಟರ್​​ ಕೊಟ್ಟರಾ ಎಂಬ ಪ್ರಶ್ನೆ ಉದ್ಭವಿಸಿದೆ. ಸಿಂಹ ಮಲಗಿರುವಾಗ ನಾಯಿಗಳು ಬೊಗಳುವ ಇಮೇಜ್ ಹಾಕಿ ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ ಎಂದು ತಮ್ಮ ವಾಟ್ಸಾಪ್​​, ಟ್ವಿಟರ್​​​ನಲ್ಲಿ ಪೋಸ್ಟ್​​ ಮಾಡಿರೋದೀಗ ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಹೆಚ್​​ಡಿಕೆ ಆರೋಪಕ್ಕೆ ಡಿಸಿ ತಿರುಗೇಟು! ಚಾಟ್​​ ನಿಜಾನಾ ಎಂದು ತನಿಖೆ ಮಾಡಿಸ್ತೇನೆ ಎಂದ ಅಧಿಕಾರಿ

ನಿನ್ನೆ ಸುದ್ದಿಗೋಷ್ಠಿ ವೇಳೆ ಹಾಸನ ಡಿಸಿ ಪಿಎ ಶಶಿಕಿರಣ್​​ರದ್ದು ಎನ್ನಲಾದ ವಾಟ್ಸ್ಯಾಪ್​​ ಚಾಟ್​​ನ 15 ಪುಟಗಳ ಸ್ಕ್ರೀನ್ ಶಾಟ್ ಪ್ರತಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಇವನ್ನು ತನೆಗೆ ಯಾವುದೋ ಅಧಿಕಾರಿ ತಂದುಕೊಟ್ಟು ಹೋಗಿರುವುದಾಗಿಯೂ ತಿಳಿಸಿದ್ದರು. ಮೂರು ಕ್ರಷರ್ ಅನುಮತಿಗಾಗಿ 60 ಲಕ್ಷ ರೂ. ಲಂಚ ಕೇಳಿದ್ದ ಆರೋಪ ಮಾತ್ರವಲ್ಲದೆ ಡಿಸಿ ಲತಾಕುಮಾರಿ ಹಾಸನದಲ್ಲೇ ಉಳಿಯಲು ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಿರುವ ಸಂಬಂಧ ಮಾತುಕತೆ ಕೂಡ ಈ ಚಾಟ್​​ಗಳಲ್ಲಿ ಕಂಡುಬಂದಿತ್ತು. ರಾಜ್ಯಾದ್ಯಂತ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:46 am, Mon, 9 November 26

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us