ಹಾಸನದಲ್ಲಿ ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ: ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ವ್ಯಕ್ತಿ ಓರ್ವ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಹೆಡ್​​ ಕಾನ್ಸ್​ಟೇಬಲ್​ ವಿರುದ್ಧ 80 ಸಾವಿರ ರೂ ಸಾಲಕ್ಕೆ 2 ಲಕ್ಷ ರೂ ಬಡ್ಡಿ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ.

ಹಾಸನದಲ್ಲಿ ಹೆಡ್​​ ಕಾನ್ಸ್​ಟೇಬಲ್​ನಿಂದಲೇ ಮೀಟರ್ ಬಡ್ಡಿ ದಂಧೆ: ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನ
ಮೊಹಮ್ಮದ್ ತನ್ಜೀರ್
Updated By: ಗಂಗಾಧರ​ ಬ. ಸಾಬೋಜಿ

Updated on: May 05, 2025 | 10:31 AM

ಹಾಸನ, ಮೇ 05: ಹೆಡ್​​ ಕಾನ್ಸ್​ಟೇಬಲ್​ನಿಂದಲೇ (Head Constable) ಮೀಟರ್ ಬಡ್ಡಿ ದಂಧೆ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ (Sakleshpura) ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದಿದೆ. ಬಾಳ್ಳುಪೇಟೆಯ ಮೊಹಮ್ಮದ್ ತನ್ಜೀರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಹಾಸನ ಎಸ್​ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್​ಟೇಬಲ್​ ಅರುಣ್​ ವಿರುದ್ಧ ಮೀಟರ್ ಬಡ್ಡಿ ದಂಧೆ ಆರೋಪ ಕೇಳಿಬಂದಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

80 ಸಾವಿರ ರೂ.ಗೆ 2 ಲಕ್ಷ ರೂ ಬಡ್ಡಿ

ಮೊಹಮ್ಮದ್ ತನ್ಜೀರ್​​ 2 ವರ್ಷದ ಹಿಂದೆ ಕೋಳಿ ಅಂಗಡಿ ಮಾಡಲು ಹೆಡ್ ಕಾನ್ಸ್​ಟೇಬಲ್​ ಅರುಣ್​​ ಬಳಿ ಸಾಲ ಪಡೆದಿದ್ದರು. 80 ಸಾವಿರ ರೂ ಹಣಕ್ಕೆ ವಾರಕ್ಕೆ 7,800 ರೂ. ಬಡ್ಡಿ ವಸೂಲಿ ಮಾಡಲಾಗುತ್ತಿತ್ತು. ತಿಂಗಳಿಗೆ 28 ಸಾವಿರ ರೂ. ಬಡ್ಡಿ ಕಟ್ಟಿ ತನ್ಜೀರ್ ಹೈರಾಣಾಗಿದ್ದರು. 80 ಸಾವಿರ ರೂ.ಗೆ 2 ಲಕ್ಷ ರೂ ಬಡ್ಡಿ ಕಟ್ಟಿದ್ರೂ ಬಿಡದೆ ಕಿರುಕುಳ ನೀಡುತ್ತಿರುವುದಾಗಿ ತನ್ಜೀರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಾಲಗಾರನ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ: ಡೆತ್​ನೋಟ್​​ನಲ್ಲಿ ಸ್ಫೋಟಕ ಅಂಶ ಬಯಲು

ಇದನ್ನೂ ಓದಿ
ಶಿವಮೊಗ್ಗದಲ್ಲಿ ಹೆಚ್ಚಾದ ಓಪನ್ ರೌಡಿಸಂ: ದೇವಸ್ಥಾನದಲ್ಲಿ ಮಚ್ಚು ಪೂಜೆ
ಬೆಂಗಳೂರು ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ
ಗದಗನಲ್ಲಿ ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ, 9 ಮಂದಿ ವಶಕ್ಕೆ
ಕುಟುಂಬದ ಮನೆಯನ್ನು ಸೀಜ್ ಮಾಡಿರುವ ಎಎಮ್​ಒಎಮ್ ಫೈನಾನ್ಸ್ ಸಂಸ್ಥೆ

ಅರುಣ್​ಗೆ ಬಡ್ಡಿ ಕಟ್ಟುವುದಕ್ಕಾಗಿ ತನ್ಜೀರ್ ವಕೀಲ ದುಶ್ಯತ್ ಸೇರಿ ಹಲವರಿಂದ ಸಾಲ ಪಡೆದಿದ್ದರು. ಎರಡು ವಾರದಿಂದ ಬಡ್ಡಿ ಕಟ್ಟದಿದ್ದಕ್ಕೆ ತನ್ಜೀರ್​ಗೆ ಕಿರುಕುಳ ನೀಡಲಾಗಿದೆ. ಒಟ್ಟು 5 ಲಕ್ಷ ರೂ. ಸಾಲ ಮಾಡಿದ್ದ ತನ್ಜೀರ್​​, ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ತನ್ಜೀರ್​ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೀಟರ್ ಬಡ್ಡಿ ಆರೋಪ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಹೊರಡಿಸಿದರು ಕೂಡ ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್​ಗಳ ಕಿರುಕುಳ ಮಾತ್ರ ಇನ್ನೂ ನಿಂತಿಲ್ಲ. ಅದೆಷ್ಟೋ ಬಡ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.

ಇದನ್ನೂ ಓದಿ: TV9 ಬಿಗ್ ಇಂಪ್ಯಾಕ್ಟ್: ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಗೆ ಬ್ರೇಕ್, 19 ಜನರ ಸೆರೆ

ರಜೆ ದಿನಗಳಲ್ಲಿ ಮತ್ತು ಹಬ್ಬಹರಿದಿನಗಳಲ್ಲಿ ಸಹ ಮನೆಗೆ ಬಂದು‌ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಿದ್ದರು. ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನೂ ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಬಡ ಜನರಿಗೆ ಕಿರುಕುಳ ನೀಡಿದಕ್ಕೆ ಇಬ್ಬರು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಜೈಲು ಪಾಲಾಗಿರುವಂತಹ ಘಟನೆ ನಡೆದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.