AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 ಬಿಗ್ ಇಂಪ್ಯಾಕ್ಟ್: ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಗೆ ಬ್ರೇಕ್, 19 ಜನರ ಸೆರೆ

ಯಾದಗಿರಿ ಉತ್ತರ ಕನ್ನಡದ ಮುಂಡಗೋಡ ತಾಲೂಕಿನಲ್ಲಿ 3 ಕೋಟಿಗೂ ಅಧಿಕ ರೂಪಾಯಿಗಳ ಮೀಟರ್ ಬಡ್ಡಿ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಪರಾರಿಯಾಗಿದ್ದ ಮುಖ್ಯ ಆರೋಪಿ ಸೇರಿದಂತೆ 19 ಜನರನ್ನು ಬಂಧಿಸಲಾಗಿದೆ. ಈ ದಂಧೆಯಿಂದಾಗಿ ಅನೇಕ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ಜನರು ನಿಟ್ಟುಸಿರುಬಿಟ್ಟಿದ್ದಾರೆ.

TV9 ಬಿಗ್ ಇಂಪ್ಯಾಕ್ಟ್: ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಗೆ ಬ್ರೇಕ್, 19 ಜನರ ಸೆರೆ
TV9 ಬಿಗ್ ಇಂಪ್ಯಾಕ್ಟ್: ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಗೆ ಬ್ರೇಕ್, 19 ಜನರ ಸೆರೆ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Feb 05, 2025 | 6:28 PM

Share

ಉತ್ತರ ಕನ್ನಡ, ಫೆಬ್ರವರಿ 05: ಆ ತಾಲೂಕಿನ ಜನ ಭಾರಿ ಅಮಾಯಕರು, ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾದರೆ ಹಣ ಹೊಂದಿಸುವುದೇ ಅವರಿಗೆ ದೊಡ್ಡ ಸವಾಲ ಆಗಿತ್ತು.‌ ಅದನ್ನೆ ಬಂಡವಾಳ ಮಾಡಿಕೊಂಡಿದ್ದ ಓರ್ವ ವ್ಯಕ್ತಿ, ಕಳೆದ ಮೂರು ವರ್ಷಗಳಿಂದ ಸುಮಾರು 3 ಕೋಟಿ ರೂ ಹೆಚ್ಚು ಸಾಲ ಕೊಟ್ಟಿದ್ದ, ಈತ ಒಮ್ಮೆ ಸಾಲ ಕೊಟ್ಟರೆ ಮೂರು ಪಟ್ಟು ಹಣ ಕಿತ್ಕೊಳ್ತಿದ್ದ. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಮಾಡಿದ ಬೆನ್ನಲ್ಲೇ ಮೀಟರ್ ಬಡ್ಡಿಯ (meter interest) ಜಾಲವನ್ನು ಪೊಲೀಸರು ಭೇದಿಸಿದ್ದು, ಬರೊಬ್ಬರಿ 19 ಜನರನ್ನ ಬಂಧಿಸಿದ್ದಾರೆ.

ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆ ಕಾಟ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಒಂದು ಕಡೆ ಆಗಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆಯ ಕಾಟಕ್ಕೆ ಎಷ್ಟೋ ಜನರು ಊರು ಬಿಟ್ಟಿದ್ದರು. ಈ ಬಗ್ಗೆ ಟಿವಿ9 ವರದಿ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಅಲರ್ಟ್ ಆದ ಜಿಲ್ಲಾಡಳಿತ ನಿಯಮ ಬಾಹಿರ ಮೀಟರ್ ದಂಧೆಗೆ ಕಡಿವಾಣ ಹಾಕಲು ಪ್ಲಾನ್ ಮಾಡಿದ್ದರು. ಸ್ಥಳಿಯ ಶಾಸಕರ ಸಹಕಾರದ ಮೇರೆಗೆ, ಪ್ಲಾನ್ ಮಾಡಿದ ಉತ್ತರ ಕನ್ನಡ ಎಸ್ ಪಿ ಎಂ. ನಾರಾಯಣ್, ಜಿಲ್ಲೆಯ ಪ್ರತಿ ಮುಖ್ಯ ರಸ್ತೆಗೂ ಸುಮಾರು 100 ಕ್ಕೂ ಹೆಚ್ಚು ತಂಡಗಳ ಮೂಲಕ ಚೆಕ್ ಪೊಸ್ಟ್ ಹಾಕಿದ್ದರು. ಇತ್ತ ಮುಂಡಗೋಡ ತಾಲೂಕಿಗೆ ಅಂತಾ ಪ್ರತ್ಯೇಕ 21 ತಂಡಗಳ ಮೂಲಕ, ಮೀಟರ್ ಬಡ್ಡಿ ದಂಧೆಕೋರರ ಮನೆ ಹಾಗೂ ಹೊಟೇಲ್ ಮೇಲೆ ದಾಳಿ ಮಾಡಿ, ಎಣ್ಣೆ ಮತ್ತಿನಲ್ಲಿ ಮಲಗಿದ್ದ 17 ಜನರನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಕೋರನನ್ನೇ ಕಿಡ್ನಾಪ್! 1 ಲಕ್ಷಕ್ಕೆ ತಿಂಗಳಿಗೆ 30 ಸಾವಿರ ರೂ. ಬಡ್ಡಿ ಪಡೆಯುತ್ತಿದ್ದ ಆಸಾಮಿ

ಇನ್ನೂ ಪ್ರಮುಖ ಕಿಂಗ್ ಪಿನ್ ಆಗಿದ್ದ ಜಮೀರ್ ದರ್ಗಾವಾಲೆ, ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿ ಆಗಿದ್ದ ವಿಷಯ ಎಸ್ ಪಿ ನಾರಾಯಣ ಕಣ್ಣು ಕೆಂಪಗಾಗಿಸಿತ್ತು. ಕಾರ್ಯಾಚಾರಣೆ ವಿಫಲ ಆಗಬಾರದೆಂದು, ಸ್ವತಃ ಎಸ್ ಪಿ ನಾರಾಯಣ ಕೂಡ ಮುಂಡಗೋಡ, ಯಲ್ಲಾಪುರ, ಹಳಿಯಾಳ ತಾಲೂಕಿನಲ್ಲಿ ಸೈಲೆಂಟ್ ಆಗಿ ಗಸ್ತು ಹಾಕಿ ಪೊಲೀಸರ ಕಾರ್ಯವೈಖರಿಯನ್ನ ಗಮನಿಸಿದರು. ಅಲ್ಲದೆ ಬಂಧನ ಆಗಿದ್ದ 17 ಜನರನ್ನ ವಿಚಾರಣೆ ಮಾಡಿ ಮೀಟರ್ ಬಡ್ಡಿ ದಂಧೆಯ ಸಂಪೂರ್ಣ ಜಾಲದ ಮಾಹಿತಿ ಕಲೆ ಹಾಕಿದ್ದರು. ಕೂಡಲೆ ಜಮೀರ್ ಬಗ್ಗೆ ಸುಳಿವು ಸಿಕ್ಕ ತಕ್ಷಣ ಅಲರ್ಟ್ ಆದ ಎಸ್ ಪಿ.ಮಾಹಿತಿ ಬಂದ ಕಡೆಗೆಲ್ಲ ಪೊಲೀಸರನ್ನ ಕಳುಹಿಸಿ ಕಾರ್ಯಾಚರಣೆ ತಿವ್ರಗೊಳಿಸಿದ್ರು. ಪೊಲೀಸರ ಕಾರ್ಯಾಚರಣೆಯಿಂದ ಕಂಗೆಟ್ಟ ಜಮೀರ್, ತಾನೆ ಸ್ವತಃ ಬೆಳಿಗ್ಗೆ 11 ಗಂಟೆಗೆ ಮುಂಡಗೋಡ ಕೊರ್ಟ್ ಮುಂದೆ ಬಂದು ಹಾಜರಾಗಿದ್ದಾನೆ.

ಅಷ್ಟಕ್ಕೂ ಈ ಜಮೀರ್ ನಡೆಸುವ ಬಡ್ಡಿ ದಂಧೆ ಮಾಹಿತಿ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ.‌ ಮೊದಲಿಗೆ ಮರಳು ದಂಧೆ ಸೇರಿದಂತೆ ಇನ್ನಿತರ ಸಣ್ಣ ಪುಟ್ಡ ದಂಧೆ ಮಾಡುತ್ತಾ ಹಣ ಗಳಿಸಿದ್ದ ಜಮೀರ್ ಬಳಿ ಸಾಲ ಪಡೆಯಲು ಜನ ಬರುತ್ತಿದ್ದರು. ಏನನ್ನೂ ಅಡ ಇಟ್ಟಿಕೊಳ್ಳದೆ ಸಾಲ ಕೊಡುತ್ತಿದ್ದ ಜಮೀರ್ ಬಗ್ಗೆ ತಾಲೂಕಿನಾದ್ಯಂತ ಭಾರಿ ಚರ್ಚೆ ಆಗಲು ಆರಂಭವಾಯ್ತು. ಇದನ್ನೆ ಬಂಡವಾಳ ಮಾಡಿಕೊಂಡ ಜಮೀರ್ ತಾಲೂಕಿನಾದ್ಯಂತ ಸುಮಾರು 3 ಕೋಟಿಗೂ ಹೆಚ್ಚು ಸಾಲವನ್ನ ಕೊಟ್ಟಿದ್ದಾನೆ.‌

ಇನ್ನೂ ಈತ ಬಡ್ಡಿ ವಸೂಲಿ ಮಾಡಿಕೊಳ್ಳಲು ಸುಮಾರು ಜನ ಹುಡುಗರ ಗ್ಯಾಂಗ್ ಕಟ್ಕೊಂಡಿದ್ದ. ಅದೇ ಗ್ಯಾಂಗ್ ಮೂಲಕ ಜನರಿಗೆ ಸಾಲ ಕೊಟ್ಟು ತಿಂಗಳಿಗೆ 30% ಪ್ರತಿಶತದಂತೆ ಬಡ್ಡಿ ವಸೂಲಿ ಮಾಡಿಸುತ್ತಿದ್ದ. ಇನ್ನೊಂದು ವಿಷಯ ಅಂದರೆ ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕಿನಲ್ಲಿನ ಯಾವುದೇ ಬಡ ಕುಟುಂಬದ ಯುವಕ, ಕ್ರಿಮಿನಲ್ ಕೇಸ್​ನಲ್ಲಿ ಜೈಲು ಸೇರಿದರೆ ಆತನಿಗೆ ಹಣಕಾಸಿನ ಸಹಾಯ ಮಾಡಿ ಬೇಲ್ ಕೊಡಿಸುತ್ತಿದ್ದ.

ಮೀಟರ್ ಬಡ್ಡಿ ದಂಧೆಗೆ ಯುವಕರ ಬಳಕೆ

ಜೈಲಿನಿಂದ ಮನೆವರೆಗೂ ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಗುತಿತ್ತು. ಬಳಿಕ ಅದೆ ಯುವಕನನ್ನ‌ ಮೀಟರ್ ಬಡ್ಡಿ ದಂಧೆಗೆ ಬಳಸಿಕೊಳ್ಳುತ್ತಿದ್ದ. ಹೀಗೆ ಸುಮಾರು ಜನ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಅಮಾಯಕ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದ. ಪಡೆದ ಅಸಲು ಸಮೇತ ಬಡ್ಡಿಯನ್ನ ಮರುಪಾವತಿ ಮಾಡಲು ಬಂದರೆ ಅವರಿಂದ ಕೇವಲ ಬಡ್ಡಿಯನ್ನ ಪಡೆದು ಮುಂದಿನ ತಿಂಗಳು ಮತ್ತೆ ನನಗೆ ಬಡ್ಡಿ ಕೋಡಬೇಕು ಅಂತಾ ಗದಿರಿಸುತ್ತಿದ್ದ.‌ ಇನ್ನೂ ಈತನ ವ್ಯವಹಾರ ಎಲ್ಲವೂ ಮೊಬೈಲ್​ನಲ್ಲಿ ಟೈಪ್ ಮಾಡಿ ಹುಡುಗರಿಗೆ ಕಳಿಸುತ್ತಿದ್ದ, ಯಾವುದೇ ಬುಕ್ ಬಳಸದೆ ಮೊಬೈಲ್​ನಲ್ಲಿ ಸಾಫ್ಟ್ ಕಾಫಿ ಮೂಲಕ ಒಬ್ಬೊಬ್ಬ ಹುಡುಗನಿಗೆ ಬಡ್ಡಿ ದಂಧೆಯ ಟಾರ್ಗೆಟ್​ ಪ್ರತಿ ವಾರ ಕೊಡುತ್ತಿದ್ದ. ಯಾವಾಗ ಪೊಲೀಸರು ಅಲರ್ಟ್ ಆಗಿದ್ದಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಅನೇಕ ಹುಡುಗರು ತಮ್ಮ ಫೋನ್​ನಲ್ಲಿದ್ದ ಸಾಫ್ಟ್ ಕಾಫಿಗಳನ್ನ ಡಿಲೀಟ್ ಮಾಡಿದ್ದರು. ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತುದ್ದಂತೆ ಮೊಬೈಲ್ ರಿಟ್ರಿವ್ ಮಾಡಿಸಿಕೊಂಡು ದಾಖಲೆಗಳನ್ನ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಹೊನ್ನಾವರ: ಗೋಮಾಂಸ ಕದ್ದೊಯ್ದ ಕೇಸ್​ಗೆ ತಿರುವು, ವರ್ಷದಲ್ಲಿ 100 ಹಸುಗಳ ಕದ್ದು ಮಾರಾಟ ಮಾಡಿದ ಶಂಕೆ

ಕಳೆದ ಎರಡ್ಮೂರು ವರ್ಷಗಳಿಂದ ಮೀಟರ್ ದಂಧೆಯಿಂದ ಕಂಗಾಲಾಗಿದ್ದ. ಮುಂಡಗೋಡ ತಾಲೂಕಿನ ಜನ ಈಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಇಷ್ಟಕ್ಕೆ ಸುಮ್ಮನಾಗದ ಜಿಲ್ಲೆಯ ಪೊಲೀಸರು, ಹಳಿಯಾಲ ಹಾಗೂ ಮುಂಡಗೋಡ ತಾಲೂಕಿನ ಮೀಟರ್ ಬಡ್ಡಿ ದಂಧೆಕೊರರ ಮೇಲೆ ಬಲೆ ಬಿಸಲು ಮುಂದಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.